ನಿಜ ಶರಣ ಅಂಬಿಗರ ಚೌಡಯ್ಯನವರು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಕಂದಾಚಾರಗಳನ್ನು ತೊಡೆದುಹಾಕಲು ಬಸವಣ್ಣನ ತತ್ವಾದರ್ಶಗಳನ್ನು ಎತ್ತಿ ಹಿಡಿದು ಸಮಾಜದ ಚಿಂತಕರಾಗಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾಗಿದ್ದರು ಇಂತಹ ಆದರ್ಶ ಪುರುಷನ ಜಯಂತಿ ಆಚರಣೆಗೆ ತಾಲ್ಲೂಕು ಆಡಳಿತದ ಉದಾಸಿನತೆ ತೊರುವುದು ಒಳ್ಳೆಯ ಬೆಳವಣಿಗೆ ಅಲ್ಲ ಜನ ನೋಡಿ ಮಣೆ ಹಾಕುವ ಸಂಸ್ಕೃತಿಯಿಂದ ಸಮಾಜದಲ್ಲಿ ಸೌಹಾರ್ದತೆ ಕದಡುತ್ತದೆ ಅಂಬಿಗರ ಚೌಡಯ್ಯನವರ ಕಾರ್ಯಕ್ರಮದ ಪೂರ್ವಬಾವಿ ಸಭೆಗೆ ಸಮಾಜದ ಬಂಧುಗಳನ್ನು ಅಹ್ವಾನಿಸದೆ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ ಈ ಬಗ್ಗೆ ತಾಲೂಕು ಆಡಳಿತ ತಮ್ಮ ಧೋರಣೆ ಬದಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಾಲೂಕು ಬೆಸ್ತರ ಸಂಗದ ಅಧ್ಯಕ್ಷ ಹಾಗು ವಾಣಿಜ್ಯೋದ್ಯಮಿ ಕೋಟೇಶ್ ಹೇಳಿದರು.
ಶ್ರೀನಿವಾಸಪುರ:ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಕಾಯಕದ ಜೊತೆ ಜೊತೆಗೆ ಸಮಾಜದದಲ್ಲಿನ ಅಸಮಾನತೆ ಹೋಗಲಾಡಿಸಲು, ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಮಹಾನ್ ಪುರುಷ ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳನ್ನು ಎಲ್ಲರು ಪಾಲಿಸಬೇಕಾಗಿದೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂಧ್ರ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ಬೆಸ್ತರ ಸಂಘದ ವತಿಯಿಂದ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಅಂಕುಡೊಂಕುಗಳನ್ನು ನೇರ,ನಿಷ್ಠುರವಾಗಿ ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬೆಳಕು ಚಲ್ಲಿದ್ದರು ಸಮಾಜದಲ್ಲಿ ಆಘಾತಕಾರಿಯಾದ ಮೂಢನಂಬಿಕೆಗಳ ವಿರುದ್ಧ ನೇರವಾಗಿ ಮಾತನಾಡಿದ ಅವರು ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆ ಮತ್ತು ಪುರುಷ ಸಮಾನತೆಗೆ ಒತ್ತು ನೀಡಿದ ತತ್ವನಿಷ್ಠ, ಶ್ರೇಷ್ಠ ತತ್ವಜ್ಞಾನಿ ವಚನಕಾರರಾಗಿದ್ದರು ಎಂದು ಹೇಳಿದರು.
ಬೆಸ್ತ ಸಮಾಜದ ಮುಖಂಡ ಹಾಗು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಂಚ್ಚಿನೀಳ್ಳಕೋಟೆ ರೆಡ್ಡೆಪ್ಪ ಮಾತನಾಡಿ ಅಂಬಿಗರ ಚೌಡಯ್ಯನವರು ಒಂದು ಜಾತಿಗೆ ಸೀಮಿತವಲ್ಲ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಸಾಮಾನ್ಯ ಜನರು ಅರ್ಥಮಾಡಿಕೊಳ್ಳಬಹುದಾದ ಸರಳ ಪದಗಳಲ್ಲಿ ವಚನಗಳನ್ನು ರಚಿಸಿದ್ದು, ದೇವ ವಾಣಿಯನ್ನು ಜನವಾಣಿಯನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಮುಂದಿನ ದಿನಗಳಲ್ಲಿ ಅಂಬಿಗರ ಚೌಡಯ್ಯ. ಜಯಂತಿ ಅದ್ದೂರಿಯಾಗಿ ಮಾಡೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಜೈರಾಮ್ ಕಸಬಾ ಆರ್.ಐ ಮುನಿರೆಡ್ಡಿ,ಯಲ್ದೂರು ಅರ್.ಐ ಜನಾರ್ಧನ್,ಬೆಸ್ತರ ಸಂಘದ ಮುಖಂಡ ಮುನಿರಾಜು,ಸತ್ಯನಾರಾಯಣ,ನಾಗರಾಜು, ನಿವೃತ್ತ ಇಂಜನೀಯರ್ ಟೆಂಕಾಯಿಲು ಶ್ರೀನಿವಾಸ್, ಮುನಿರೆಡ್ಡಿ,ಟೆಂಫೊ ನಾಗಪ್ಪ,ಗೌವನಪಲ್ಲಿ ವೆಂಕಟರವಣಪ್ಪ,ಟೆಂಕಾಯಿಲು ಸತ್ಯನ್ನ,ನಾರಾಯಣಸ್ವಾಮಿ,ಗಂಗಾದರ ಮುಂತಾದವರು ಇದ್ದರು.