ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದಲ್ಲಿ ಹೊಸ ಜಿಲ್ಲೆಗಳ ರಚನೆ ಕುರಿತಂತೆ ಆಂಧ್ರ ಸಿಎಂ ಚಂದ್ರಬಾಬು ಪ್ರತಿಕ್ರಿಯೆ ನೀಡಿದ್ದು ಆಂಧ್ರಪ್ರದೇಶದಲ್ಲಿ ಒಟ್ಟು 30 ಜಿಲ್ಲೆಗಳನ್ನಾಗಿಸುವ ಕುರಿತು ಕೇಳಿಬರುತ್ತಿರುವ ಪ್ರಚಾರದಲ್ಲಿ ವಾಸ್ತವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅದರಲ್ಲಿ ಪ್ರಮುಖವಾಗಿ ಮದನಪಲ್ಲಿ ಜಿಲ್ಲೆ ಮಾಡುವ ಕುರಿತಾಗಿ ಆಂಧ್ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಭರವಸೆ ನೀಡಲಾಗಿತ್ತು ಆದರೆ ಜಿಲ್ಲೆಯ ರಚನೆ ಈಗಲೆ ಇಲ್ಲಾ ಎಂದಿರುತ್ತಾರೆ.
ಪುಂಗನೂರು, ಮದನಪಲ್ಲಿ, ತಂಬಳ್ಳಪಲ್ಲಿ, ಪೀಲೇರು ಸೇರಿದಂತೆ ಮದನಪಲ್ಲಿ ಜಿಲ್ಲೆಯಾಗಲಿದೆ ಎಂಬ ಮಾತು ಕೇಳಿಬಂದಿತ್ತು.
ಮದನಪಲ್ಲಿ ಜಿಲ್ಲೆಯಾದರೆ ಕರ್ನಾಟಕದ ಗಡಿತಾಲೂಕುಗಳ ಅಭಿವೃದ್ಧಿಗೆ ಸಹಕಾರಿ
ಮದನಪಲ್ಲಿ ನಗರ ಆಂಧ್ರದ ರಾಯಲ ಸೀಮಾ ಪ್ರಾಂತ್ಯದ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರಗಳಲ್ಲಿ ಪ್ರಮುಖವಾಗಿದ್ದು ರೀಟೇಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು ವ್ಯವಹಾರಿಕವಾಗಿ ಸಾಕಷ್ಟು ಬೆಳೆದಿರುವ ಮದನಪಲ್ಲಿ ನಗರದಲ್ಲಿ ಬೆಂಗಳೂರು ರಿಯಲ್ ಎಸ್ಟೆಟ್ ಭೂಮ್ ಪ್ರಭಾವ ಬೀರಿರುವುದು ಸುಳ್ಳಲ್ಲ,ಬೆಂಗಳೂರು ಶೈಲಿಯಲ್ಲಿ ಸುಸಜ್ಜಿತ ಬಡಾವಣೆಗಳನ್ನು ಹೊಂದಿರುವ ನಗರದಲ್ಲಿ ಸಾಕಷ್ಟು ಮಟ್ಟದಲ್ಲಿ ಹೂಡಿಕೆಯಾಗಿದೆ ಎನ್ನಲಾಗಿದ್ದು ಮದನಪಲ್ಲಿ ಜಿಲ್ಲೆಯಾದರೆ ಗಡಿಭಾಗದಲ್ಲಿರುವ ಕರ್ನಾಟಕದ ಶ್ರೀನಿವಾಸಪುರ ಹಾಗು ಚಿಂತಾಮಣಿ ತಾಲೂಕುಗಳು ವಾಣಿಜ್ಯ ಸರಕು ಸಾಗಾಣಿಕೆ,ಸಾರ್ವಜನಿಕ ವಾಹನ ಸಂಚಾರ ಮತ್ತು ರಸ್ತೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುವ ಮಾತು ಮೊದಲಿಂದಲೂ ಕೇಳಿಬರುತ್ತಿದೆ.
