ಶ್ರೀನಿವಾಸಪುರ:ಸರ್ಕಾರಿ ಕಾರ್ಯಕ್ರಮಗಳಿಗೆ ಬಾರದೆ ನಿರ್ಲಕ್ಷ್ಯ ಧೋರಣೆ ತೊರುವಂತ ಸರ್ಕಾರದ ಅಧಿಕಾರಿಗಳು ಯಾರೆ ಇರಲಿ ಅಂತಹವರು ತಾಲೂಕು ಬಿಟ್ಟು ತೊಲಗಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತೀವ್ರಧಾಟಿಯಲ್ಲಿ ಎಚ್ಚರಿಕೆ ನೀಡಿದರು ಅವರು ಕನಕ ಸಮುಧಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ಕುರುಬ ಸಂಘದಿಂದ ಆಯೋಜಿಸಿದ್ದ ಕನಕದಾಸರ 537 ನೇ ಜಯಂತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಮನುಕುಲದ ಹಿತಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟವರು ಸಂತ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಬದುಕು ಇಂದಿನ ಸಮಾಜಕ್ಕೆ ಆದರ್ಷ ಇಂತಹ ಸಂತನ ಕಾರ್ಯಕ್ರಮ ಆಯೋಜಿದ್ದರೆ ಕಾರ್ಯಕ್ರಮದಿಂದ ದೂರ ಉಳಿಯುವಂತ ಸರ್ಕಾರಿ ಅಧಿಕಾರಿಗಳ ಧೋರಣೆಯಿಂದ ಕಾರ್ಯಕ್ರಮದಲ್ಲಿ ಜನರೆ ಇಲ್ಲದಂತ ಪರಿಸ್ಥಿತಿ ಎರ್ಪಟ್ಟಿದೆ ಎಂದ ಅವರು ಅಧಿಕಾರಿಗಳದು ಅತಿಯಾಯಿತು ನಿಮಗೆ ತಾಲೂಕಿನ ಜನರು ಬೇಕಿಲ್ಲ ಅನ್ನುವುದಾದರೆ ನೀವು ತಾಲೂಕಿನಲ್ಲಿ ಇರುವುದು ಬೇಡ ಎಂದು ಏರು ಧ್ವನಿಯಲ್ಲಿ ಹೇಳಿದರು.
ಕನಕದಾಸರ ಜಯಂತಿ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮ ಅಲ್ಲ ಸರ್ಕಾರದ ಕಾರ್ಯಕ್ರಮ ಇಲ್ಲಿ ಸರ್ಕಾರಿ ಶೀಷ್ಟಾಚಾರದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಬೇಕು ಅದಕ್ಕಾಗಿ ಸರಕಾರ ರಜೆ ನೀಡಿದೆ. ಆದರೆ ಪೊಲೀಸ್ ಇಲಾಖೆ ಸೇರಿದಂತೆ ಅಬಕಾರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಕೆಲ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಕಾರ್ಯಕ್ರಮಕ್ಕೆ ಗೈರು ಹಾಜರಾಗುವುದಾದರೆ ತಾಲೂಕಿನ ಬಗ್ಗೆ ನಿಮ್ಮ ಉದಾಸಿನತೆ ನಿಲವುಗಳು ಏನು ಎಂಬುದು ತಿಳಿಯುತ್ತದೆ ಇಲ್ಲಿ ನಿಮ್ಮ ನಿರ್ಲಕ್ಷ್ಯವು ಎದ್ದು ತೋರುತ್ತಿದೆ ಎಂದು ತಹಸಿಲ್ದಾರ್ಗೆ ಹೇಳಿದ ಅವರು ನಿಮ್ಮ ಇಷ್ಟ ಬಂದಂತೆ ತಾಲೂಕು ಆಡಳಿತ ನಡೆಯಲು ಬಿಡುವುದಿಲ್ಲ. ಸಮಾರಂಭಕ್ಕೆ ಬಾರದ ಎಲ್ಲಾ ಅಧಿಕಾರಿಗಳಿಗೆ ನೋಟೀಸ್ ಕೊಟ್ಟು ಶಿಸ್ತು ಕ್ರಮ ತಗೆದುಕೊಳ್ಳುವಂತೆ ಖಡಕ್ ಆಗಿ ಸೂಚಿಸಿದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ವೇಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನಕದಾಸರು ಸರ್ವಜನಾಂಗದ ಚಿಂತಕರಾಗಿದ್ದರು. ಅವರು ಕೀರ್ತನೆ ಮತ್ತು ವಚನ ಸಾಹಿತ್ಯದ ಮೂಲಕ ಭೌಧಿಕವಾಗಿ ಸಮಾಜಕ್ಕೆ ಸಾಹಿತ್ಯ ದೃಷ್ಟಿ ನೀಡಿದ ಮಹಾತ್ಮರು. ಅವರ ಪುಸ್ತಕಗಳು ಪ್ರತಿಯೊಬ್ಬರು ಓದುವ ಮೂಲಕ ಅವರ ಜೀವನ ಚರಿತ್ರೆ ಆದ್ಯಾಯನ ಮಾಡಿ ಆದರ್ಶಗಳು ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ತಹಸಿಲ್ದಾರ್ ಜಿ.ಎನ್.ಸುದೀಂಧ್ರ ಮಾತನಾಡಿ ಬೀರಪ್ಪ ನಾಯಕನ ಕುಟುಂಬದಲ್ಲಿ ಜನಿಸಿದ ಕನಕದಾಸರು ಈ ನೆಲದ ಸಾಂಸ್ಕೃತಿಕ ಸಾಹಿತ್ಯದ ರಾಯಬಾರಿಯಾಗಿ ದಾಸ ಶ್ರೇಷ್ಠವಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಇಒ ಶಿವಕುಮಾರಿ,ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಹಿರಿಯ ಅಧಿಕಾರಿ ಬೈರಾರೆಡ್ಡಿ,ಬಿಇಒ ಮುನಿಲಕ್ಷ್ಮಯ್ಯ,
ಕುರುಬ ಸಂಘದ ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ನಿರ್ಲಕ್ಷಿಸಿರುವುದು ಮೆರವಣಿಗೆಗೆ ಮುನ್ನ ವೇದಿಕೆ ಕಾರ್ಯಕ್ರಮ ತಹಸಿಲ್ದಾರ್ ನಿಗದಿ ಮಾಡಿದ್ದಕ್ಕೆ ಕುರುಬ ಸಮಾಜದ ಮುಖಂಡರು ತಹಸಿಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದಲ್ಲದೆ ಸರ್ಕಾರಿ ಸಮಾರಂಭದಿಂದ ದೂರ ಉಳಿದು ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದರು.
ಬೆಳ್ಳಿ ಪಲ್ಲಕಿಗಳಿಂದ ಕಳೆ ಕಟ್ಟಿದ ಮೆರವಣಿಗೆ
ತಾಲೂಕಿನ ವಿವಿದ ಗ್ರಾಮಗಳಿಂದ ಕನಕದಾಸರ ಭಾವಚಿತ್ರ ಹೊತ್ತು ಅಲಂಕೃವಾಗಿ ಬಂದಿದ್ದ ಹತ್ತಾರು ಬೆಳ್ಳಿ ಪಲ್ಲಕ್ಕಿಗಳನ್ನು ಡೊಳ್ಳು ಕುಣಿತ ತಾಳ ಮೇಳ ವಾದ್ಯಗಳೊಂದಿಗೆ ಪಟ್ಟಣದ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ವರದಿ:ಶ್ರೀರಾಮ್