ನ್ಯೂಜ್ ಡೆಸ್ಕ್:ಅಯೋಧ್ಯೆ ರಾಮ ಮಂದಿರಕ್ಕೆ ರಹಸ್ಯ ಕ್ಯಾಮರಾದೊಂದಿಗೆ ಪ್ರವೇಶಿಸಿದ್ದ ವ್ಯಕ್ತಿಯನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದೇವಾಲಯದ ಸಿಬ್ಬಂದಿ ಹಿಡಿದ ವ್ಯಕ್ತಿ ತನ್ನ ಕನ್ನಡಕದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ದೇಗುಲದ ಒಳಗಡೆ ಫೋಟೋ ತಗೆಯಲು ಮುಂದಾಗಿದ್ದಾನೆ. ದೇಗುಲದ ಪ್ರಮುಖ ಗೇಟ್ಗೆ ಆಗಮಿಸುವ ಮುನ್ನ ನಡೆದ ಎಲ್ಲಾ ಭದ್ರತಾ ತಪಾಸಣೆಗಳಲ್ಲೂ ಕಣ್ತಪ್ಪಿಸಿ ಮುಂದೆ ಸಾಗಿದ್ದಾನೆ. ಪ್ರಮುಖ ಗೇಟ್ ಮುಂದೆ ಬರುತ್ತಿದ್ದಂತೆ ಈತನ ಕನ್ನಡಕದಿಂದ ಫ್ಲಾಶ್ ಲೈಟ್ ಆನ್ ಆಗಿದ್ದು, ಸೆಕ್ಯೂರಿಟಿ ಗಾರ್ಡ್ಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.ವಡೋದರದಲ್ಲಿ ಉದ್ಯೋಮಿಯಾಗಿರುವ ಈತನ ಹೆಸರು ಜಾನಿ ಜೈಶಂಕರ್. ಪತ್ನಿಸಮೇತ ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ್ದು ಕನ್ನಡಕದ ಫ್ರೇಮ್ಗೆ ಅಳವಡಿಸಿದ್ದ ರಹಸ್ಯ ಕ್ಯಾಮೆರಾದಿಂದ ದೇಗುಲದ ಫೋಟೋ ತೆಗೆಯಲು ಮುಂದಾಗಿದ್ದಾನೆ. ಕೈಯಲ್ಲಿದ್ದ ಬಟನ್ ಪ್ರೆಸ್ ಮಾಡುತ್ತಿದ್ದಂತೆ ಕನ್ನಡಕದ ಫ್ರೆಮ್ ಹೊಳೆಯಲಾರಂಭಿಸಿದೆ. ಕನ್ನಡಕದಲ್ಲಿ ಲೈಟ್ ಹೊಳೆಯುತ್ತಿದ್ದರಿಂದ ಅನುಮಾನಗೊಂಡ ಎಸ್ಎಸ್ಎಫ್ ವಾಚರ್ ಅನುರಾಜ್ ಬಜ್ಪೈ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ವ್ಯಕ್ತಿಯನ್ನು ವಶಕ್ಕೆ ಪಡೆದ ಬಳಿಕ ಭದ್ರತಾ ಏಜೆನ್ಸಿ ಮತ್ತು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭದ್ರತೆಯ ದೃಷ್ಠಿಯಿಂದ ಅಯೋಧ್ಯೆಯ ಶ್ರೀ ರಾಮ ದೇಗುಲದ ಆವರಣದಲ್ಲಿ ಫೋಟೋ ಸೆರೆ ಹಿಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
Breaking News
- ತಮಿಳುನಾಡು ರಾಣಿಪೇಟೆ ಬಳಿ ರಸ್ತೆ ಅಪಘಾತ ಶ್ರೀನಿವಾಸಪುರದ ನಾಲ್ವರು ಸಾವು!
- ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ DC ರವಿ
- ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಉತ್ತನೂರು ರಾಮಣ್ಣ!
- ಅಯೋಧ್ಯೆ ರಾಮಾಲಯಕ್ಕೆ ರಹಸ್ಯ ಕ್ಯಾಮರಾದೊಂದಿಗೆ ಪ್ರವೇಶಿಸಿದ್ದ ವ್ಯಕ್ತಿ ವಶಕ್ಕೆ!
- ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಯಲ್ಲಿ ಹಗಲು ಕಳ್ಳತನ!
- ರಾಯಲ್ಪಾಡು ಬಳಿ ಹಾಡು ಹಗಲು ಒಂಟಿ ಮನೆ ದೋಚಿರುವ ಕಳ್ಳರು!
- ಹೋಳೂರು ಶ್ರೀಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವ
- ಕೋಲಾರ ಕ್ಲಾಕ್ ಟವರ್ ವೃತ್ತದಲ್ಲಿ ಸಾಗಿದ RSS ಪಥ ಸಂಚಲನ
- ಕೃತಕ ಉಸಿರಾಟದಲ್ಲಿಯೇ ಜನಪರ ಹೋರಾಟ ಮಾಡುತ್ತಿದ್ದ ಬಯ್ಯಾರೆಡ್ಡಿ ನಿಂತ ಉಸಿರು!
- KSRTC ಬಸ್ಸು ದರ ಇವತ್ತು ಮಧ್ಯರಾತ್ರಿಯಿಂದಲೇ ಏರಿಕೆ!
Thursday, January 9