ಕೋಲಾರ: ಕೋಲಾರದ ನರಸಾಪುರ ಘಟಕದಲ್ಲಿ ಕಾರ್ಮಿಕರ ದಾಂಧಲೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ವಿಸ್ಟ್ರಾನ್ ಸಂಸ್ಥೆ ತಪ್ಪು ಕಂಡುಬಂದಿರುವುದರಿಂದ ಸಂಸ್ಥೆಯ ಭಾರತದ ಉಸ್ತುವಾರಿದ್ದ ಉಪಾಧ್ಯಕ್ಷನನ್ನು ವಜಾ ಮಾಡಲಾಗಿದಿಯಂತೆ.
ಮಾನವಸಂಪನ್ಮೂಲ ಸಂಸ್ಥೆಯ ಗುತ್ತಿಗೆದಾರರಿಂದ ಆದ ತಪ್ಪುಗಳನ್ನು ತಿದ್ದಿಕೊಳ್ಳಲು ಮುಂದಾಗಿರುವ ಸಂಸ್ಥೆಯು, ಕಾರ್ಮಿಕರ ಕ್ಷಮೆ ಕೋರಿದೆ. ಗುತ್ತಿಗೆದಾರರು ಮಾಡಿರುವ ವ್ಯತ್ಯಸಗಳಿಂದ ಕೆಲ ಕಾರ್ಮಿಕರಿಗೆ ಸಕಾಲಕ್ಕೆ ಸರಿಯಾಗಿ ವೇತನ ಪಾವತಿಯಾಗದೆ ಇರುವುದು ತನಿಖೆ ವೇಳೆ ಕಂಡು ಬಂದಿದೆ ಇದಕ್ಕಾಗಿ ಕಂಪನಿ ವತಿಯಿಂದ ವಿಷಾದಿಸುತ್ತದೆ. ಹಾಗು ಕಾರ್ಮಿರ ಕ್ಷಮೆ ಕೋರಿದೆ. ಅನ್ಯಾಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ತಕ್ಷಣ ಪರಿಹಾರ ಒದಗಿಸುವುದು ಸಂಸ್ಥೆಯ ಪ್ರಧಾನ ಆದ್ಯತೆಯಾಗಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತ್ವರಿಗತಿಯಲ್ಲಿ ಕೈಗೊಳ್ಳಲಾಗುತ್ತಿದೆ,ಎಂದು ಪ್ರಕಟಣೆಯಲ್ಲಿ ವಿಸ್ಟ್ರಾನ್ ತಿಳಿಸಿದೆ.
ಕಾರ್ಮಿಕರಿಗೆ ಕರೆ ಮಾಡಿ ಎಷ್ಟು ತಿಂಗಳಿಂದ ವೇತನ ಬಾಕಿಯಿದೆ, ಎಷ್ಟು ಬಾಕಿಯಿದೆ ಎಂಬ ಮಾಹಿತಿಯನ್ನು ಸಂಸ್ಥೆ ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ವ್ಯವಹಾರ ಸ್ಥಗಿತಗೊಳಿಸಿದ ಆ್ಯಪಲ್
ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ನೀಡದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿಸ್ಟ್ರಾನ್ ಸಂಸ್ಥೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವವರೆಗೆ ಯಾವುದೇ ರೀತಿಯ ಹೊಸ ಗುತ್ತಿಗೆ ನೀಡುವುದಿಲ್ಲವೆಂದು ಆ್ಯಪಲ್ ಕಂಪನಿ ಘೋಷಿಸಿದೆ. ಘಟನೆ ಕುರಿತು ಆಂತರಿಕ ತನಿಖೆ ಮುಂದುವರಿದರೂ, ‘ಸಪ್ಲೆಯರ್ ಕೋಡ್ ಆಫ್ ಕಂಡಕ್ಟ್’ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಂಬಂದಿದೆ ಎಂದು ಆ್ಯಪಲ್ ಪ್ರಕಟಣೆಯಲ್ಲಿ ಹೇಳಿಕೊಂಡಿದಿಯಂತೆ.
