ಕನ್ನಡ ಚಲನ ಚಿತ್ರ ನಿರ್ಮಾಪಕ ರಮೇಶ್ ರೆಡ್ಡಿ ಕನ್ನಡ ಸಿನಿಮಾ ರಂಗದಲ್ಲಿ ಸದಭಿರುಚಿ ನಿರ್ಮಾಪಕರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.
ಉತ್ತಮ ಕಥಾ ಹಂದರದ ನಾತಿಚರಾಮಿ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿರುವ ರಮೇಶರೆಡ್ಡಿ ಮೂಲತಃ ಕೋಲಾರ ಜಿಲ್ಲೆಯ ನಂಗಲಿಯ ದೊಡ್ಡಗೊಲ್ಲಹಳ್ಳಿಯವರು,ವೃತ್ತಿಯಲ್ಲಿ ಗಾರೆ ಕೆಲಸದ ಗುತ್ತಿಗೆದಾರಾಗಿದ್ದ ಇವರು ಇನ್ಫೋಸಿಸ್ ಸುಧಾಮೂರ್ತಿಯವರ ಕೃಪಾಶಿರ್ವಾದದಿಂದ ಬೆಂಗಳುರಿನಲ್ಲಿ ಬೆಳೆದು ನಿಂತಿದ್ದಾರಂತೆ.
ರಮೇಶ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಆರಂಭವಾಗಲಿದ್ದು,ಶ್ರೀಮುರುಳಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿೃಕೃತವಾಗಿ ಘೋಷಣೆ ಮಾಡಿದ್ದಾರೆ.
ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ಇದು ಏಳನೇ ಸಿನಿಮಾವಾಗಿದೆ, ಈ ಹಿಂದೆ ಪಡ್ಡೆಹುಲಿ, ನಾತಿಚರಾಮಿ ಸಿನಿಮಾಗಳು ನಿರ್ಮಾಣವಾಗಿದ್ದವು, ಇನ್ನೂ ರಮೇಶ್ ಅರವಿಂದ್ ನಿರ್ದೇಶನದ 100, ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾಗಳು ಇನ್ನೂ ರಿಲೀಸ್ ಆಗಬೇಕಾಗಿದೆ.
ಇದೇ ಮೊದಲ ಬಾರಿಗೆ ನಟ ಮುರುಳಿ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಇದೊಂದು ಬೃಹತ್ ಬಜೆಟ್ ಸಿನಿಮಾವಾಗಿದೆ, ಕಥೆಗೆ ನ್ಯಾಯ ಒದಗಿಸುವ ನಿರ್ದೇಶಕನಿಗಾಗಿ ಹುಡುಕಾಟ ನಡೆದಿದೆ, ಶ್ರೀಮುರುಳಿ ಪಾತ್ರವೇ ಚಿತ್ರಕ್ಕೆ ಜೀವಾಳವಾಗಿದೆ. ಸದ್ಯ ಮುರುಳಿ ಮದಗಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅದಾದ ನಂತರ ಡಾ. ಸೂರಿ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ.