ಶ್ರೀನಿವಾಸಪುರ:ಹುಚ್ಚು ನಾಯಿಯೊಂದು 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾಲೂಕಿನ ರೋಣೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡದಿರುತ್ತದೆ.
ತಾಲೂಕಿನ ರೋಣೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕತಿಮ್ಮನಹಳ್ಳಿ,ರೆಡ್ಡಂಪಲ್ಲಿ, ಕೋಟಪಲ್ಲಿ, ಲೋಜರಪಲ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಡಾಡಿರುವ ಹುಚ್ಚು ನಾಯಿ ದಾರಿಹೋಕ ಮಹಿಳೆಯರು,ವೃದ್ಧರು ಸೇರಿದಂತೆ ಹಲವರನ್ನು ಕಚ್ಚಿ ಗಾಯಗೊಳಿಸಿದ್ದು ಗಾಯಗೊಂಡವರು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿದಗ ಹಿನ್ನಲೆಯಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಿಕ್ಕತಿಮ್ಮನಹಳ್ಳಿ ರೆಡ್ಡಿ, ಲೋಜರಪಲ್ಲಿ ತಿಪ್ಪಮ್ಮ 70, ರೆಡ್ಡಂಪಲ್ಲಿ ಗೀತಮ್ಮ50, ಕೋಟಪಲ್ಲಿ ಮುನಿಯಪ್ಪರಿಗಂತೂ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ ಎನ್ನುತ್ತಾರೆ,ಈ ಬಗ್ಗೆ ಗ್ರಾಮಸ್ಥರು ಮಾತನಾಡಿ ಒಂದೆನಾಯಿ ಎಲ್ಲಾ ಗ್ರಾಮಗಳಲ್ಲೂ ದಾಳಿಮಾಡಿದ್ದು ದಿನೆದಿನೆ ಗ್ರಾಮಗಳಲ್ಲಿ ನಾಯಿಗಳ ಉಳಪಟ ಹೆಚ್ಚುತ್ತಿದ್ದು ಸಂಜೆ ಮಬ್ಬುಗತ್ತಲಿನಲ್ಲೂ ಒಡಾಡಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ,ದ್ವಿಚಕ್ರವಾಹನದಲ್ಲಿ ಹೋಗುವಾಗ ನಾಯಿಗಳ ಹಿಂಡು ದಾಳಿ ಮಾಡುತ್ತವೆ ಎಂದು ಹೇಳುತ್ತಾರೆ.
ಗ್ರಾಮಸ್ಥರು ಜಾಗೃತರಾಗಿರಿ ಇವೊ
ಹುಚ್ಚು ನಾಯಿ ದಾಳಿ ವಿಚಾರದಲ್ಲಿ ತಾಲೂಕು ಪಂಚಾಯಿತಿ ಇವೋ ರವಿ vcsnewz.comಗೆ ಪ್ರತಿಕ್ರಿಯೆ ನೀಡಿ ಹುಚ್ಚುನಾಯಿ ದಾಳಿ ವಿಚಾರದಲ್ಲಿ ಪಶು ಸಂಗೋಪನೆ ಇಲಾಖೆ ವೈದ್ಯಾಧಿಕಾರಿಗಳ ಸಹಕಾರ ಕೋರಿದ್ದು ಕಾರ್ಯಚರಣೆ ಮೂಲಕ ಆದಷ್ಟು ಬೇಗ ನಾಯಿಯನ್ನು ಹಿಡಿಯಲಾಗುವುದು, ಈ ಭಾಗದ ಗ್ರಾಮಗಳಲ್ಲಿ ಮಕ್ಕಳು ವೃದ್ಧರು ಆಶಕ್ತರು ಹುಚ್ಚುನಾಯಿ ದಾಳಿಗೆ ಒಳಗಾಗದಂತೆ ಹೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿರುತ್ತಾರೆ.