ನ್ಯೂಜ್ ಡೆಸ್ಕ್:ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದ್ದು ಚಿರತೆ leopard ದಾಳಿಯಿಂದ ರೈತ ರಾಮು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯಜಿಲ್ಲೆಯ ಮದ್ದೂರು ತಾಲೂಕು ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ಇತ್ತಿಚಿಗೆ ಕಾಡು ಪ್ರಾಣಿಗಳ ಉಳಪಟದಿಂದ ರೈತರು ಹೈರಾಣವಾಗಿದ್ದು ಮಂಡ್ಯ ಜಿಲ್ಲೆಯ ಬಹುತೇಕ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಆಹಾರ ಹುಡುಕುತ್ತಾ ಅರಣ್ಯ ಪ್ರದೇಶಗಳಿಂದ ಹಳ್ಳಿಗಳತ್ತ ಹೆಜ್ಜೆ ಹಾಕುತ್ತಿರುವ ಚಿರತೆಗಳು, ಜಾನುವಾರು, ಕುರಿ, ಮೇಕೆ, ಬೀದಿ ನಾಯಿಗಳ ಮೇಲೆ ದಾಳಿ ನಡೆಸುತ್ತಿವೆ.ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗೂ ರೈತರು ತಮ್ಮ ಜಮೀನುಗಳಿಗೆ ತೆರಳಲು ಆತಂಕಪಡುವಂತಾಗಿದೆ.
ರೈತ ರಾಮು ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿದೆ ಇದರಿಂದ ರೈತನ ಬೆನ್ನು, ಕುತ್ತಿಗೆ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ರೈತ ರಾಮು ಪ್ರಾಣಪಾಯದಿಂದ ಪಾರಾಗಿದ್ದಾನೆ.
AlsoRead:https://www.vcsnewz.com/leopard-spotted-in-mysore-infosyready-to-catch-forest-departments-campus/Infosys ಕ್ಯಾಂಪಸ್ ಗೆ ಬಂದ ಚಿರತೆ! ಹಿಡಿಯಲು ಸಜ್ಜಾದ ಅರಣ್ಯ ಪಡೆ