ಇದು ಸರ್ಕಾರಿ ಗೋಮಾಳ ಆಗಿರುವುದರಿಂದ ಸರ್ವೆ ಇಲಾಖೆ ಸರ್ವೆಯರುಗಳೆ ಇದನ್ನು ಅಳೆಯಬೇಕಿದೆ.ಸರ್ವೆ ಸೆಟಲ್ ಮೆಂಟ್ ಗೆ ನಾನು ಬದ್ದ, ಆದರೆ ಅರಣ್ಯ ಇಲಾಖೆ ಸರ್ವೆಗೆ ನನ್ನ ವಿರೋಧವಿದೆ. ರೆವಿನ್ಯೂ ರೆಕಾರ್ಡ್ ನಲ್ಲಿ ಈಗಲೂ ಗೋಮಾಳ ಅಂತಾನೆ ಇದೆ.ನಾನು ಒತ್ತುವರಿದಾರನ್ನಲ್ಲ.ನಾನು ಖರೀದಿದಾರ ಈ ಬಗ್ಗೆ 2012 ರಲ್ಲಿ ಹೈ ಕೋರ್ಟ್ ಈ ಬಗ್ಗೆ ಹೇಳಿದೆ. ಇದು ರಾಜಕೀಯ ದುರದ್ದೇಶ ಅವರಂದುಕೊಂಡಂತೆ ಯಾವುದೆ ಘರ್ಷಣೆಗೆ ಇಲ್ಲಿ ಅವಕಾಶ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.
ಶ್ರೀನಿವಾಸಪುರ:ಸರ್ವೆ ಮಾಡಿ ಎಂದು ನಾನೆ ಅರ್ಜಿ ಹಾಕಿದ್ದೆ ಈಗ ನೀವು ಬಂದಿದ್ದೀರ ನಾನ್ಯಾಕೆ ಇದಕ್ಕೆ ಅಡ್ಡಿ ಮಾಡಲಿ ಎಂದು ಮಾಜಿ ಸ್ಪೀಕರ್ ರಮೇಶಕುಮಾರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ತಾಲೂಕಿನ ರಾಯಲ್ಪಾಡು ಹೋಬಳಿ ಹೊಸಹುಡ್ಯ ಕಂದಾಯ ವೃತ್ತದ ಸರ್ವೆ ನಂ 1 ಮತ್ತು 2 ರಲ್ಲಿನ 61.39 ಎಕರೆ ಜಿನಗಲಕುಂಟೆ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಒತ್ತುವರಿ ಆರೋಪ ಪ್ರಕರಣದ ಹಿನ್ನಲೆಯಲ್ಲಿ ಇಂದು ಬುಧವಾರ ಸರ್ವೆ ಕಾರ್ಯ ಮಾಡಲು ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಲು ಬಂದವರಿಗೆ ಹೇಳಿದರು.
ದಾಖಲೆಗಳು ನನ್ನ ಪರವಾಗಿದೆ ನಾನೇಕೆ ಅಂಜಬೇಕು
ನಾನು ಹುಟ್ಟುವ ಮುಂಚೆ ಈ ಜಮೀನಿಗಳು ಮಂಜೂರಾಗಿದೆ ಇದುವರಿಗೂ ದುರಸ್ತಿ ಆಗಿಲ್ಲ ದಾಖಲೆಗಳು ನನ್ನ ಪರವಾಗಿದೆ ನಾನೇಕೆ ಅಂಜಬೇಕು ಎಂದ ರಮೇಶ್ ಕುಮಾರ್ ಸ್ವತಃ ಸ್ಥಳದಲ್ಲೆ ಇದ್ದು ನೀವು ಮಾಡುವ ಸರ್ವೆ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದ ಅವರು 2002 ರಲ್ಲಿ ಹೈಕೋರ್ಟ್ ನಲ್ಲಿ ಜಂಟಿ ಸರ್ವೆ ಮಾಡಿ ಜಾಗ ಗುರುತಿಸಿ ಕೊಡುವಂತೆ ನಾನೆ ಮನವಿ ಮಾಡಿದ್ದೆ, ನನಗೆ ಒಂದು ಇಂಚು ಅರಣ್ಯ ಭೂಮಿ ಬೇಡ,ನೀವು ಸರ್ವೆ ಮಾಡಿ ಜಾಗ ಗುರುತಿಸಿ ಎಂದು ರಮೇಶ್ ಕುಮಾರ್ ಹೇಳಿದರು.
