ನ್ಯೂಜ್ ಡೆಸ್ಕ್:ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸರ್ಕಾರದ ನೂತನ ಸಚಿವರಾಗಿ ಇಂದು 24 ಮಂದಿಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಬಣದ ಭೈರತಿ ಸುರೇಶ್,ಕೆ.ವೆಂಕಟೇಶ್, ಕೃಷ್ಣ ಬೈರೇಗೌಡ, ಡಾ.ಎಚ್.ಸಿ ಮಹದೇವಪ್ಪ,ಶಿವರಾಜ ತಂಗಡಗಿ, ನಾಗೇಂದ್ರ,ಕೆ.ಎನ್. ರಾಜಣ್ಣ, ಮಂಕಾಳ ವೈದ್ಯಗೆ,ದೊರೆತರೆ
ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಚಲುವರಾಯಸ್ವಾಮಿ, ಡಾ.ಎಂ.ಸಿ ಸುಧಾಕರ್, ಪಿ.ನರೇಂದ್ರಸ್ವಾಮಿ,ಎಚ್.ಕೆ. ಪಾಟೀಲ್,ಮಧು ಬಂಗಾರಪ್ಪ,ಡಿ.ಸುಧಾಕರ್, ಭೋಸರಾಜು ಅವರಿಗೆ ಸಚಿವ ಸ್ಥಾನ ದೊರೆತಿದೆ
ಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರಾಗಿ ಹೆಚ್.ಕೆ.ಪಾಟೀಲ್(ಕಾನೂನು ಮತ್ತು ಸಂಸದೀಯ),ಆರಂಭಗೊಂಡು ಬೆಂಗಳೂರು ಬ್ಯಾಟರಾಯನಪುರದ ಕೃಷ್ಣ ಭೈರೇಗೌಡ,ನಾಗಮಂಗಲದ ಎನ್. ಚಲುವರಾಯಸ್ವಾಮಿ, ಪಿರಿಯಾಪಟ್ಟಣದ ಕೆ.ವೆಂಕಟೇಶ್, ಟಿ.ನರಸಿಪುರದ ಡಾ.ಹೆಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಮಧುಗಿರಿಯ ಕೆ.ಎನ್.ರಾಜಣ್ಣ, ಬೆಂಗಳೂರು ಗಾಂಧಿನಗರದ ದಿನೇಶ್ ಗುಂಡೂರಾವ್,ಶರಣಬಸಪ್ಪ ದರ್ಶನಾಪುರ್,ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ದಾವಣಗೆರೆಯ ಎಸ್.ಎಸ್.ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಭಟ್ಕಳದ ಮಂಕಾಳು ವೈದ್ಯ, ಸಂತೋಷ್ ಲಾಡ್, ಎನ್ ಎಸ್ ಬೋಸೆರಾಜು, ಬೆಂಗಳೂರು ಹೆಬ್ಬಾಳದ ಬೈರತಿ ಸುರೇಶ್, ಸಾಗರದ ಮಧು ಬಂಗಾರಪ್ಪ,ಚಿಂತಾಮಣಿಯ ಎಂ.ಸಿ.ಸುಧಾಕರ್, ಬಿ.ನಾಗೇಂದ್ರ,ಬೆಳಗಾವಿ ಗ್ರಾಮಾಂತರದ ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್, ಡಿ.ಸುಧಾಕರ್.
ಕನ್ನಡಿಗರ ವಿರೋದದ ನಡುವೆಯೂ ಇಂಗ್ಲೀಷಿನಲ್ಲಿ ಪ್ರಮಾಣವಚನ
ಬೆಂಗಳುರು ಚಾಮರಜಪೇಟೆ ಶಾಸಕ ಜಮೀರ್ ಖಾನ್ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿದ ಬಗ್ಗೆ ಕನ್ನಡ ಸಂಘ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಆದರೂ ರಹೀಂ ಖಾನ್ ಅವರು ಇಂದು ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕೋಲಾರಕ್ಕೆ ದೊರೆಯದ ಮಂತ್ರಿ ಸ್ಥಾನ
ಬೆಂಗಳೂರಿಗೆ ಹತ್ತಿರ ಇದ್ದರು ಹಿಂದುಳಿದ ಜಿಲ್ಲೆ ಎನ್ನುವ ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದೆ ಇರುವ ಬಗ್ಗೆ ಜನರು ತೀವ್ರ ಅಸಮಧಾನ ಹೊರಹಾಕಿದ್ದಾರೆ. ಆರು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ ಅವರಲ್ಲಿ ಬಂಗಾರಪೇಟೆ ಶಾಸಕ ನಾರಯಣಸ್ವಾಮಿ ಹ್ಯಾಟ್ರಿಕ್ ಬಾರಿಸಿ ಮೂರನೆ ಬಾರಿಗೆ ಆಯ್ಕೆಯಾಗಿದ್ದರೆ ಮಾಲೂರು ನಂಜೇಗೌಡ ಕೆಜಿಎಫ್ ರೂಪಕಲ ಎರಡನೆ ಬಾರಿಗೆ ಮರು ಆಯ್ಕೆಯಾಗಿದ್ದಾರೆ ಕೋಲಾರದ ಕೊತ್ತೂರುಮಂಜುನಾಥ್ ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಇಷ್ಟೆಲ್ಲ ಜನ ಬೆಂಬಲ ಇದ್ದರು ಕೋಲಾರಕ್ಕೆ ಸಚಿವ ಸ್ಥಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಕೂಗು ಎಲ್ಲಡೆ ಕೇಳಿಬರುತ್ತಿದೆ