ವಿಭಜಿತ ಕೋಲಾರ-ಚಿಕ್ಕಬಳ್ಳಾಪುರದ ರೈತಾಪಿ ಜನರ ಆಶೋತ್ತರಗಳಿಗೆ ಸ್ಪಂದಿಸದೆ ಸಿದ್ದರಾಮಯ್ಯ ನಿರಾಶದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ವಿಶೇಷವಾಗಿ ಮಾವು ಬೆಳೆಗಾರರು ತೀವ್ರ ಅಕ್ರೋಶ ಹೊರಹಾಕಿದ್ದಾರೆ.

ಶ್ರೀನಿವಾಸಪುರ:ರೈತರ ಆಶೋತ್ತರಗಳಿಗೆ ಸ್ಪಂದಿಸದೆ ಗೊತ್ತು ಗುರಿ ಇಲ್ಲದಂತೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣ ಕಿವಿ ಇಲ್ಲದೆ ರೈತ ವಿರೋಧಿ ಬಜೆಟ್ ಮಂಡಿಸಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಗದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳಿದ್ದಾರೆ.
ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಮಳೆಯಿಲ್ಲದ ಬರಡು ಭೂಮಿಯಲ್ಲಿ ನೆತ್ತರು ಹರಿಸಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ನಗರದ ಜನರಿಗೆ ಉಣಬಡಿಸುತ್ತಿದ್ದಾರೆ ಅಂತಹವರ ಕನಿಷ್ಠ ಕಷ್ಟ ಅರಿಯದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡಪಾಯಿ ರೈತರ ಮರಣ ಶಾಸನ ಬರೆಯಲು ಹೋರಟಿದ್ದಾರೆ ಎಂದು ತಮ್ಮ ಟೀಕಿಸಿದ್ದಾರೆ.
ಅವಿಭಜಿತ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬಜೆಟ್ ಕುರಿತಾಗಿ ಜಿಲ್ಲೆಗಳಿಗೆ ಆಗಿರುವ ಅನ್ಯಾಯದ ವಿರುದ್ದ ವಿಧಾನಸೌಧದಲ್ಲಿ ಪಕ್ಷಾತೀತವಾಗಿ ಚರ್ಚೆ ಮಾಡುವಂತರಾಗಿ ಎಂದು ಒತ್ತಾಯಿಸಿದ್ದಾರೆ.
ಯಾವುದೆ ನದಿ ಮೂಲಗಳು ಇಲ್ಲದ ನಮ್ಮ ಭಾಗಕ್ಕೆ ಇತರೆ ಕಡೆಯಿಂದ ನೀರನ್ನು ತಂದು ನಮ್ಮ ಭಾಗದ ಕೆರೆಗಳನ್ನು ತುಂಬಿಸಿ ರೈತರ ಬದುಕನ್ನು ಹಸನು ಮಾಡುವಂತೆ ಸಿದ್ದರಾಮಯ್ಯನವರನ್ನು ಕೋರಿಕೊಂಡಿದ್ದೆವು ಮಾವಿನ ಹಣ್ಣು ಮತ್ತು ತರಕಾರಿಗಳನ್ನ ಬೆಳೆದು ಕೊಡುವಂತಹ ಭಾಗವಾಗಿದ್ದು ಇಲ್ಲಿ ಹೈಟೆಕ್ ಮಾವು ಸಂಸ್ಕರಣ ಘಟಕಗಳು ಹಾಗೂ ತರಕಾರಿಗಳು ಸಂಸ್ಕರಣೆಗಳು ಮತ್ತು ಉಪ್ಪಿನಕಾಯಿ ಕಾರ್ಖಾನೆಗಳು ಘೋಷಣೆ ಆಗಬೇಕೆಂದು ಬೇಡಿಕೆ ಇತ್ತಿದ್ದೇವು ಈ ಬಗ್ಗೆ ಕಿಂಚಿತ್ತಾದರೂ ಕಾಳಜಿಯನ್ನ ವಹಿಸದೆ ಇರುವುದು ನಮ್ಮ ದುರಂತವಾಗಿದೆ ರಾಜ್ಯ ಸರ್ಕಾರಕ್ಕೆ ಮತ್ತು ಈ ಭಾಗದ ಎಲ್ಲ ಜನಪ್ರತಿನಿಧಿಗಳು ಮಾವು ಮಹಾಮಂಡಳಿಯನ್ನು ಮರೆತುಬಿಟ್ಟಿದ್ದಾರೆ ಕನಿಷ್ಠಪಕ್ಷ ಮಾವು ಮಂಡಳಿ ಅನ್ನುವುದು ಇದೆ ಅದಕ್ಕೆ ಸರ್ಕಾರದಿಂದ ಅನುದಾನವನ್ನು ಕೊಡಿಸಬೇಕು ಸರ್ಕಾರ ಮತ್ತು ರೈತನ ನಡುವಿನ ಸೇತುವೆ ಅಗಬೇಕು ಅನ್ನುವ ಪರಿಜ್ಞಾನ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲ ಇದೊಂದು ತೋರಿಸದ ನಿರಾಶೆ ಬಜೆಟ್ ಆಗಿದೆ.
