ಶ್ರೀನಿವಾಸಪುರ:ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ ಆರಂಭವಾದ ಕೃಷಿ ಮೇಳಕ್ಕೆ ಶ್ರೀನಿವಾಸಪುರದ ರೈತರು ತೆರಳಲು ದಿಗವಪಲ್ಲಿ ರಾಜಾರೆಡ್ದಿ,ನಿಲಟೂರುಚಂದ್ರಶೇಖರೆಡ್ದಿ ಹಾಗು ಪ್ರಶಾಂತರೆಡ್ದಿ ನೇತೃತ್ವದಲ್ಲಿ RCS ಮಂಡಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು.ನೂರಕ್ಕೂ ಹೆಚ್ಚು ಜನ ರೈತರನ್ನು ಶ್ರೀನಿವಾಸಪುರದಿಂದ ಎರಡು KSRTC ಬಸ್ಸುಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಬವಾದ ಕೃಷಿ ಮೇಳ-2024 ಕ್ಕೆ ಕರೆದುಕೊಂಡು ಹೋಗಿದ್ದರು.
ಕೃಷಿ ಮೇಳಕ್ಕೆ ಹೋಗಿದ್ದ ರೈತಾಪಿ ಜನರಿಗೆ ಬೆಳಗಿನ ಉಪಹಾರ ಊಟದ ವ್ಯವಸ್ಥೆ ಮಾಡಿದ್ದ ವ್ಯವಸ್ಥಾಪಕರು ಸಂಜೆ ಚಿಕ್ಕಬಳ್ಳಾಪುರದ ಇಶಾ ಫೌಂಡೇಶ್ ಕರೆದುಕೊಂಡು ಹೋಗಿದ್ದರು.
ಕೃಷಿ ಮೇಳ-2024 ಹವಾಮಾನ ಚತುರ ಡಿಜಿಟಲ್ ಕೃಷಿ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಉದ್ಘಾಟನೆ ಮಾಡಲಾಗಿದ್ದು ಇಂದಿನಿಂದ (ನವೆಂಬರ್ 14) ನವೆಂಬರ್ 17 ರ ತನಕ ನಾಲ್ಕು ದಿನಗಳ ಕಾಲ ನಡೆಯುವ
ಕೃಷಿ ಮೇಳದಲ್ಲಿ 2024ರ ವರ್ಷದಲ್ಲಿ ಕೃಷಿಯಲ್ಲಿ ಸಾಧನೆಗೈದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ತಂತ್ರಜ್ಞಾನಗಳ ಪ್ರದರ್ಶನ
ಕೃಷಿ ಡ್ರೋನ್,ರೊಬೊಟ್ ಕೃಷಿ ಯಂತ್ರ,ಮಲ್ಟಿಸ್ಪೆಕ್ಟ್ರಲ್ ಡ್ರೋನ್,ಸ್ವಯಂಚಾಲಿತ ಬೂಮ್ ಸ್ಪ್ರೇಯರ್,ಹಣ್ಣಿನ ವರ್ಗೀಕರಣಗೊಳಿಸುವ ಯಂತ್ರ,ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ,ಆಳ ನಿಯಂತ್ರಕ ರೋಟವೇಟರ್ ಪ್ರದರ್ಶನ ಸೇರಿದಂತೆ ನೂತನ ತಂತ್ರ ಜ್ಞಾನ, ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ಪರಿಹಾರ, ಸಮಗ್ರ ಕೃಷಿ, ಕೃಷಿ ಪದ್ಧತಿ, ರೇಷ್ಮೆ ಕೃಷಿ, ತೋಟಗಾರಿಕೆ, ಸಿರಿಧಾನ್ಯ, ಸಾವಯವ ಕೃಷಿ, ಜಲಾನಯನ ನಿರ್ವಹಣೆ, ಮಣ್ಣು ರಹಿತ ಕೃಷಿ ಪದ್ಧತಿಯಂತಹ ಅನೇಕ ಪ್ರಾತ್ಯಕ್ಷಿಕೆಗಳು ಕಾಣಸಿಗುತ್ತದೆ.
ಉಚಿತ ಪ್ರವೇಶ
ಕೃಷಿ ಮೇಳಕ್ಕೆ ಹೋಗುವಂತವರಿಗೆ ಉಚಿತ ಪ್ರವೇಶ ಇರುತ್ತದೆ. ಜಿಕೆವಿಕೆ ಗೇಟ್ನಿಂದ ಮೇಳ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ವಿಶ್ವವಿದ್ಯಾಲಯದ ಬಸ್ಗಳನ್ನು ನಿಯೋಜಿಸಲಾಗಿದ್ದು ಕಾರು, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಮಂಡಳಿ ತಿಳಿಸಿದೆ.
Breaking News
- ಕಲ್ಲೂರಿನಲ್ಲಿ ಶಾಸಕ ವೆಂಕಟಶಿವಾರೆಡ್ಡಿ BIRTHDAY ಕಾರ್ಯಕ್ರಮ
- ರಾಯಲ್ಪಾಡು ಒಂಟಿಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರ ಬಂಧನ
- ಶ್ರೀನಿವಾಸಪುರದಲ್ಲಿ ವೈದೇಹಿ ಆಸ್ಪತ್ರೆಯಿಂದ ನಡೆದ ಆರೋಗ್ಯ ಶಿಬಿರ
- ರಮೇಶ್ ಕುಮಾರ್ ಜಮೀನು ಎರಡು ದಿನಗಳ ಜಂಟಿ ಸರ್ವೇ ಅಂತ್ಯ
- ರಮೇಶಕುಮಾರ್ ಜಮೀನು ಅಳತೆ ಸಮಯಾಭವ ಅರಣ್ಯಇಲಾಖೆ ಸರ್ವೆ ಗುರುವಾರಕ್ಕೆ!
- ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ಅಪಘಾತ ಆಂಧ್ರದ ಇಬ್ಬರ ಸಾವು!
- ಕುತೂಹಲಕ್ಕೆ ಕಾರಣವಾದ CMR ಶ್ರೀನಾಥ್ ಶ್ರೀನಿವಾಸಪುರ ಟೆಂಪಲ್ ರೌಂಡ್ಸ್!
- ಶ್ರೀನಿವಾಸಪುರದಾದ್ಯಂತ ದೇಗುಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ
- ಮೇಗಾಸ್ಟಾರ್ ಮಗನ “ಗೇಮ್ ಚೇಂಜರ್” ಸಿನಿಮಾ ಕಥೆ IAS ಅಧಿಕಾರಿದು!
- ತಮಿಳುನಾಡು ರಾಣಿಪೇಟೆ ಬಳಿ ರಸ್ತೆ ಅಪಘಾತ ಶ್ರೀನಿವಾಸಪುರದ ನಾಲ್ವರು ಸಾವು!
Tuesday, January 21