ನ್ಯೂಜ್ ಡೆಸ್ಕ್: ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮಾಹನಗರದಲ್ಲಿ ಗ್ಯಾಂಗ್ ಸ್ಟಾರ್ ಗಳು ಬಿಟ್ಟುಬಿಡದಂತೆ ಒಂದಲ್ಲ ಒಂದು ರೀತಿಯಲ್ಲಿ ಮುಂಬೈನಲ್ಲಿನ ಸೆಲೆಬ್ರಿಟಿಗಳು,ಬಾಲಿವುಡ್ ಸೆಲೆಬ್ರಿಟಿಗಳನ್ನು ಕಾಡುವುದು ರಾಜಕೀಯ ಮುಖಂಡರನ್ನು ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತ ಬೆದರಿಕೆಗಳು ಒಡ್ಡುತ್ತ ಅವರ ನೆಮ್ಮದಿಯನ್ನು ಹಾಳು ಮಾಡುತ್ತಲೇ ಇರುವುದು ಇಲ್ಲಿ ಸಾಮನ್ಯ ಎನ್ನಬಹುದು.
D ಗ್ಯಾಂಗ್ ದಾವೂದ್ ಇಬ್ರಾಹಿಂ ಹಿಡಿತ ಕಡಿಮೆಯಾಗುತ್ತಿರುವ ಸಮಯದಲ್ಲಿ ಅಂಡರ್ ವರ್ಲ್ಡ್ ಮೇಲೆ ಹಿಡಿತ ಸಾಧಿಸಲು ಹೊಸ ಹೆಸರು ಮುನ್ನಲೆಗೆ ಬಂದಿದೆ ಸದ್ಯ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವುದು ಹೊಸ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಎನ್ನುವ ಖತರ್ನಾಕ್ ಹೆಸರು.
NCP ಮುಖಂಡ ಬಾಬಾ ಸಿದ್ದಿಕಿ ಹತ್ಯೆ
ಮಹಾರಾಷ್ಟ್ರದ NCP ಪಕ್ಷದ ಮುಖಂಡ ಬಾಬಾ ಸಿದ್ದಿಕಿಯನ್ನು ಗುಂಡೇಟು ಹೊಡೆದು ಹತ್ಯೆ ಮಾಡಿದ್ದು ಈ ಹತ್ಯೆ ಇಡೀ ದೇಶವನ್ನು ತಲ್ಲಣ ಗೊಳಿಸಿದೆ ಸಲ್ಮಾನ್ ಖಾನ್ ಜೊತೆ ನಂಟು ಹೊಂದಿದ್ದಕ್ಕೆ ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹತ್ಯೆ ಹೊಣೆಯನ್ನು ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಅಂದಾಜಿಗೂ ನಿಲುಕದ ರೀತಿ ಬೆಳೆದಿರುವ ಬಿಷ್ಣೋಯ್ ಗ್ಯಾಂಗ್ ಭಾರತದಾದ್ಯಂತ ಬಲಿಷ್ಟ ನೆಟ್ವರ್ಕ್ ಹೊಂದಿಯಂತೆ.
