ಶ್ರೀನಿವಾಸಪುರ:ಶಾಸಕ ವೆಂಕಟಶಿವಾರೆಡ್ಡಿ ಅವರ 77 ನೇ ವರ್ಷದ ಹುಟ್ಟು ಹಬ್ಬವನ್ನು ಶ್ರೀನಿವಾಸಪುರ ತಾಲೂಕು ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೆಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟಶಿವಾರೆಡ್ಡಿ ಕ್ಷೇತ್ರದ ಜನರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಆಯೋಜಿದ್ದ ವಿಶೇಷ ವೇದಿಕೆ ಸಮಾರಂಭಕ್ಕೆ ಆಗಮಿಸಿದ ಶಾಸಕ ವೆಂಕಟಶಿವಾರೆಡ್ಡಿ
ತಾಲೂಕಿನ ವಿವಿಧಡೆಯಿಂದ ಆಗಮಿಸಿದ್ದ ಅಭಿಮಾನಿಗಳಿಂದ ಶುಭಹಾರೈಕೆಗಳನ್ನು ಸ್ವೀಕರಿಸಿದರು, BARTHDAY ಅಂಗವಾಗಿ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷ ಶಂಕರರೆಡ್ಡಿ ತರಸಿದ್ದ 77 ಕೆ.ಜಿ ತೂಕದ ಕೆಕ್ ಕತ್ತರಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಂಕರರೆಡ್ಡಿ ಜೆ.ತಿಮ್ಮಸಂದ್ರ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ವಾಟರ್ ಫೀಲ್ಟರ್ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಭಾವಿ ಮುಖಂಡ ಸಿ.ಎಮ್.ಆರ್ ಶ್ರೀನಾಥ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ, ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ,ಶಿವಪುರಗಣೇಶ್,ಬಿಇಒ ಮುನಿಶಾಮಪ್ಪ, ಕಲ್ಲೂರುಸುರೇಶ್, ಕಾರ್ ಬಾಬು, ಪೂಲುಶಿವಾರೆಡ್ಡಿ, ಸ್ಟುಡಿಯೋವೇಣು, ಕಲ್ಲೂರುಮನಿಶ್,ಗೋರವಿಮಾಕಲಹಳ್ಳಿಶ್ರೀನಿವಾಸ್,ದಲಿತ ಮುಖಂಡ ಹೂವಳ್ಳಿಕೃಷ್ಣಪ್ಪ,ಯುವಮುಖಂಡ ಅಂಬರೀಶ್,ಕುಮ್ಮಗುಂಟೆ ಮಂಜು, ಪಾತಪಲ್ಲಿಚೌಡರೆಡ್ಡಿ ಮುಂತಾದವರು ಇದ್ದರು