ಕೋಲಾರ:ಬಿಳಿ ಬಟ್ಟೆ ಹಾಕಿಕೊಂಡು ಚುನಾವಣೆಗೆ ಹೋಗುವ ಮಾತೆ ಇಲ್ಲ ಎಂದು ಪರೋಕ್ಷವಾಗಿ ಚುನಾವಣಾ ನಿವೃತ್ತಿಯ ಮಾತನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಡಿದ್ದಾರೆ.ಅವರು ಭಾನುವಾರ ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಪಂ ಮಾಜಿ ಅಧ್ಯಕ್ಷ ದಿವಂಗತ ಜನ್ನಘಟ್ಟ ವೆಂಕಟಮುನಿಯಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು.
ರಮೇಶ್ ಕುಮಾರ್ ಭಾಷಣದ ಉದ್ದಕ್ಕೂ ವಿಷಾದಭರಿತವಾಗಿ ,ಮಾತನಾಡಿದರು ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲಾ ಸರಿಯಾಗಿದೆ ಎಂದು ಹೇಳಿದರು ನಂತರ ನಡೆದಿದ್ದೆ ಬೇರೆ ಚುನಾವಣೆ ಸೋಲಿಗೆ ನಾನು ಹೆದರಲಿಲ್ಲ,ಚುನಾವಣೆಯಲ್ಲಿ ಸೋತೆ ನಾಲ್ಕಾಗಿತ್ತು ಈಗ 5 ನೇ ಸೋಲಾಗಿದೆ ಯಾಕೆ ಸೋತೆ ಅಂದ್ರೆ ನಂಬಿಸಿ ದ್ರೋಹ ಎಸಗಿ ಸೋಲಿಸಿದರು. ಊಟಕ್ಕೆ ಕರೆದು ವಿಷ ಇಕ್ಕಿದರು,ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು,ಜೊತೆಯಲ್ಲೆ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು,ದೇವರಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಕುತ್ತಿಗೆಗೆ ಕತ್ತಿ ಇಟ್ಟರು,ಎಂದು ಯಾರೊಬ್ಬರ ಹೆಸರು ಪ್ರಸ್ತಾಪಿಸದೆ ತಮ್ಮ ಸೋಲಿಗೆ ಕಾರಣರಾದವರು ಮಾಡಿದ ತಂತ್ರಗಳ ಬಗ್ಗೆ ತಮ್ಮದೆ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಹೇಳಿದರು. ಚುನಾವಣೆಯಲ್ಲಿ ಹಣ,ಜಾತಿ ಮಹತ್ವ ಪಡೆದುಕೊಳ್ಳುತ್ತಿದೆ, ಅಂಬೇಡ್ಕರ್ ಅವರ ಆಶಯಗಳು ಗುಂಡಿಗೆ ಹಾಕಲಾಗುತ್ತಿದೆ ಇದೆನೆಲ್ಲಾ ತಡೆಯಬೇಕು ಎಂದು ಗ್ರಾ.ಪಂ ಚುಣಾವಣೆಯಲ್ಲಿ ಸುಧಾರಣೆ ತರಲು ನಾನು ಕೊಟ್ಟ ವರದಿಯೂ ಜಾರಿಗೆ ಬರಲಿಲ್ಲ ಎಂದು ವಿಷಾದಿಸಿದರು.
ಸ್ವಾಮಿ ಸಿಗೋದಿಲ್ಲ ಎಲ್ಲೂ ಬರೋದೆ ಇಲ್ಲಾ ಅಂತ ಬಹಳ ಜನ ಮಾತಾಡ್ತಾರೆ,ಮದುವೆ ಮುಂಜಿ,ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು ಇವೆಲ್ಲಾ ಮತ್ತೆ ಇನ್ನೋಂದು ಚುನಾವಣೆಗೆ ನಿಲ್ಲೋ ಆಸೆ ಇದ್ದರೆ ಬಿಳಿ ಶರ್ಟ್ ಹಾಕಿಕೊಂಡು ಕಾಣಿಸಬಹುದಿತ್ತು ಎಂದು ಮತ್ತೊಮ್ಮೆ ಪರೋಕ್ಷವಾಗಿ ಚುನಾವಣೆಯಿಂದ ದೂರ ಉಳಿಯುವ ಬಗ್ಗೆ ಪ್ರಸ್ತಾಪಿಸಿದರು.
ಸರಳತೆ ಸಜ್ಜನಿಕೆಗೆ ಗೌರವ ಇಲ್ಲ
ಸಾರ್ವಜನಿಕ ಜೀವನದಲ್ಲಿ ಸರಳ,ಸಜ್ಜನಿಕೆಗೆ ಗೌರವ ಇಲ್ಲ ಈಗೇನಿದ್ದರು ಓಟಿಗೆ ಎಷ್ಟು ಕೊಡ್ತೀರಾ ಎನ್ನುವವರೇ ಹೆಚ್ಚು ಹಾಗಾಗಿ ಸಾರ್ವಜನಿಕ ಕೆಲಸಕ್ಕೆ ನಮ್ಮಂತವರಿಗೆ ಅವಕಾಶ ಸಿಗುವುದಿಲ್ಲ, ಏನಿದ್ದರೂ ರಿಯಲ್ ಎಸ್ಟೇಟ್ ಕುಳಗಳು, ಬಾರು,ಕ್ವಾರಿ ಹೊಂದಿರುವಂತ ಶ್ರೀಮಂತರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂದ ರಮೇಶ್ ಕುಮಾರ್ ಮುಂದಿನ ದಿನಗಳಲ್ಲಿ ಬಡವರು,ಸಾಮಾನ್ಯರು ಗ್ರಾ.ಪಂ ಚುನಾವಣೆಗಳಲ್ಲೂ ಸ್ಪರ್ಧಿಸಲು ಸಾಧ್ಯವಿಲ್ಲ ಸಣ್ಣ-ಪುಟ್ಟ ಚುನಾವಣೆಯಲ್ಲಿ ಸ್ಪರ್ಧಿಸಲು ಕೋಟಿಗಟ್ಟಲೆ ಹಣಬೇಕು, ನಮ್ಮಂತವರು ಮಾಡುವ ಕೆಲಸಕ್ಕೆ ಮಾನ್ಯತೆ ಸಿಗಲ್ಲ ಎಂದರು.