ಬಿಷ್ಣೋಯ್ ಗ್ಯಾಂಗ್ 11 ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, 700 ಜನ ಶೂಟರ್ಗಳ ನೆಟ್ವರ್ಕ್ ಪಡೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ ಬಿಷ್ಣೋಯ್ ಗ್ಯಾಂಗ್ ಹಿಂದೆ ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಪೊಲೀಸರು ಬಿದ್ದಿದ್ದು, ಎನ್ಐಎ ಕೂಡ ತನಿಖೆ ನಡೆಸುತ್ತಿದೆ. ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಸೇರಿ 16 ಮಂದಿ ಗ್ಯಾಂಗ್ಸ್ಟರ್ಗಳ ಮೇಲೆ ಯುಎಪಿಎ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದೆ. ತನ್ನ ಚಾರ್ಜ್ಶೀಟ್ನಲ್ಲಿ ಹಲವು ಶಾಕಿಂಗ್ ಅಂಶಗಳನ್ನು ಎನ್ಐಎ ಪ್ರಸ್ತಾಪಿಸಿದ್ದು, ದಾವೂದ್ ಇಬ್ರಾಹಿಂನ D ಕಂಪನಿಯಂತೆ ಬಿಷ್ಣೋಯ್ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಜೈಲಿನಲ್ಲಿ ಇರುವ ಬಿಷ್ಣೋಯ್
2012 ರಿಂದ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅನ್ನು ಭದ್ರತಾ ದೃಷ್ಟಿಯಿಂದ ಮೂರು ಬಾರಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದ್ದು ಭರತಪುರ್ ಜೈಲು, ತಿಹಾರ್ ಜೈಲಿನ ನಂತರ ಈಗ ಅವನನ್ನು ಸಬರಮತಿ ಜೈಲಿಗೆ ಶಿಫ್ಟ್ ಮಾಡಲಾಗಿದಿಯಂತೆ. ಆದರೂ ಅತ್ಯಾಧುನಿಕ VoIP ಟೆಕ್ನಾಲಜಿ ಮೂಲಕ, ತಮ್ಮ ಸಹಚರರನ್ನು ಸಂಪರ್ಕಿಸುವ ಈತ ಮಹಾ ಖತರ್ನಾಕ್ ಎನ್ನುತ್ತದೆ ಪೋಲಿಸ್ ಇಲಾಖೆ.
ದಾವೂದ್ ಇಬ್ರಾಹಿಂ ಮಾದಕವಸ್ತು ಕಳ್ಳಸಾಗಣೆ, ಸುಪಾರಿ ಹತ್ಯೆಗಳು, ಸುಲಿಗೆ ದಂಧೆಗಳ ಮೂಲಕ ತನ್ನ ಡಿ-ಕಂಪನಿಯನ್ನು ವಿಸ್ತರಿಸಿದ್ದ. ಬಳಿಕ ಪಾಕಿಸ್ತಾನಿ ಭಯೋತ್ಪಾದಕರ ಜೊತೆಯೂ ಕೈಜೋಡಿಸಿದ್ದ. ಅದರಂತೆ ಬಿಷ್ಣೋಯ್ ಗ್ಯಾಂಗ್ ಕೂಡ ಸಣ್ಣ ಸಣ್ಣ ಕ್ರೈಂಗಳಿಂದ ಪ್ರಾರಂಭವಾಗಿ, ತನ್ನದೇ ಆದ ದೊಡ್ಡ ಗುಂಪನ್ನು ಕಟ್ಟಿಕೊಂಡಿದ್ದು, ಉತ್ತರ ಭಾರತದಲ್ಲಿ ಪ್ರಾಬಲ್ಯ ಸ್ಥಾಪಿಸಿದಿಯಂತೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಆಪರೇಟ್ ಮಾಡುತ್ತಿದ್ದು ಕೆನಡಾ ಪೊಲೀಸ್ ಹಾಗೂ ಹಲವು ಭಾರತೀಯ ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆಗಿದ್ದಾನಂತೆ. ಬಿಷ್ಣೋಯ್ ಗ್ಯಾಂಗ್ ನಲ್ಲಿರುವ 700ಕ್ಕೂ ಹೆಚ್ಚು ಶೂಟರ್ಗಳಲ್ಲಿ 300 ಮಂದಿ ಪಂಜಾಬ್ನವರು ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ, ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಯುವಕರನ್ನೇ ಟಾರ್ಗೆಟ್ ಮಾಡಿ ತಮ್ಮ ಗ್ಯಾಂಗ್ಗೆ ಸೇರಿಸಿಕೊಳ್ಳುವ ಯುವಕರನ್ನು ಗ್ಯಾಂಗ್ಗೆ ಸೇರಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ಮತ್ತು ಇತರ ಹಲವು ಮಾರ್ಗಗಳನ್ನು ಬಳಸಲಾಗುತ್ತದೆ.
ಬಿಷ್ಣೋಯ್ ಸಾಮ್ರಾಜ್ಯದ ವಿಸ್ತಾರ?
