- ಕೊನೆಗೂ ಎಚ್ಚೆತ್ತ ಪುರಸಭೆ
- ಫುಟ್ ಪಾತ್ ಅತಿಕ್ರಮ ತೆರವು
- ಅಂಗಡಿ ಮಾಲಿಕರ ಆಕ್ರೋಶ
ಶ್ರೀನಿವಾಸಪುರ :ಪಟ್ಟಣದಲ್ಲಿ ಇಂದು ಪುರಸಭೆ ಸಿಬ್ಬಂದಿ ಬೆಳ್ಳಂಬೆಳಗ್ಗೆ ಫುಟ್ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿತು. ಸಾರ್ವಜನಿಕರು ಓಡಾಡುವ ಫುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡು ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟಿದ್ದ ಅಂಗಡಿಗಳನ್ನು ಹಾಗು ಹೋಟೆಲ್ ಗಳನ್ನು ಇಂದು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.
ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿಯಿಂದ ರಸ್ತೆ ಬದಿಯಲ್ಲಿ ಬಾಲಕರ ಕಾಲೇಜು ವರಿಗೂ ಇದ್ದ ಅಂಗಡಿಗಳನ್ನ ತೆರವುಗೊಳಿಸಲಾಯಿತು.
ಜನದಟ್ಟನೆ ಇದ್ದು ಆಂಧ್ರಪ್ರದೇಶ ಸೇರಿದಂತೆ ಉತ್ತರ ಭಾಗದ ಹಳ್ಳಿಗಳಿಗೆ ಹೋಗುವ ಬಸ್ಸುಗಳು ಇತರೆ ವಾಹನಗಳು ಓಡಾಟದಿಂದ ವಾಹನ ಸಂಚಾರ ಹೆಚ್ಚಾಗಿ ಇರುವ ರಸ್ತೆಯಾಗಿ ಗುರುತಿಸಿಕೊಂಡಿರುವ ಪಟ್ಟಣದ ಬಸ್ ನಿಲ್ದಾಣದಿಂದ ಸಾಗುವ ಪ್ರಮುಖ ರಸ್ತೆಯಾದ ಎಂ ಜಿ ರಸ್ತೆ ಬದಿ ಬಾಲಕೀಯರ ಕಾಲೇಜು ಆವರಣಕ್ಕೆ ಹೊಂದಿಕೊಂಡು ಸಾಗುವ ಚರಂಡಿ ಹಾಗು ಫುಟ್ ಪಾತ್ ಮೇಲೆ ಯಾರ ಅನುಮತಿ ಇಲ್ಲದೆ ಬಾರಿ ಗಾತ್ರದ ಬಂಡೆಗಳನ್ನು ಹಾಸಿ ದೊಡ್ಡ ಗಾತ್ರದ ತಗಡಿನ ಅಂಗಡಿಗಳನ್ನು ಇಟ್ಟುಕೊಂಡು ಬೀದಿ ಬದಿ ವ್ಯಾಪಾರಸ್ಥರ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ಇಂದು ತೆರವು ಮಾಡಿದರು.
ಅಕ್ರಮವಾಗಿ ಅಂಗಡಿಗಳನ್ನು ಇಟ್ಟುಕೊಂಡಿರುವುದರಿಂದ ಇಲ್ಲಿ ಚರಂಡಿ ನೀರು ಸರಗವಾಗಿ ಸಾಗದೆ ಗಬ್ಬು ನಾರುತ್ತಿದ್ದು ಬಾಲಕೀಯರ ಕಾಲೇಜು ವಿದ್ಯಾರ್ಥಿಗಳಿಗೂ ಸಾಕಷ್ಟು ತೊಂದರೆ ಆನುಭವಿಸುತ್ತಿದ್ದರು ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಇಂದು ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ರಸ್ತೆ ತಡೆ ನಡೆಸಿ ಪ್ರತಿಭಟನೆ
ತೆರವು ಕಾರ್ಯಚರಣೆ ಸಂದರ್ಭದಲ್ಲಿ ಅಂಗಡಿ ಮಾಲೀಕರು ಮತ್ತು ಪುರಸಭೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಅಂಗಡಿ ಮಾಲಿಕರು ಬೆಸ್ಕಾಂ ಕಚೇರಿ ಮುಂಬಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು ಇದರಿಂದ ಆಂಧ್ರಪ್ರದೇಶಕ್ಕೆ ಹೋಗಬೇಕಿದ್ದ ಬಸ್ಸುಗಳಿಗೆ ತೊಂದರೆಯಾಗಿ ಕೆಲ ಹೊತ್ತು ಬಸ್ಸುಗಳು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು ನಂತರ ಪೊಲೀಸರು ಆಗಮಿಸಿ ಪ್ರತಿಭಟನೆ ಕಾರರನ್ನು ಚದುರಿಸಿ ವಾಹನ ಒಡಾಟಕ್ಕೆ ಅನವು ಮಾಡಿಕೊಟ್ಟರು.
ಎಲ್ಲಾ ರಸ್ತೆಗಳ ಅತಿಕ್ರಮ ತೆರವು ಗೊಳಿಸಿ
ಪಟ್ಟಣದಲ್ಲಿ ಇತರೆ ರಸ್ತೆಗಳು ಅತಿಕ್ರಮವಾಗಿದ್ದು ವಿವೇಕಾನಂದ ರಸ್ತೆ ರಾಮಕೃಷ್ಣರಸ್ತೆ ರಾಜಾಜಿರಸ್ತೆ,ಚಿಂತಾಮಣಿ ರಸ್ತೆ ಸೇರಿದಂತೆ ಎಂ.ಜಿ.ರಸ್ತೆಯ ಬಜಾರ್ ಬಿದಿಯಲ್ಲೂ ಫುಟ್ ಪಾತ್ ಸಾಕಷ್ಟು ಮಟ್ಟದಲ್ಲಿ ಅತಿಕ್ರಮವಾಗಿದ್ದು ಈ ಕೂಡಲೆ ಕಾರ್ಯಚರಣೆ ನಡೆಸಿ ತೆರವು ಮಾಡಿ ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದರು.
ನಾಲ್ಕು ದಿನದಲ್ಲಿ ಕಾಲಿ ಮಾಡಿ
ತೆರವುಗೊಳಿಸುವ ಕಾರ್ಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್ ಕೆಲ ಅಂಗಡಿಗಳಲ್ಲಿ ಸಾಕಷ್ಟು ವಸ್ತುಗಳು ಇದ್ದು ಅವುಗಳನ್ನು ಕಾಲಿ ಮಾಡಿಕೊಂಡು ಅವರೆ ಅತಿಕ್ರಮವನ್ನು ತೆರವು ಮಾಡಲು ನಾಲ್ಕು ದಿನಗಳ ಕಾಲವಕಾಶ ನೀಡಿದ್ದು ನಿಗದಿತ ಸಮಯದಲ್ಲಿ ಕಾಲಿ ಮಾಡುವಂತೆ ಹೇಳಿದರು.