ಶ್ರೀನಿವಾಸಪುರ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಸುರುಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ ಜನ ಸಾಕಪ್ಪ ಮಳೆ ಎನ್ನುವಂತಾಗಿದೆ. ಮಳೆಯಿಂದ ಮರಗಳು ಹಾಗೂ ಮರದ ಟೊಂಗೆಗಳು ಧರೆಗುರುಳಿವೆ ತಾಡಿಗೋಳ್ ಕ್ರಾಸ್ ನಲ್ಲಿ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ 11 ಕೆ.ವಿ ವಿದ್ಯುತ್ ಕಂಬ ರಸ್ತೆ ಬದಿ ಧರೆಗೆ ಬಿದ್ದಿದೆ ವಿದ್ಯುತ್ ತಂತಿ ನಡು ರಸ್ತೆಯಲ್ಲಿ ಬಿದ್ದಿದ್ದು ಸದೃಶಾವತ್ ಯಾವುದೇ ಅನಾಹುತ ಆಗಿಲ್ಲ ಘಟನೆ ಆಗುತ್ತಿದ್ದಂತೆ ಸ್ಥಳೀಯರು ಬೆಸ್ಕಾಂ. ಅಧಿಕಾರಿಗಳಿಗೆ ಪೋನ್ ಮೂಲಕ ಕರೆ ಮಾಡಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ. ಬೆಂಗಳೂರು-ಕಡಪಾ ನೂರಾರು ವಾಹನಗಳು ಸಂಚರಿಸುತ್ತವೆ. ವಿದ್ಯುತ್ ಕಂಬ ಉರುಳಿ ಬಿದ್ದಾಗ ಜನತೆ ಎಚ್ಚೆತ್ತುಕೊಳ್ಳದೆ ಹೋಗಿದ್ದಾರೆ ಬಾರಿ ಅನಾಹುತ ಆಗುತ್ತಿತ್ತು ಎನ್ನುತ್ತಾರೆ.
ವರುಣನ ಆರ್ಭಟಕ್ಕೆ ತಾಲ್ಲೂಕಿನ ಬದ್ದಿಪಲ್ಲಿ ಪೆದ್ದೂರು ಸೇರಿದಂತೆ ಸಾಕಷ್ಟು ಕಡೆ ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.ಕಟಾವಿಗೆ ಬಂದಿರುವ ಬತ್ತ ನೀರು ಪಾಲಾಗಿದೆ ಆದಾಯದ ನಿರೀಕ್ಷೆಯಲ್ಲಿದ್ದ ಟೊಮೊಟೊ ಬೆಳೆ ಸಹ ಹಾಳಾಗಿ ಕೊಯ್ಲಿಗೆ ಬಂದಿದ್ದ ಟೊಮೊಟೊ ನೆಲಕ್ಕೆ ಉದುರುತ್ತಿದೆ ಜೊತೆಗೆ ಕಪ್ಪು ಮಚ್ಚೆ ಹಾಗೂ ಗಜ್ಜಿ ರೋಗ ಕಾಡುತ್ತಿದೆ ಇದು ರೈತರನ್ನು ಆತಂಕಕ್ಕೆ ಈಡು ಮಾಡಿದೆ. ಜಾನುವಾರುಗಳಿಗೆ ಮಳೆಯಿಂದಾಗಿ ಮೇವು ಇಲ್ಲದಂತಾಗಿ ಹಾಲು ಉತ್ಪಾದಕ ರೈತರು ಪರದಾಡುವಂತಾಗಿದೆ.