NIA ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಂದು ಕಾಲದಲ್ಲಿ ಪಂಜಾಬ್ಗೆ ಸೀಮಿತವಾಗಿತ್ತು. ಗೋಲ್ಡಿ ಬ್ರಾರ್ ಸಹಾಯದಿಂದ ಲಾರೆನ್ಸ್ ಬಿಷ್ಣೋಯ್ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲಿರುವ ವಿವಿಧ ಗ್ಯಾಂಗ್ಗಳೊಂದಿಗೆ ಮೈತ್ರಿ ಮಾಡಿಕೊಂಡ. ಬಳಿಕ ತನ್ನದೇ ಆದ strong ಬಿಷ್ಣೋಯ್ ಗ್ಯಾಂಗ್ ಎಂಬ ದೊಡ್ಡ ಜಾಲವನ್ನು ರಚಿಸಿದ ಎನ್ನಲಾಗಿದೆ. ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ದಿಲ್ಲಿ, ರಾಜಸ್ಥಾನ, ಜಾರ್ಖಂಡ್ ಸೇರಿ ಉತ್ತರ ಭಾರತದಾದ್ಯಂತ ವ್ಯಾಪಿಸಿದೆ. 2020 – 21ರ ವೇಳೆಗೆ ಬಿಷ್ಣೋಯ್ ಗ್ಯಾಂಗ್ ಸುಲಿಗೆ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿತ್ತು. ಜೊತೆಗೆ ಆ ಹಣವನ್ನು ಹವಾಲಾ ಮಾರ್ಗಗಳ ಮೂಲಕ ವಿದೇಶಕ್ಕೆ ಸಾಗಿಸಿದ್ದಾನಂತೆ.
ಪ್ರಮುಖವಾಗಿ ಬಿಷ್ಣೋಯ್ ಗ್ಯಾಂಗ್ ಯುವಕರನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳಲು ವಿದೇಶಿ ಕನಸನ್ನು ತೋರಿಸಿದಾಗ ಗ್ಯಾಂಗ್ ಸೇರಿಸಿಕೊಳ್ಳುವ ಯುವಕರು ಅಪರಾಧ ಜಗತ್ತಿನಲ್ಲಿ ಸಿಲುಕುತ್ತಾರೆ. ಈ ರೀತಿ ಬಿಷ್ಣೋಯ್ ಗ್ಯಾಂಗ್ ತನ್ನ ಜಾಲವನ್ನು ವಿಸ್ತರಿಸಿದ್ದಾನೆ ಎನ್ನುತ್ತಾರೆ. ಎನ್ಐಎ ಪ್ರಕಾರ, ಪಾಕಿಸ್ತಾನ ಮೂಲದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ ಪಂಜಾಬ್ನಲ್ಲಿ ಸುಪಾರಿ ಹಾಗೂ ಅಪರಾಧ ಚಟುವಟಿಕೆ ನಡೆಸಲು ಬಿಷ್ಣೋಯ್ ಶೂಟರ್ಗಳನ್ನು ಬಳಸುತ್ತಾನೆ ಎನ್ನಲಾಗಿದೆ ಕೆಲಸ ಮುಗಿದ ಬಳಿಕ ಕೆನಡಾ ಅಥವಾ ಅವರಿಗಿಷ್ಟವಾದ ದೇಶಕ್ಕೆ ಕಳುಹಿಸುವುದಾಗಿ ಗ್ಯಾಂಗ್ ಭರವಸೆ ನೀಡುತ್ತದೆ.
ಪೊಲೀಸ್ ಪೇದೆ ಮಗ ಗ್ಯಾಂಗ್ಸ್ಟರ್ ಆಗಿದ್ದೇಗೆ?