ಮಾನವ ಸಂಪನ್ಮೂಲ ಏಜೆನ್ಸಿಗಳಿಗೆ ಬೇಡ
ಗುತ್ತಿಗೆ ಕಾರ್ಮಿಕರ ಏಜೆನ್ಸಿಗಳಿಂದ ಕಂಪನಿಗೆ ಎದುರಾದ ಸಮಸ್ಯೆಗಳು ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಏಜೆನ್ಸಿಗಳ ಸಹವಾಸವೇ ಬೇಡವೆಂಬ ತೀರ್ಮಾನಕ್ಕೆ ಸಂಸ್ಥೆ ಬಂದಿದಿಯಂತೆ ಕಂಪನಿಯಿಂದ ಹಣ ಪಡೆದ ಗುತ್ತಿಗೆ ಮಾನವ ಸಂಪನ್ಮೂಲ ಏಜೆನ್ಸಿಗಳು ಅದನ್ನು ಕಾರ್ಮಿಕರಿಗೆ ನೀಡದ ಕಾರಣ ದಾಂಧಲೆ ನಡೆದಿದೆ. ಇದರಿಂದ ಕಂಪನಿಯ ಹೆಸರಿಗೆ ಧಕ್ಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೇಮಿಸಿಕೊಳ್ಳುವ ಗುತ್ತಿಗೆ ಕಾರ್ಮಿಕರಿಗೆ ಕಂಪನಿಯಿಂದಲೇ ನೇರವಾಗಿ ವೇತನ ಪಾವತಿ ಮಾಡುವುದು ಅಥವಾ ಕಂಪನಿಯ ಮೂಲಕವೇ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ಕಛೇರಿ ತಲುಪಿದ ದಾಂದಲೆ ಪ್ರಕರಣ ಮಾಹಿತಿ
ವಿಸ್ಟ್ರಾನ್ ಕಾರ್ಮಿಕರ ದಾಂದಲೆ ಪ್ರಕರಣದ ಮಾಹಿತಿ ಪ್ರಧಾನಮಂತ್ರಿ ಕಚೇರಿಗೂ ತಲುಪಿದ್ದು ಸಂಸ್ಥೆಯಲ್ಲಿ ನಡೆದಿರುವ ದಾಂದಲೆ ಪ್ರಕರಣದ ಮೇಲೆ ನಿಗಾ ವಹಿಸಿರುವ ಪ್ರಧಾನಮಂತ್ರಿಗಳ ಕಚೇರಿ, ವಿಸ್ಟ್ರಾನ್ ಸಂಸ್ಥೆಗೆ ಅಗತ್ಯ ಸಹಕಾರ ನೀಡುವ ಮೂಲಕ ನರಸಾಪುರದ ಘಟಕ ಉಳಿಸಿಕೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ಸ್ಪಷ್ಟ ಸೂಚನೆ ನೀಡಿದಿಯಂತೆ. ಅದರಂತೆ ಈಗಾಗಲೇ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯು ವಿಸ್ಟ್ರಾನ್ ಘಟನೆಯ ಕುರಿತು ಸಮಗ್ರ ವರದಿಯನ್ನು ಮುಖ್ಯ ಕಾರ್ಯದರ್ಶಿಗಳ ಮೂಲಕ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಸಲ್ಲಿಕೆ ಮಾಡಿದೆ.
ಪರಿಶೀಲನೆಗಾಗಿ ತಂಡ ರಚನೆ
ಕಂಪನಿಯಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಸ್ಪಷ್ಟವಾಗಿದ್ದು, ಕಾರ್ಮಿಕ ಇಲಾಖೆಯಿಂದ ರಚಿಸಲಾದ ತಂಡವು ಕಂಪನಿಗೆ ಭೇಟಿ ನೀಡಿದೆ. ಶೀಘ್ರವೇ ಸಚಿವರಿಗೆ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.
ಡಿಸಿಎಂ ಡಾ.ಅಶ್ವಥನಾರಾಯಣ ಭೇಟಿ ಮುಂದೂಡಿಕೆ
ವೇತನ ವಿಚಾರದಲ್ಲಿ ಕಾರ್ಮಿಕರ ದಾಂಧಲೆಯಿಂದ ಹಾನಿಗೊಳಗಾಗಿದ್ದ ಜಿಲ್ಲೆಯ ನಗರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ಗೆ ಸಂಸ್ಥೆಗೆ ಉಪಮುಖ್ಯಮಂತ್ರಿ ಡಾ.ಸಿ.ಎಸ್. ಅಶ್ವತ್ಥ ನಾರಾಯಣ ಅವರು ಭೇಟಿ ಮಾಡಲು ಮುಂದಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಭೇಟಿಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.