ಶ್ರೀನಿವಾಸಪುರ: ಈ ಬಾರಿ ವಿಧಾನ ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಎಂಬ ಹೆಗ್ಗಳಿಕೆಯನ್ನು ಸಿಎಂ ಸಿದ್ದರಾಮಯ್ಯ ಹೊಂದಲಿದ್ದಾರೆ.
ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಮಾರ್ಚ್ 21ರವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಾರಿಗೆ ಮಂಡಿಸಲಿದ್ದು ಬಜೆಟ್ ಕುರಿತಾಗಿ ಶ್ರೀನಿವಾಸಪುರದ ಜನತೆ ಸಾಕಷ್ಟು ನೀರಿಕ್ಷೆಗಳನ್ನು ಹೊಂದಿದ್ದಾರೆ.
2025 ವರ್ಷದ ಮೊದಲ ಅಧಿವೇಶನ ಇದಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ.ಇದಾದ ಬಳಿಕ ಮಾರ್ಚ್4, 5,6ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತದೆ. ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯನವರು 2025-26ನೇ ಸಾಲಿನ ಬಜೆಟ್ ಅಂದಾಜು 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಮುಖ್ಯಮಂತ್ರಿಗಳ ಬಜೆಟ್ ತಾಲೂಕು ಜನರ ನಿರೀಕ್ಷೆ ಏನು?
ಶ್ರೀನಿವಾಸಪುರ ಕೇಂದ್ರಿಕೃತವಾಗಿ ಪ್ರಪಂಚ ಪ್ರಸಿದ್ಧ ಮಾವು ಬೆಳೆಯನ್ನು ಸುಮಾರು 50 ಸಾವಿರ ಹೆಕ್ಟೇರ್ ನಲ್ಲಿ ಮಾವು ಬೆಳೆಯಲಾಗುತ್ತಿದೆ ಇಲ್ಲಿನ ಜನರ ಜೀವನಾಡಿ ಮಾವುಬೆಳೆಗೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆ ಇರುವುದಿಲ್ಲ ಪ್ರತಿ ವರ್ಷ ಬಜೆಟ್ ನಲ್ಲಿ ಮಾವುಬೆಳೆಗಾರರಿಗೆ ನೆರವು ಸಿಗಬಹುದು ಎಂಬ ನಿರೀಕ್ಷೆಯನ್ನು ಇಲ್ಲಿನ ಮಾವು ಬೆಳೆಗಾರರು ಇಟ್ಟುಕೊಳ್ಳುತ್ತಾರೆ ಆದರೆ ಮಾವು ಬೆಳೆಗಾರರನ್ನು ಕೈ ಹಿಡಿಯುವಲ್ಲಿ ಸರ್ಕಾರಗಳು ವಿಫಲವಾಗಿದೆ ಎನ್ನುವ ಆರೋಪ ಇದೆ.
ಸ್ಥಳೀಯವಾಗಿ ಸುಮಾರು ಮೂರು ಖಾಸಗಿ ಮಾವು ಸಂಸ್ಕರಣದ ಘಟಕಗಳು ಇವೆ ಇದರೊಂದಿಗೆ ದೊಡ್ದಮಟ್ಟದ ಸರ್ಕಾರಿ ಮಾವು ತಿರುಳು ಸಮಗ್ರ ಸಂಸ್ಕರಣದ ಘಟಕ ಬೇಕು ಎನ್ನುವ ಕೂಗು ಸಾಕಷ್ಟು ವರ್ಷದಿಂದ ತಾಲೂಕಿನ ಮಾವು ಬೆಳೆಗಾರರಿಂದ ಕೇಳಿಬರುತ್ತಿದೆ.ಇದಕ್ಕೆ ಜೀವ ತುಂಬ ಕೆಲಸ 2025 ಬಜೆಟ್ ನಲ್ಲಿ ಆಗಬೇಕಿದೆ ಹಾಗೆ ರಾಜಕೀಯ ನಿರಾಶ್ರೀತರ ಶಿಭಿರ ಎನ್ನುವಂತ ಆರೋಪ ಹೊತ್ತಿರುವ ಮಾವು ಮಂಡಳಿಯ ಮುಖ್ಯ ಕಚೇರಿ ತಾಲೂಕಿನಲ್ಲಿದೆ ಮಾವು ಮಂಡಳಿಗೆ ಬಜೆಟ್ ನಲ್ಲಿ ಅಗತ್ಯ ನೆರವು ಸಿಕ್ಕರೆ ಸಣ್ಣ-ಪುಟ್ಟ ಮಾವು ಬೆಳೆಗಾರರಿಗೆ ಆರ್ಥಿಕ ಹಾಗು ನೈಪುಣ್ಯತೆಯ ಸಹಕಾರ ಸಿಗಲಿದೆ ಎನ್ನುತ್ತಾರೆ.
ಎಪಿಎಂಸಿ ಮಾರುಕಟ್ಟೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಗ್ರೇಡ್ ಆಗಬೇಕು
ಇಲ್ಲಿನ ಕೃಷಿ ಉತ್ಪನ್ನಮಾರುಕಟ್ಟೆ ಅಪಗ್ರೇಡ್ ಆಗಬೇಕಿದೆ ಅಂತರಾಷ್ಟ್ರೀಯ ದರ್ಜೆಯ ಮಾರುಕಟ್ಟೆ ನಿರ್ಮಾಣ ಆಗಬೇಕು ಆದರೆ ಇಲ್ಲಿ ಯಾರದೋ ಮೂಲಾಜಿಗೆ ಮಾರುಕಟ್ಟೆ ನಡೆಸುವಂತೆ ಇಲ್ಲಿನ ವ್ಯವಸ್ಥೆ ಇದೆ.ಈಗ ಕಾಲ ಬದಲಾಗಿದೆ ಎಲ್ಲವೂ AI ತಂತ್ರಜ್ಞಾನದ ವೇಗದಲ್ಲಿ ಕಾಲ ನಡೆಯುತ್ತಿದೆ ಆದರೆ ಪ್ರಪಂಚ ಪ್ರಸಿದ್ದ ಮಾವು ಮಾರುಕಟ್ಟೆ ವ್ಯವಸ್ಥೆಗೆ ಮಾತ್ರ ಜೀವ ತುಂಬುವ ಕೆಲಸ ಆಗುತ್ತಿಲ್ಲ ಇಕ್ಕಾಟದ ರಸ್ತೆಗಳು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿ ಮಾರುಕಟ್ಟೆ ಆಡಳಿತ ಸಾಗುತ್ತಿದೆ ಎಂಬ ಆರೋಪ ಇದೆ.
ಕೂಲಿ ಕಾರ್ಮಿಕರಿಗೆ ಕನಿಷ್ಠ ಸೌಕರ್ಯಗಳಿಲ್ಲ
ಮಾವು ಸಿಸನ್ ಸಂದರ್ಭದಲ್ಲಿ ಮಾವಿನ ಮಂಡಿಗಳಲ್ಲಿ ಕೆಲಸ ಮಾಡಲು ಬರುವಂತ ವಲಸೆ ಕೂಲಿಕಾರ್ಮಿಕರು ಕನಿಷ್ಠ ಮೂಲಭೂತ ಸೌಕರ್ಯಗಳು ಪಡೆಯಲು ಸಾಧ್ಯವಿಲ್ಲ ಅಂತಹ ಹೀನಾಯ ಪರಿಸ್ಥಿತಿ ಮಾರುಕಟ್ಟೆಯಲ್ಲಿದೆ. ಕೂಲಿಕಾರ್ಮಿಕರು ಆಶ್ರಪಡೆಯಲು ಇಲ್ಲಿನ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಯಲ್ಲಿ ಆಶ್ರಯಧಾಮ ಅಥಾವ ತಂಗುದಾಣಗಳ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎನ್ನುವುದು ಬೇಡಿಕೆ.
ಗೌವನಪಲ್ಲಿ ಪಟ್ಟಣಪಂಚಾಯಿತಿ ಆಗುತ್ತದ!
ತಾಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಕೇಂದ್ರವಾದ ಗೌವನಪಲ್ಲಿ ಶ್ರೀನಿವಾಸಪುರ ಪಟ್ಟಣಕ್ಕೆ ಸರಿಸಮನಾಗಿ ವ್ಯವಹಾರಿಕವಾಗಿ ಅಭಿವೃದ್ಧಿಯಾಗುತ್ತಿರುವ ಗ್ರಾಮಪಂಚಾಯಿತಿ ಇದನ್ನು ಪಟ್ಟಣಪಂಚಾಯಿತಿಗಾಗಿ ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಬೇಡಿಕೆ ಕೆಲ ವರ್ಷಗಳಿಂದ ಕೇಳಿಬರುತ್ತಿದೆ ಕಳೆದ ವರ್ಷ ಬಜೆಟ್ ನಲ್ಲಿ ಇನ್ನೇನು ಗೌವನಪಲ್ಲಿ ಪಟ್ಟಣಪಂಚಾಯಿತಿ ಘೋಷಣೆ ಆಗೆ ಬಿಡ್ತು ಎಂಬ ಕೂಗು ಎದ್ದಿತ್ತಾದರೂ ಗ್ಯಾರೆಂಟಿ ಯೋಜನೆಗಳ ಅಲೆಯಲ್ಲಿ ಕೂಗು ಸದ್ದಡಗಿತು.
ಯದರೂರು ಕೈಗಾರಿಕ ವಲಯ ಏನಾಗಲಿದೆ
ಯಲ್ದೂರು ಹೋಬಳಿ ಯದರೂರು ವ್ಯಾಪ್ತಿಯಲ್ಲಿ ಕೈಗಾರಿಕ ವಲಯ ನಿರ್ಮಾಣ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅದಿಕೃತವಾಗಿ ಘೋಷಿಸಿದೆ ಆದರೂ ಈ ವಿಚಾರ ಸ್ಥಳೀಯವಾಗಿ ರಾಜಕೀಯ ಪ್ರತಿಷ್ಟೆಗೆ ಒಳಪಟ್ಟು ಹಗ್ಗಜಗ್ಗಾಟದಲ್ಲಿದೆ ಎಂದು ಹೇಳಲಾತ್ತಿದೆ.
Breaking News
- ಮಾಲೂರಿನ ಬೈರನದೊಡ್ಡಿ ನಗರೇಶ್ವರ ದೇವಾಲಯ ಲೋಕಾರ್ಪಾಣೆ
- ಚಿಂತಾಮಣಿ-ಮದನಪಲ್ಲಿ ರಸ್ತೆ ಖಾಸಗಿ ಬಸ್ ಡಿಕ್ಕಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ!
- ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ನಿರಾಶದಾಯಕ ಬಜೆಟ್ ಎಲ್ಲೆಡೆ ಟೀಕೆ!
- ಮಾವುಬೆಳೆಗಾರರಿಗೆ ಏನೂ ಘೊಷಿಸದ ಸಿದ್ದರಾಮಯ್ಯ sweet 16 ಬಡ್ಜೆಟ್.
- ಶ್ರೀನಿವಾಸಪುರ ಜನರಿಂದ ಸಿದ್ದರಾಮಯ್ಯ ಬಜೆಟ್ ಮೇಲೆ ಭಾರೀ ನೀರಿಕ್ಷೆ!
- ಜೆಡಿಎಸ್ CMR ಶ್ರೀನಾಥ್ ಮನೆಗೆ ಪೇಜಾವರ ಸ್ವಾಮಿಜಿ ಭೇಟಿ!
- ಬುಲೆಟ್ ಬೈಕುಹತ್ತಿ ಪೋಲಿರೈಡ್ ಮಾಡಿದ್ದ LOVER ಬಂಧನ!
- ಕಾಂಗ್ರೆಸ್ ಮಂತ್ರಿ ವಿರುದ್ದ ಅರಣ್ಯ ಭೂಮಿ ಒತ್ತುವರಿ ಆರೋಪ
- ಶ್ರೀನಿವಾಸಪುರ:ವಿಧವೆ ಮನೆಶೆಡ್ ಕಾಂಪೌಂಡ್ ದೌರ್ಜನ್ಯದಿಂದ ಧ್ವಂಸ ಆರೋಪ
- ಶ್ರೀನಿವಾಸಪುರ:ಶಿವರಾತ್ರಿ ಸಂಭ್ರಮ ಅರಕೇರಿ ನಾಗನಾಥೇಶ್ವರನಿಗೆ ರಥೋತ್ಸವ
Wednesday, March 12