ಪ್ರವಾಸೊದ್ಯದಲ್ಲೂ ಮದನಪಲ್ಲಿ ಮುಂಚೂಣಿ
ಮದನಪಲ್ಲಿ ಕೇಂದ್ರಿಕೃತವಾಗಿ ಪ್ರವಾಸೊದ್ಯದಲ್ಲಿ ಮುಂಚೂಣಿಯಲ್ಲಿದೆ ಬ್ರಿಟಿಷರ ಅನ್ವೆಷಣೆಯಲ್ಲಿ ಹೊರ ಬಂದ ಹಾರ್ಸಲಿ ಹೀಲ್ಸ್ ಬೆಟ್ಟ ಬಯಲು ಸೀಮೆಯ ಊಟಿ ಎಂದೆ ಖ್ಯಾತಿ,ಅಲ್ಲಿರುವ ಮತ್ತೊಂದು ವಿಶೇಷ ಎಂದರೆ ಖ್ಯಾತ ಚಿಂತನಕಾರ ಜಿಡ್ಡುಕೃಷ್ಣಮೂರ್ತಿ ಸ್ಥಾಪಿಸಿರುವ Rishi Valley School ಇದೊಂದು ಅಂತರಾಷ್ಟ್ರೀಯ ಶಾಲೆ 375 ಎಕರೆಗಳಷ್ಟು ವಿಶಾಲವಾದ ಪ್ರಕೃತಿಯ ನಡುವಿನ ಬೆಟ್ಟಸಾಲುಗಳ ಪ್ರದೇಶದಲ್ಲಿದೆ ಇಂದಿಗೂ ತನ್ನದೆ ಆದ ವೈಶಿಷ್ಟಗಳನ್ನು ಉಳಸಿಕೊಂಡಿದೆ.ನೇಕಾರರಿಗೆ ಬದುಕು ಕಟ್ಟಿಕೊಟ್ಟಿರುವ ಮದನಪಲ್ಲಿ ರೇಷ್ಮೆ ಬಟ್ಟೆಗಳಿಗೂ ಖ್ಯಾತಿ ಪಡೆದಿದ್ದು ನಿರುಗುಟ್ಟುವಾರಿಪಲ್ಲಿಯಲ್ಲಿ ನೂರಾರು ಸಂಕ್ಯೆಯಲ್ಲಿ ರೇಷ್ಮೆ ವಸ್ತ್ರಗಳ ಅಂಗಡಿಗಳು ಇದೆ. ಮದನಪಲ್ಲಿ ವ್ಯಾಪ್ತಿಯಲ್ಲಿನ ಬೋಯಿಕೊಂಡಗಂಗಮ್ಮ ದೇವಾಲ ಖ್ಯಾತ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದ ಭಕ್ತರೆ ಅಗಮಿಸುವುದು ವಿಶೇಷ.
ಶ್ರೀನಿವಾಸಪುರ-ಮದನಪಲ್ಲಿ ರೈಲು ಮಾರ್ಗದ ದಶಕಗಳ ಕನಸು ಈಡೇರಿಲ್ಲ
ಶ್ರೀನಿವಾಸಪುರ-ಮದನಪಲ್ಲಿ ರೈಲು ಮಾರ್ಗದ ಬಗ್ಗೆ ದಶಕಗಳಿಂದ ಕೇಳಿ ಬರುತ್ತಿದೆ ಆದರೂ ಇದುವರಿಗೂ ಕಾರ್ಯಗತವಾಗಿಲ್ಲ ಈ ಮಾರ್ಗಕ್ಕೆ ದೇವೇಗೌಡರು ಪ್ರಧಾನಿಯಾಗಿದ್ದಾಗಲೆ ಅಸ್ತು ಎನ್ನಲಾಗಿತ್ತು ಇದುವರಿಗೂ ಇದಕ್ಕೆ ಜೀವ ಬಂದಿಲ್ಲ ಕಳೆದ ಹತ್ತು ವರ್ಷಗಳ ಹಿಂದೆ ಸರ್ವೆ ಕಾರ್ಯ ಸಹ ಮುಗಿದಿದೆ ಆದರೆ ಯಾವುದೆ ಫಲಿತಾಂಶ ಕಾಣದಿರುವುದು ದುರಂತ ಎನ್ನಬಹುದು.