ಅಭಿವೃದ್ಧಿಯ ಸ್ವಪ್ನ ಕಂಡಿದ್ದೆ
ಚುನಾವಣೆಗೆ ಮುನ್ನಾ ನಾನು ರೈತರ ಅಭಿವೃದ್ದಿ ಕುರಿತಾಗಿ ರೈತ ಮಾಲ್ ನಿರ್ಮಾಣ,ಯಾಂತ್ರಿಕೃತ ಕಸಾಯಿಖಾನೆ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣದಂತಹ ಹಲವು ಸ್ವಪ್ನಗಳನ್ನು ಕಂಡಿದ್ದೆ ಎಂದು ವ್ಯಂಗ್ಯಭರಿತವಾಗಿ ನುಡಿದ ಅವರು, ನಾನು ಸೋತಾಗ ನನ್ನ ಅವುಗಳು ದುಸ್ಪನ್ನವಾಗಿ ಕೊನೆಗೊಂಡಿತು, ಚುನಾವಣೆ ಎಂದರೆ ಚಳಿಜ್ವರವಲ್ಲ, ಅಸಹ್ಯವಾಗುತ್ತದೆ ವಾಂತಿಬೇಧಿಯು ಅಗುತ್ತೆ ಎಂದು ಸೋಲಿನ ಅವೇದನೆ ಹೋರಹಾಕಿದರು.
ಯಾರಿಗೆ ಕೃತಜ್ಞತೆ ಹೇಳಬೇಕು ಗೊತ್ತಿಲ್ಲ
ಎಲ್ಲರಿಗೂ ಎಲ್ಲಾ ರೀತಿಯಲ್ಲೂ ಒಳ್ಳೆಯದು ಮಾಡಲಿ ಯಾರೆಲ್ಲಾ ಮಹಾನುಭಾವರಿಗೆ ಕೃತಜ್ಞತೆಗಳು ಅರ್ಪಿಸಬೇಕು ಗೊತ್ತಿಲ್ಲ ನಾನು ಬಹಳ ಮುಖ್ಯವಾಗಿ ಮೊದಲನೆಯದಾಗಿ ವೆಂಕಟಮುನಿಯಣ್ಣ ಹಾಗೂ ತಿಮ್ಮರಾಯಣ್ಣ ಕುಟುಂಬಕ್ಕೆ ಕೃತಜ್ಞತೆ ಗಳನ್ನ ಅರ್ಪಿಸುತ್ತೇನೆ ಎರಡನೆಯದಾಗಿ ಯೋಗ್ಯತೆ ಇದ್ದವರೊ ಇಲ್ಲದವರೊ ಅನಿಲ್ ಅಂತಹವರು ಕಾರ್ಯಕ್ರಮ ಮಾಡಿ ನನ್ನನ್ನು ಕರೆಸಿಕೊಂಡಿದ್ದೀರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು.
ಮೂರನೇಯದಾಗಿ ಒಳ್ಳಯದೆ ಮಾಡಿದ್ರು ಕೆಟ್ಟದ್ದೆ ಮಾಡಿದ್ರು ನನ್ನನ್ನೆ ಸರ್ವಸ್ವ ಅಂದು ನಂಬಿಕೊಂಡಿದ್ದವರಿಗೆ ಕೋಟಿ ಕೋಟಿ ಕೃತಜ್ಞತೆಗಳು.
ಇಷ್ಟೆ ಇಲ್ಲ ಇನ್ನೊಂದು ನಾಲ್ಕನೆ ಗುಂಪಿದೆ ಅವರೆ ಊಟಕ್ಕೆ ಕರೆದು ವಿಷ ಹಾಕಿದೋರು ಇವರೆಲ್ಲರಿಗಿಂತಲೂ ಮೊದಲ ಕೃತಜ್ಞತೆ ಅರ್ಪಿಸಿ ಭಗವಂತ ಅವರನ್ನೆಲ್ಲಾ ಕಾಪಾಡಪ್ಪ ನಮ್ಮಂತ ದುಷ್ಟರನ್ನ ಅವರು ಮಂಥನ ಮಾಡ್ತಾ ಇರಲಿ ಕಡೆ ಪಕ್ಷ ನನ್ನ ಮುಖವನ್ನಾದರೂ ನೋಡಲಿ ಅನ್ನೋ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ.ನನಗೆ ನಂಬಿಕೆ ದ್ರೋಹ ಮಾಡಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಮತ್ತಿತರರಿದ್ದರು.
ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ ಅಭಿಮಾನಿಬಳಗ ನಡೆಸಿದ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಧರ್ಮಪತ್ನಿಯರಾದ ಶಾರದಮ್ಮ ಹಾಗೂ ಸರಸಮ್ಮ ಅವರನ್ನು ಸನ್ಮಾನಿಸಲಾಯಿತು.