ಕೋಲಾರವನ್ನು ನಿರ್ಲಕ್ಷ್ಯಸಿ ಸಿದ್ದರಾಮಯ್ಯ ಬಜೆಟ್ ಮಂಡನೆ
ನವ ಉದಾರಿಕರಣ ನೀತಿಗಳಿಗೆ ಮಣೆ ಹಾಕಿ ಬಜೆಟ್ ಮಂಡಿಸಿರುವ 2025-26 ನೇ ಬಜೆಟ್ ನಲ್ಲಿ ಕೃಷಿ ವ್ಯವಸ್ಥೆ ಹಾಗೂ ಕೃಷಿ ಭೂಮಿ ರಕ್ಷಣೆ ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಹಾಗು ಕಾರ್ಮಿಕ ನಾಯಕ ಪಿ.ಆರ್.ಸೂರಿ ಆರೋಪಿಸಿದ್ದಾರೆ.
ಬಗರುಹುಕುಂ ಸಾಗುವಳಿ, ಅರಣ್ಯ ಸಾಗುವಳಿ, ರೈತರ ಭೂ ಸ್ವಾಧೀನ ರೈತರ ಹಾಗೂ ಬಡವರ ಮನೆ ನಿವೇಶನ ಗಳ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ.
ಎಲ್ಲಾ ರಂಗಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿರುವ ಸಿದ್ದರಾಮಯ್ಯನವರ ಬಜೆಟ್ ಬಂಡವಾಳ ಹೂಡುವ ಕಾರ್ಪೊರೇಟ್ ಸಂಸ್ಥೆಗಳು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಂತಿದೆ ಶಿಕ್ಷಣ ಆರೋಗ್ಯ ಕೃಷಿ ಮಾರುಕಟ್ಟೆ ಕ್ಷೇತ್ರಗಳಲ್ಲಿ ಖಾಸಗಿಕರಣ ಹಾಗೂ ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಲಾಗಿದೆ. ಇದು ಮತ್ತಷ್ಟು ನಿರುದ್ಯೋಗ ಕೃಷಿ ಬಿಕ್ಕಟ್ಟು ಹಾಗು ಬೆಲೆ ಏರಿಕೆಗೆ ಕಾರಣವಾಗಲಿದೆ.
ಕೋಲಾರ ಜಿಲ್ಲೆ ಜನತೆಯ ನಿರೀಕ್ಷೆಗಳಾದ ಎತ್ತಿನಹೊಳೆ ನೀರು ತುಮಕೂರು ಮತ್ತು ಚಿತ್ರದುರ್ಗ ಕೆರೆ ಗಳಿಗೆ ಸೀಮಿತಗೊಳ್ಳಲಿದೆ. ಕೆ ಸಿ ವ್ಯಾಲಿ ನೀರು ಮೂರನೇ ಹಂತದ ಶುದ್ಧೀಕರಣವನ್ನು ಸಹ ಪ್ರಸ್ತಾಪಿಸಿಲ್ಲ ಕೋಲಾರ ಜಿಲ್ಲೆಗೆ ಮುಖ್ಯವಾಗಿ ಪಶು ಸಂಶೋಧನಾ ಕೇಂದ್ರ ಹಾಗೂ ಕಾಲೇಜು ಬೇಕೆನ್ನುವ ಬೇಡಿಕೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ತರಕಾರಿ ಮತ್ತು ಹಣ್ಣು ಬೆಳೆಯುವುದರಲ್ಲಿ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರು ಇಲ್ಲಿ ಮಾರುಕಟ್ಟೆಗಳನ್ನ ಮತ್ತು ಶೀತಲಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಮತ್ತು ವಿಶೇಷವಾಗಿ ಮಾವು ಅಭಿವೃದ್ಧಿಗೆ ಪ್ರೋತ್ಸಾಹಿಸುವ ಕೈಗಾರಿಕೆಗಳ ಬಗ್ಗೆ ಪ್ರಸ್ತಾಪನೆ ಇಲ್ಲದಿರುವುದು ದುರುದೃಷ್ಟಕರ ಕೆಜಿಎಫ್ ನಲ್ಲಿ ಮಾರುಕಟ್ಟೆ ಕೋಲಾರದಲ್ಲಿ ಆಸ್ಪತ್ರೆ , ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಇವು ಘೋಷಣೆ ಆಗಿರುವುದಿಲ್ಲ ನಮ್ಮ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೈನುಗಾರಿಕೆಯಲ್ಲಿನ ಕರ್ನಾಟಕ ರಾಜ್ಯದ ಹಾಲು ಉತ್ಪಾದಕರಿಗೆ ಕಳೆದ ನಾಲ್ಕೈದು ತಿಂಗಳ ಸರ್ಕಾರದಿಂದ ನೀಡುವ ಬಾಕಿ ಇರುವ ಸುಮಾರು 550 ಕೋಟಿ ಪ್ರೋತ್ಸಾಹ ಧನ ಪ್ರಸ್ತಾಪವಾಗದಿರುವುದು ಖಂಡನೀಯ ಎಂದಿರುತ್ತಾರೆ.