ಕೋಲಾರ ಜಿಲ್ಲಾಧಿಕಾರಿ ಎಂ.ಅರ್.ರವಿ ಹೈ ಕೋರ್ಟ್ ಆದೇಶದಂತೆ ಜಂಟಿ ಸರ್ವೇ ಕಾರ್ಯವನ್ನು ಮಾಡಲಾಗುತ್ತಿದೆ. ನಾಲ್ಕು ತಂಡಗಳಾಗಿ ಸರ್ವೆ ಕಾರ್ಯ ಮಾಡಲಾಗುತ್ತಿದೆ.ಒಂದು ಸರ್ವೇ ಟೀಂ ಉತ್ತರ, ದಕ್ಷಿಣ, ಪೂರ್ವ,ಪಶ್ಚಿಮ ಗಳನ್ನ ಗುರುತಿಸಲಿದೆ.ರೋವರ್ ಇನ್ಸೂಟ್ರುಮೆಂಟ್ ಮೂಲಕ ಗಡಿಗಳನ್ನ ಕ್ಯಾಪ್ಚರ್ ಮಾಡಲಾಗುತ್ತದೆ.ನಾಲ್ಕು ಗಡಿಗಳಲ್ಲಿ ರೋವರ್ ಮೂಲಕ ಕ್ಯಾಪ್ಚರ್ ಮಾಡಿ ಸರ್ವೆ ರೀಡಿಂಗ್ ಮಾಡಲಾಗುತ್ತದೆ.ಮೊದಲಿಗೆ ಗ್ರಾಮದ ಗಡಿ ನಂತರ ಅರಣ್ಯ ಭೂಮಿ ಸರ್ವೇ.ಅದಾದ ಬಳಿಕ ಅರಣ್ಯ ಗಡಿಯನ್ನ ಗುರುತಿಸಲಾಗುವುದು.ಇದು ಸಂಪೂರ್ಣ ತಾಂತ್ರಿಕತೆಯಿಂದ ಕೂಡಿರುತ್ತದೆ
ಮೊದಲು ಕಂದಾಯ ಬಳಿಕ ಅರಣ್ಯ ಅಧಿಕಾರಿಗಳ ಸರ್ವೇ ರೀಡಿಂಗ್ ನಂತರ ಆಮೇಲೆ ಯಾವ ರೀತಿ ಮಾಡಬೇಕು ಅನ್ನೋದು ತಿಳಿಯಲಿದೆ.ಜಂಟಿ ಸರ್ವೇ ಮುಖ್ಯ ಉದ್ದೇಶ ಹೊಸಹುಡ್ಯ ವಸ್ತು ಸ್ಥಿತಿ ಅರಿಯುವುದಷ್ಟೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆಗೆ ಮಾಡಿದ ಸರ್ವೆ ಸಂಜೆಯಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಮಾಡುವಂತ ಸರ್ವೆಯನ್ನು ಗುರುವರಕ್ಕೆ ಮುಂದೂಡಿದ್ದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ ಜಿಲ್ಲಾಧಿಕಾರಿ ರವಿ ಅವರೊಂದಿಗೆ ಉಪವಿಭಾಗಾಧಿಕಾರಿ ಮೈತ್ರಿ,ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಸಂಜಯ್,ಜಿಲ್ಲಾ ಅರಣ್ಯಾಧಿಕಾರಿ ಸರಿನಾ,ತಾಲೂಕು ಅರಣ್ಯಾದಿಕಾರಿ ಮಹೇಶ್ ತಹಶೀಲ್ದಾರ್ ಸುಧೀಂದ್ರ ಜಿಲ್ಲಾ ವಿವಿದ ಹಂತದ ಕಂದಾಯ ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೋಂಡಿದ್ದರು.
ನೂರವೈತ್ತಕ್ಕೂ ಹೆಚ್ಚು ಪೋಲಿಸರು
ಕೊಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖೀಲ್ ಮುಳಬಾಗಿಲು ಡಿವೈಎಸ್.ಪಿ ನಂದಕುಮಾರ್,ಶ್ರೀನಿವಾಸಪುರ ವೃತ್ತ ಪೋಲಿಸ್ ಅಧಿಕಾರಿಗಳಾದ ಗೊರವನಕೊಳ್ಳ,ಗೌವನಪಲ್ಲಿ ಸಿಐ ಶಿವಕುಮಾರ್ ಕೋಲಾರ್ ಸಿಐ ಸತೀಶ್,ಎಸ್.ಐ ಗಳಾದ ಜಯರಾಮ್,ಶ್ರೀರಾಮ್ ಸೇರಿದಂತೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಒಂದು ತುಕಡಿ, ಜಿಲ್ಲಾ ಮೀಸಲು ಪೊಲೀಸ್ ನಾಲ್ಕು ವ್ಯಾನ್, ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಪೋಲಿಸರು ಬಂದೂಬಸ್ತ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.