ಶ್ರೀನಿವಾಸಪುರ: ಊರು ಬೆಳೆದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ಕನಿಷ್ಟ ಆಲೋಚನೆ ತಾಲೂಕು ಆಡಳಿತಕ್ಕೆ ಇಲ್ಲದಿರುವುದು ದುರಂತ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದ್ದು ಇದನ್ನು ಬಗೆ ಹರಿಸುವ ಗೊಜಿಗೆ ಹೊಗದೆ ತಾಲೂಕು ಆಡಳಿತ ನಿರ್ಲಕ್ಷ್ಯ ಮಾಡಿರುವ ಬಗ್ಗೆ ಸಾರ್ವಜನಿಕರು ಅಧಿಕಾರಿ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇಲ್ಲಿನ ಸರ್ಕಾರಿ ಕಚೇರಿಗಳ ಆವರಣ ವಾಹನ ನಿಲುಗಡೆಯ ತಾಣಗಳಾಗಿದೆ ತಾಲೂಕು ಕಚೇರಿ ಅವರಣದಲ್ಲಿ ದಿನ ನಿತ್ಯ ಕಚೇರಿಗಳಿಗೆ ಬರುವ ಸಾರ್ವಜನಿಕರು ಮನಸೋ ಇಚ್ಛೆಯಂತೆ ಎಡ್ದಾ ದಿಡ್ದಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ ಮಿನಿ ವಿದಾನ ಸೌಧ ಸೇರಿದಂತೆ ಇನ್ನು ಕೆಲ ಸರ್ಕಾರಿ ಕಚೇರಿಗಳು ಇರುವ ಜಾಗವಾಗಿದ್ದು ಕೆಲವೊಮ್ಮೆ ಇಲ್ಲಿ ಸಂತೆ ಮಾರುಕಟ್ಟೆಯಂತಾಗಿ ಪಾದಚಾರಿ ಒಡಾಟಕ್ಕೂ ತೊಂದರೆ ಯಾಗುತ್ತದೆ ಈ ಸಮಸ್ಯೆ ಬಗೆಹರಿಸದ ತಾಲೂಕು ಅಡಳಿತ ನಿರ್ಲಕ್ಷಿಸಿದೆ ಎಂದು ಜನ ನೇರ ಆರೋಪ ಮಾಡುತ್ತಾರೆ ಇನ್ನು ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಕರೆದುಕೊಂಡು ಹೋಗಲು ನೂತನವಾಗಿ ಚಿಕ್ಕದಾದ ದಾರಿ ವಿಂಗಡಿಸಲಾಗಿದ್ದು ಇಲ್ಲಿ ಸಹ ಕಾರುಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ ಇದರಿಂದ ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಕರೆದುಕೊಂಡು ಹೋಗಲು ಸಮಸ್ಯೆಯಾಗಿದೆ ಎಂದು ಜಾನುವಾರು ಮಾಲಿಕರ ಆರೋಪ.
ಶಾಲ ಆವರಣವನ್ನು ಬಿಡದ ಪಾರ್ಕಿಂಗ್ ಭೂತ
ಬಾಯ್ಸ್ ಮಿಡ್ಲ್ ಸ್ಕೂಲ್ ಇದೊಂದು ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಿಸಿರುವ ಅಪರೂಪದ ಶಾಲ ಕಟ್ಟಡ ಈ ಅವರಣದಲ್ಲಿ ಪ್ರತಿದಿನ ಹತ್ತಾರು ಕಾರುಗಳನ್ನು ನಿಲುಗಡೆ ಮಾಡುತ್ತಿದ್ದಾರೆ.ಶಾಲ ಆವರಣದ ಎದುರು ಇರುವಂತ ಬ್ಯಾಂಕ್ ಕೆಲಸಗಳಿಗೆ ಬರುವಂತವರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬರುವಂತವರು ತಮ್ಮ ವಾಹನಗಳನ್ನು ಶಾಲ ಆವರಣದಲ್ಲಿ ತಂದು ನಿಲ್ಲಿಸುತ್ತಾರೆ ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ಮಳೆಗಾಲದಲ್ಲಿ ಕಾರುಗಳ ಒಡಾಟದಿಂದ ಶಾಲಾ ಆವರಣ ಕೆಸರು ಗದ್ದೆಯಂತಾಗುತ್ತದೆ ಆಗ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.ಜೊತೆಗೆ ಶಾಲ ಮಕ್ಕಳ ಆಟದ ಮೈದಾನ ಕಸಿದುಕೊಂಡತಾಗಿದೆ ಎನ್ನುವ ಆರೋಪ ಮಾಡುತ್ತಾರೆ.
ಇಷ್ಟೆ ಅಲ್ಲ ಶಾಲ ಆವರಣದಲ್ಲಿ ವಿಮಲ್, ಸೂಪರ್, ಸ್ಟಾರ್, ಸಿಗರೇಟ್ ಪ್ಯಾಕ್ಗಳು, ಸಿಗರೇಟ್ ತುಂಡುಗಳು ಬಿದ್ದಿರುತ್ತದೆ ಇವೆಲ್ಲವೂಕಾರು ನಿಲ್ಲಿಸಲು ಬರುವಂತವರು ಎಸೆದುಹೋಗಿರುವ ಕಸ ಎನ್ನುವ ಮಾತು ಇದೆ.