ಸಿನಿ ಡೆಸ್ಕ್:ಛತ್ರಪತಿ ಶಿವಾಜಿ ಮಹಾರಾಜ್ ಮಗ ಛತ್ರಪತಿ ಶಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದ್ದು “ಛಾವ” Chhaava ಸಿನಿಮಾದ (ಛಾವ ಅಂದರೆ ಮರಾಠಾಯಲ್ಲಿ ಸಿಂಹದ ಮರಿ ಅಂತ) ಕ್ರೇಜ್ ಹಾಗು ಕಲೆಕ್ಷನ್ ಎರಡು ಜೋರಾಗಿದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಬಾಚುತ್ತಿದೆ.ಸಿನಿಮಾ ನೋಡಿದ ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ.
ಚಿತ್ರದ ಕಥೆ ಛತ್ರಪತಿ ಶಿವಾಜಿ ಮಹಾರಾಜರ ಮರಣದ ನಂತರ ಮರಾಠ ಸಾಮ್ರಾಜ್ಯದ ಎರಡನೇ ಛತ್ರಪತಿಯಾದ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ.ದಕ್ಷಿಣದ ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ Vicky Kaushal ಪ್ರಧಾನ ಪಾತ್ರದಲ್ಲಿ ನಟಿಸಿದ್ದು ಲಕ್ಷ್ಮಣ್ ಉಟೇಕರ್ ಅವರು ‘ಛಾವ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ವಿಕ್ಕಿ ಕೌಶಲ್ ಅವರು ಶಂಭಾಜಿ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.
ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿ ಜೀವಿಸಿದ್ದು ಇದರಿಂದಾಗಿಯೇ ‘ಛಾವ’ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ ಎನ್ನಬಹುದು ಇಷ್ಟೆ ಅಲ್ಲ ಸಿನಿಮಾ ನೋಡಿದ ಪ್ರೇಕ್ಷಕರು ಭಾವುಕರಾಗಿ ಕಣ್ಣೀರೂ ಸುರಿಸುತ್ತ ಚಿತ್ರಮಂದಿರದಿಂದ ಹೋರಬರುತ್ತಿದ್ದಾರೆ.
ಮರಾಠ ಸಾಮ್ರಾಜ್ಯದ ದೊರೆ ಸಾಂಬಾಜಿಯ ರಾಷ್ಟ್ರಪ್ರೇಮ, ಶೌರ್ಯ ಪರಾಕ್ರಮವನ್ನು ನೋಡಿ ಹುಬ್ಬೇರಿಸುತ್ತದೆ ಮೊಘಲರು ಹಿಂದೂಸ್ತಾನದ ರಾಜನಿಗೆ ಇಷ್ಟೆಲ್ಲಾ ಹಿಂಸೆ ಕೊಟ್ರಾ? ತನ್ನ ದೇಶಕ್ಕಾಗಿ ತನ್ನವರಿಗಾಗಿ ಸಾಂಬಾಜಿ ಇಷ್ಟೆಲ್ಲಾ ನೋವು ಅನುಭವಿಸಿದ್ರಾ? ಎಂದು ಆವೇದನೆ ವ್ಯಕ್ತಪಡಿಸುತ್ತಿದ್ದಾರೆ. ನಿಜವಾದ ಇತಿಹಾಸ ನಮಗೆ ಯಾರು ತಿಳಿಸಲಿಲ್ಲ ನಮ್ಮ ಹಿಂದಿನವರು ಇಷ್ಟೆಲ್ಲ ಕ್ರೌರ್ಯ ಅನುಭವಿಸಿದರ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಂಬಾಜಿ ಪಾತ್ರದಲ್ಲಿ ಪರಕಾಯ ಪ್ರವೇಶಮಾಡಿದ್ದಾರೆ ಶಂಬಾಜಿ ಮಾಹಿತಿ ಇಲ್ಲದವರಿಗೆ ವಿಕ್ಕಿಕೌಶಲ್ ಕಾಣಿಸುತ್ತಿದ್ದಾರೆ.
ಮೊಘಲ್ ದೊರೆಗಳ ನಿದ್ದೆಗೆಡಿಸಿದ ಸಿಂಹದ ಮರಿ ರಣರೋಚಕ ಆರ್ಭಟವೇ ಹೀಗಿದ್ದರೆ ಇನ್ನು ಸಿಂಹದ ಕಥೆ ಹೇಗಿರುತ್ತೋ ಎಂದು ಕೆಲವರು ಊಹಿಸಿಕೊಳ್ಳುತ್ತಿದ್ದಾರೆ. ‘ಛಾವ’ ಅಂದರೆ ಸಿಂಹದ ಮರಿ. ಮರಾಠ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಮಹಾನ್ ಛತ್ರಪತಿ ಶಿವಾಜಿ. ಆತನ ಬಳಿಕ ಪುತ್ರ ಸಾಂಬಾಜಿ ಹಿಂದು ಸಾಮ್ರಾಜ್ಯವನ್ನು ಮುನ್ನಡೆಸಿದ ಕಥೆ.
https://www.moviecrow.com/trailers/5170/chhaava-hindi-movie-trailer