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಷ್ಣೋಯ್ ಗ್ಯಾಂಗ್ ಕಟ್ಟಿರುವ ಲಾರೆನ್ಸ್ ಬಿಷ್ಣೋಯ್ ಓರ್ವ ಪೊಲೀಸ್ ಕಾನ್ಸ್ಟೇಬಲ್ ಮಗ. ಹರಿಯಾಣದಲ್ಲಿ ಲಾರೆನ್ಸ್ ಬಿಷ್ಣೋಯ್ ತಂದೆ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. 1993ರಲ್ಲಿ ಪಂಜಾಬ್ನಲ್ಲಿ ಹುಟ್ಟಿದ ಲಾರೆನ್ಸ್ ಬಿಷ್ಣೋಯ್ 2011ರಲ್ಲಿ ಪಂಜಾಬ್ ಯುನಿವರ್ಸಿಟಿ ಕ್ಯಾಂಪಸ್ ಸ್ಟೂಡೆಂಟ್ಸ್ ಕೌನ್ಸಿಲ್ ಅನ್ನು ಸೇರಿದ ಬಳಿಕ ಅಪರಾಧ ಜಗತ್ತಿನ ಕಡೆ ಮುಖ ಮಾಡಿದ. ಅದೇ ವಿಶ್ವವಿದ್ಯಾಲಯದಲ್ಲಿ ಆತನಿಗೆ ಗೋಲ್ಡಿ ಬ್ರಾರ್ ಜೊತೆಗೂಡುತ್ತಾನೆ 12 ರಿಂದ 13 ವರ್ಷದಲ್ಲಿ ಬಿಷ್ಣೋಯ್ ಗ್ಯಾಂಗ್ ಕಟ್ಟಿರುವ ಆತ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾನೆ. 2012ರಿಂದ ಶುರುವಾದ ಬಿಷ್ಣೋಯ್ ಕ್ರೈಂ ಅಧ್ಯಾಯ ಬೆಳೆಯುತ್ತಲೇ ಸಾಗಿದೆ.

ಸಲ್ಮಾನ್ ಖಾನ್ ಟಾರ್ಗೆಟ್!
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಗುರಿ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಆಗಿದ್ದು. NIA ದಾಖಲೆಗಳ ಪ್ರಕಾರ, 1998ರಲ್ಲಿ ಖಾನ್ನಿಂದ ಕೃಷ್ಣಮೃಗವನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಬಯಸಿದ್ದ. ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಮೇಲೆ ಕಣ್ಗಾವಲು ನಡೆಸಲು ಬಿಷ್ಣೋಯ್ ತಮ್ಮ ಸಹಾಯಕ ಸಂಪತ್ ನೆಹ್ರಾ ಎಂಬಾತನ ಮೂಲಕ ಪ್ರಯತ್ನ ನಡೆಸಿದ್ದು ನೆಹ್ರಾ ನನ್ನು ಹರಿಯಾಣ ಪೊಲೀಸ್ ವಿಶೇಷ ಕಾರ್ಯಪಡೆ ಬಂಧಿಸಿದಾಗ ಆ ಯೋಜನೆ ವಿಫಲವಾಯಿತು ಎಂಬುದಾಗಿ ಸ್ವತಹಃ ಬಿಷ್ಣೋಯ್ ಹೇಳಿಕೊಂಡಿದ್ದ.
ಸಲ್ಮಾನ್ ಮೇಲೇಕೆ ಬಿಷ್ಣೋಯ್ ಗೆ ಸಿಟ್ಟು
ಬಿಷ್ಣೋಯ್ ತಂಡಕ್ಕೆ ಸಲ್ಮಾನ್ ಖಾನ್ ಮೇಲೆ ಸಿಟ್ಟಿಗೆ ಕಾರಣ. ಬುಡಕಟ್ಟು ಸಮುದಾಯಕ್ಕೆ ಸೇರಿರುವ ಲಾರೆನ್ಸ್ ಬಿಷ್ಣೋಯ್ ಕುಟುಂಬ, ಕೃಷ್ಣಮೃಗವನ್ನು ದೇವರೆಂದು ಪೂಜಿಸುತ್ತದೆ. ನನ್ನ ದೇವರನ್ನು ಕೊಂದ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬಿಷ್ಣೋಯ್ ಬೆದರಿಕೆ ಹಾಕಿದ್ದ. ಇದಾದ ನಂತರ, ಸಲ್ಮಾನ್ ಖಾನ್ ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು ಸಲ್ಮಾನ್ ಖಾನ್ ಮತ್ತು ಸಿದ್ದಿಕಿ ಆಪ್ತರಾಗಿರುದ್ದರು ಸಿದ್ದಿಕಿಯನ್ನು ಹತ್ಯೆ ಮಾಡುವ ಮೂಲಕ,ಮುಂದಿನ ಟಾರ್ಗೆಟ್ ಎನ್ನುವ ಎಚ್ಚರಿಕೆಯನ್ನು ಬಿಷ್ಣೋಯ್ ಗ್ಯಾಂಗ್ ನೀಡಿದೆ ಎಂದು ಹೇಳಲಾಗುತ್ತಿದೆ.