ಶ್ರೀನಿವಾಸಪುರ:ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ 2024ರ ಜನವರಿ 22ರಲ್ಲಿ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಪೂರೈಸಿದೆ ಇದರ ಅಂಗವಾಗಿ ಶ್ರೀನಿವಾಸಪುರದ ಕಸಬಾ ಹೋಬಳಿ ನಲ್ಲಪಲ್ಲಿ ಗ್ರಾಮದಲ್ಲಿ ರಾಮರ ಗುಡಿ ಆವರಣದಲ್ಲಿ ವಿಶೇಷ ಪೂಜೆ ಹೋಮ ಹವನ ಆಯೋಜಿಸಲಾಗಿತ್ತು.
ಶ್ಯಾನುಭೋಗ ಸೂರ್ಯನಾರಯಣರಾವ್ ಕುಟುಂಬದ ಖ್ಯಾತ ಹೈಕೋರ್ಟ್ ವಕೀಲ ನಟರಾಜಶರ್ಮ,ವಾಣಿಜ್ಯೋದ್ಯಮಿ ಅನಂತನಾರಯಣಶರ್ಮ,ರೇಷ್ಮೆ ಇಲಾಖೆ ಹೀರಿಯ ಅಧಿಕಾರಿ ಶ್ರೀನಿವಾಸಶರ್ಮ ಕುಟುಂಬದವರು ಪಾಲ್ಗೋಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಬಿ.ವಿ.ರೆಡ್ಡಿ,ಆನಂದಗೌಡ,ಮುಖ್ಯಾಧಿಕಾರಿ ನಾಗರಾಜ್,ಮಾಜಿ ಸದಸ್ಯೆ ಚೈತನ್ಯಬಾಬು,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇಪೇಟೆ ಮಂಜು,ಬಿಜೆಪಿ ಲಕ್ಷ್ಮಣಗೌಡ ಪೂಲುಶಿವಾರೆಡ್ಡಿ,ಬಿಜೆಪಿರೆಡ್ಡಪ್ಪ ವಕೀಲಸೊಣ್ಣೆಗೌಡ ಗೋಪಾಲರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ವಕೀಲ ನಟರಾಜಶರ್ಮ ಮಾತನಾಡಿ ಅಯೋಧ್ಯೆ ಪ್ರಭು ಶ್ರೀರಾಮನ ಜನ್ಮಸ್ಥಳವೆಂದು ನಮ್ಮ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ 2024ರಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿದ್ದು ರಾಮ ಮಂದಿರ ಹಿಂದೂ ಧರ್ಮೀಯರ ಜೀವಾಳವಾಗಿದೆ.ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ತುಂಬಿದೆ ಇದರ ಅಂಗವಾಗಿ ನಲ್ಲಪಲ್ಲಿಯ ರಾಮಮಂದಿರದಲ್ಲಿ ಭಗವಾನ್ ರಾಮನಿಗೆ ಸಮರ್ಪಿತವಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀ ರಾಮತಾರಕ ಹೋಮ ಆಯೋಜಿಸಿ ಧನ್ಯರಾದೆವು ಎಂದರು.