ಮೊಳಕೆ ಒಡೆದು ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯಲ್ಲಿ ಸೋಲನೈನ್ ಮತ್ತು ಚಾಕೋನೈನ್ ಎಂಬ ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ. ಇವುಗಳ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬುದಾಗಿ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಅರೋಗ್ಯ ಡೆಸ್ಕ್:ಅಲೂಗಡ್ಡೆ ಬಳಸದೆ ಖಾದ್ಯಗಳೆ ಇಲ್ಲದಂತಾಗಿದೆ ಸಾಂಬಾರಿನಿಂದ ಹಿಡಿದು ಫ್ರೆಂಚ್ ಫೈಸ್ ವರೆಗೆ ಅಲೂಗಡ್ಡೆಯನ್ನು ಬಳಸಲಾಗುತ್ತದೆ. ಮಾರುಕಟ್ಟೆಯಿಂದ ಅಲೂಗಡ್ಡೆಯನ್ನು ಖರೀದಿಸುವಾಗ ಅದರಲ್ಲಿ ಕೆಲವೊಂದು ಮೊಳಕೆ ಒಡೆದ ಆಲೂಗಡ್ಡೆಗಳೂ ಕೂಡ ಇರುತ್ತದೆ. ಆದರೆ ಈ ಮೊಳಕೆಗಳನ್ನು ಕತ್ತರಿಸಿ ಖಾದ್ಯಗಳಲ್ಲಿ ಬಳಸುವುದು ಸಾಮಾನ್ಯ. ಆದರೆ ಎಂದಿಗೂ ಈ ರೀತಿಯ ತಪ್ಪು ಮಾಡಬೇಡಿ ಮೊಳಕೆಯೊಡದ ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ.ಇಂತಹ ಆಲೂಗಡ್ಡೆ ತಿನ್ನುವುದರಿಂದ ವಾಕರಿಕೆ,ತಲೆನೋವು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿರುತ್ತಾರೆ.ಮೊಳಕೆಯೊಡೆದ ಅಲೂಗಡ್ದೆಯಲ್ಲಿ ಸೋಲನೈನ್ ಮತ್ತು ಚಾಕೋನಿನ್ ನಂತಹ ನೈಸರ್ಗಿಕ ವಿಷ ಉತ್ಪಾದನೆಯಾಗುತ್ತದೆ,ಇವುಗಳ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬುದು ತಜ್ಞರ ಮಾತು ಮೊಳಕೆ ಚಿಕ್ಕದಾಗಿದ್ದರೆ ಕತ್ತರಿಸಬಹುದು, ಆದರೆ ದೊಡ್ಡದಾಗಿ ಬೆಳೆದರೆ ಅವುಗಳನ್ನು ತಿನ್ನಬಾರದು ಎಂದು ಅವರು ಹೇಳುತ್ತಾರೆ.