ಇತ್ತಿಚಿಗೆ ಬೆಂಗಳೂರು-ಕಡಪ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ ಕಾರು ಹಾಗು ಬೈಕ್ ಸವಾರರು ಸೇರಿದಂತೆ ವಿವಿಧ ಬಗೆಯಲ್ಲಿ ಅಪಘಾತಕ್ಕೀಡಾಗಿ ಕೈಕಾಲುಗಳನ್ನು ಕಳೆದುಕೊಂಡರೆ, ಮತ್ತೆ ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ.ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಕೆಲವರು ಸಾವಿನ ಮನೆಯ ಕದ ತಟ್ಟಿದ್ದಾರೆ ಇನ್ನು ಕೆಲವರು ಜೀವ ತೆತ್ತಿದ್ದಾರೆ.ಹೆಚ್ಚುತ್ತಿರುವ ಅಪಘಾತಗಳಿಂದ ಈ ರಸ್ತೆಯಲ್ಲಿ ಒಡಾಡುವಂತಹ ಜನ ಓಡಾಡಲು ಭಯ ಬೀಳುತ್ತಿದ್ದಾರೆ.ಅಪಘಾತಗಳಿಗೆ ಮುಖ್ಯ ಕಾರಣ ಅತಿ ವೇಗದ ವಾಹನ ಚಾಲನೆ ಎನ್ನುತ್ತಾರೆ ಸ್ಥಳೀಯರು.
ಶ್ರೀನಿವಾಸಪುರ:ಖಾಸಗಿ ಬಸ್ಸುಗಳು ಓವರ್ ಟೆಕ್ ಮಾಡುವ ದಾವಂತದಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಒರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ಬೆಂಗಳೂರು-ಕಡಪ ಹೆದ್ದಾರಿಯಲ್ಲಿ ಗುಂಟಪಲ್ಲಿ॒@ಗಿಲ್ಜಗೂರ್ ಕ್ರಾಸ್ ಬಳಿ ಮಂಗಳವಾರ ಮದ್ಯಾರಾತ್ರಿ ನಡೆದಿರುತ್ತದೆ.
ಬೆಂಗಳೂರು-ಪ್ರೊದ್ದಟೂರು ನಡುವೆ ಒಡಾಡುವ ಸುವರ್ಣಮುಖಿ ಬಸ್ ಹಾಗೂ ಎ.ಆರ್.ಟ್ರಾವೆಲ್ ಸ್ಲಿಪಿಂಗ್ ಬಸ್ಸುಗಳ್ ನಡುವೆ ಮುಖಾಮುಕಿ ಡಿಕ್ಕಿಯಾಗಿದ್ದು ಅಪಘಾತವಾದ ಘಟನೆಯಲ್ಲಿ ಬಸ್ ನಲ್ಲಿದ್ದ ಓರ್ವ ಸಾವನಪ್ಪಿದರೆ ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.ಮೃತ ಪ್ರಯಾಣಿಕನನ್ನು ಆಂದ್ರದ ಮದನಪಲ್ಲಿ ನಿವಾಸಿ ಗಂಗಾಧರ್ ಎಂದು ಗುರುತಿಸಲಾಗಿದೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.