ನ್ಯೂಜ್ ಡೆಸ್ಕ್:ಮಕ್ಕಳು ಹುಟ್ಟಿದರೆ ತಂದೆ-ತಾಯಿಗಳು ಸಂಭ್ರಮಿಸುತ್ತಾರೆ ಅದರಲ್ಲೂ ಗಂಡು ಮಕ್ಕಳು ಹುಟ್ಟಿದರೆ ಅನಂದ ಪರವಶರಾಗುತ್ತಾರೆ ಗಂಡುಮಗುವಿಗೆ ಜನ್ಮ ನೀಡಿದೆ ಎಂದು ಬೀಗುತ್ತಾರೆ ಪ್ರೀತಿ ಧಾರೆ ಎರೆದು ಪೊಷಿಸುತ್ತಾರೆ. ನಂತರದಲ್ಲಿ ಗಂಡು ಮಗು ಬೆಳೆದು ದೊಡ್ಡವರಾದಂತೆ,ಹೆತ್ತವರು ಹೋರೆಯಾಗಿದ್ದಾರೇನೋ ಎಂಬಂತೆ ಕೆಲ ಮಕ್ಕಳು ವರ್ತಿಸುತ್ತಾರೆ ನಾವ್ಯಾಕೆ ಪೋಷಕರನ್ನು ಪೊಷಿಸಬೇಕು ಎಂಬ ಭಾವನೆಯಲ್ಲಿ ದುಷ್ಟ ಮಕ್ಕಳು ನಡೆದುಕೊಳ್ಳುತ್ತಾರೆ ಅಂತ ಸಾಲಿನಲ್ಲಿ ದುಷ್ಟ ಮಗನೊಬ್ಬ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಕರೆದುಕೊಂಡು ಹೋಗಿ ಹರಿಯುವ ನದಿ ಕಾಲುವೆಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾಯಕ ಘಟನೆ ಆಂಧ್ರದ ಪಲ್ನಾಡು ಜಿಲ್ಲೆಯ ಇಪುರ್ ಮಂಡಲದಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಹೇಳಿರುವಂತೆ ನದಿ ದಂಡೆ ಮೇಲೆ ಕಾರನ್ನು ನಿಲ್ಲಿಸಿದ ವ್ಯಕ್ತಿ ವೃದ್ದ ಕೊಂಡಯ್ಯನನ್ನು ಕಾರಿನಿಂದ ಹೊರತೆಗೆದು, ತನ್ನ ಕೈಗಳಿಂದ ಎತ್ತಿ ಕಾಲುವೆಗೆ ಎಸೆದಿರುತ್ತಾನೆ ಅಲ್ಲಿದ್ದ ರೈತರು ತಕ್ಷಣ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಹಿಡಿದು ಕಾಲುವೆಯಲ್ಲಿ ಬಿದ್ದ ವೃದ್ದನ ಉಳಿಸಲು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗಲಿಲ್ಲ ವೃದ್ಧ ಕೊಂಡಯ್ಯ ನೀರಿನಲ್ಲಿ ಮುಳುಗಿದ್ದಾರೆ ದುಷ್ಟ ಮಗನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Breaking News
- ಕಾಶಿಯಲ್ಲಿ ನಡೆಯುತ್ತಿದ್ದ ಗಂಗಾಹಾರತಿ ಸದ್ಯಕ್ಕೆ ಸ್ಥಗಿತ!
- ಹೃದಯ ವಿದ್ರಾಯಕ:ತಂದೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ದುಷ್ಟ ಮಗ!
- ಶ್ರೀನಿವಾಸಪುರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಹ್ಯಾಟ್ರಿಕ್ ಬಾರಿಸಿದ ಅಶೋಕ್
- ಚಿಂತಾಮಣಿ ಕಲಾವಿದೆ ರಶ್ಮಿ ಅರಳಿಸಿದ ರಾಮಂದಿರಕ್ಕೆ ತೋಟಗಾರಿಕೆ ಪ್ರಶಸ್ತಿ!
- ಶ್ರೀನಿವಾಸಪುರ ಹೈವೆ ಪುಟ್ ಪಾತಲ್ಲಿ ವಾಹನ ಗ್ಯಾರೆಜ್,ಕೊಂಪೆಯಂತಾದ ರಸ್ತೆ!
- ಶ್ರೀನಿವಾಸಪುರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಪಂಚಾಯಿತಿ CEO ಡಾ.ಪ್ರವೀಣ್.
- ಅಂಬಿಗರ ಚೌಡಯ್ಯ ತತ್ವಾದರ್ಶ ಇಂದಿಗೂ ಪ್ರಸ್ತುತ ತಹಶೀಲ್ದಾರ್ ಸುಧೀಂದ್ರ
- ಕಲ್ಲೂರಿನಲ್ಲಿ ಶಾಸಕ ವೆಂಕಟಶಿವಾರೆಡ್ಡಿ BIRTHDAY ಕಾರ್ಯಕ್ರಮ
- ರಾಯಲ್ಪಾಡು ಒಂಟಿಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರ ಬಂಧನ
- ಶ್ರೀನಿವಾಸಪುರದಲ್ಲಿ ವೈದೇಹಿ ಆಸ್ಪತ್ರೆಯಿಂದ ನಡೆದ ಆರೋಗ್ಯ ಶಿಬಿರ
Saturday, February 1