ರಾಮನಗರ:ಹೋಂ ಸ್ಟೇ ನಲ್ಲಿ ಯುವತಿಯ ಪೋಟೋ ತೆಗೆಯುತ್ತಿದ್ದ ಯುವಕರ ಕೃತ್ಯ ಪ್ರಶ್ನಿಸಿದ ಯುವಕನನ್ನು ದೊಣ್ಣೆಯಿಂದ ದಾರುಣವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿಯ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿದ್ದು ಬಿಕಾಂ ಪದವಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಚಿಕ್ಕೇನಹಳ್ಳಿಯ ಹೋಂ ಸ್ಟೇ-ನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿ ಸಂಭ್ರಮಿಸಿದ್ದಾರೆ ನಂತರ ವಿದ್ಯಾರ್ಥಿಗಳು ಹೊರಡುವಾಗ ಹೋಂ ಸ್ಟೇ ನಲ್ಲಿದ್ದ ಚಂದು ಮತ್ತು ನಾಗೇಶ್ ಎಂಬ ಇಬ್ಬರು ವಿದ್ಯಾರ್ಥಿನಿಯ ಫೋಟೋ ತೆಗೆದಿದ್ದಾರೆ ಇದಕ್ಕೆ ಪುನೀತ್ ಎಂಬ ವಿದ್ಯಾರ್ಥಿ ಯುವತಿಯ ಫೋಟೋ ಯಾಕೆ ತೆಗೆದಿದ್ದೀರಾ ಎಂದು ಪ್ರಶ್ನಿಸಿದ್ದಾನೆ ಇದಕ್ಕೆ ಪೋಟೋ ಶೂಟ್ ಮಾಡುತ್ತಿದ್ದ ಚಂದು ಮತ್ತು ನಾಗೇಶ್ ಕೋಪಗೊಂಡು ಇಬ್ಬರು ಸೇರಿ ದೊಣ್ಣೆಯಿಂದ ಪುನೀತ್ ನನ್ನು ಹೊಡೆದಿದ್ದಾರೆ.ದೊಣ್ಣೆ ಏಟಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು ಗಾಯಗೊಂಡ ಪುನೀತ್ ನನ್ನು ಬೆಂಗಳೂರಿನ ಕೆಂಗೇರಿ ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಚಿಕಿತ್ಸೆ ಫಲಿಸದೇ ಪುನೀತ್ ಮೃತಪಟ್ಟಿದ್ದಾನೆ.ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Breaking News
- ಜನಪರ ಹೋರಾಟಗಾರ ಬಯ್ಯಾರೆಡ್ಡಿ ಕೃತಕ ಉಸಿರಾಟ ಕೊನೆಗೂ ನಿಂತುಹೋಯಿತ?
- KSRTC ಬಸ್ಸು ದರ ಇವತ್ತು ಮಧ್ಯರಾತ್ರಿಯಿಂದಲೇ ಏರಿಕೆ!
- ALEART:ಪಾರಿವಾಳ ಸಂಪರ್ಕದಿಂದ ಶ್ವಾಸಕೋಶದ ಸೋಂಕು!ಮಿಸ್ ಮಾಡದೇ ಓದಿ!
- KSRTC ಉಚಿತ ಪ್ರಯಾಣ ಕುರಿತು ಅಧ್ಯಯನಕ್ಕೆ ಬಂದ ಆಂಧ್ರ ಮಂತ್ರಿಗಳು!
- ಹೊಸವರ್ಷ ಆಚರಣೆಯಲ್ಲಿ ಸಿಡಿದ ಪಟಾಕಿಯಿಂದ ವ್ಯಕ್ತಿ ಸಾವು!
- ವಿದ್ಯಾರ್ಥಿನಿಗೆ Love ಪಾಠ ಮಾಡಿ ಮದುವೆಯಾದ ಮೇಷ್ಟ್ರು!
- Infosys ಕ್ಯಾಂಪಸ್ ಗೆ ಬಂದ ಚಿರತೆ! ಹಿಡಿಯಲು ಸಜ್ಜಾದ ಅರಣ್ಯ ಪಡೆ
- ಕರೋನಾ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣ ಇಂದಿಗೆ ಐದು ವರ್ಷ!
- ಜನವರಿಯಿಂದ ಆಂಡ್ರಾಯ್ಡ್ ಫೋನ್ ನಲ್ಲಿWhatsApp ಕೆಲಸ ಮಡುವುದಿಲ್ಲವಂತೆ!
- ಬೆಂಗಳೂರು-ಮದನಪಲ್ಲಿ ಹೆದ್ದಾರಿಯಲ್ಲಿ ಎರಡು ಪ್ರತ್ಯಕ ಅಪಘಾತ ಇಬ್ಬರ ಸಾವು!
Sunday, January 5