ನ್ಯೂಸ್ ಡೆಸ್ಕ್:-ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಸೋಮುವಿರ್ರಾಜು ಸೋಮವಾರ ಕೋಲಾರದ ಬಿಜೆಪಿ ಮಾಜಿ ಅಧ್ಯಕ್ಷ ಲಕ್ಷ್ಮಯ್ಯ ಅವರನ್ನು ಬೆಂಗಳೂರು ನಿವಾಸದಲ್ಲಿ ಭೇಟಿಯಾಗಿ ತಿರುಪತಿ ಪಾರ್ಲಿಮೆಂಟ್ ಬೈ ಎಲೆಕ್ಷನ್ ಕುರಿತಾಗಿ ಚರ್ಚೆ ನಡೆಸಿರುತ್ತಾರೆ.
ಮೂಲತಃ ಸಂಘ ಪರಿವಾರದ ಹಿನ್ನಲೆಯ, ಹಿಂದುಳಿದ ಕಾಪು ಸಮುದಾಯದ ರಾಜಕೀಯ ನಾಯಕ ದೆಹಲಿ ವಲಯದಲ್ಲಿ ಪ್ರಭಾವಿ ಹೊಂದಿರುವ ಆಂಧ್ರಪ್ರದೇಶದ ಬಿಜೆಪಿ ರಾಜ್ಯಧ್ಯಕ್ಷ ಸೋಮುವಿರ್ರಾಜು ತಮ್ಮ ಹಳೇಯ ಸ್ನೇಹಿತ ಕೋಲಾರದ ಹಿಂದುಳಿದ ಮುಖಂಡ ಲಕ್ಷ್ಮಯ್ಯ ಅವರನ್ನು ಭೇಟಿಯಾಗಿರುತ್ತಾರೆ.ಲಕ್ಷ್ಮಯ್ಯ ಅವರನ್ನು ಅವರ ಬೆಂಗಳೂರು ನಿವಾಸದಲ್ಲಿ ಭೇಟಿಯಾಗಿ ತಿರುಪತಿ ಲೋಕಸಭೆ ಉಪಚುನಾವಣೆ ಸಂಬಂಧ ಚರ್ಚಿಸಿದರು ಎನ್ನಲಾಗಿದೆ.
ಇತ್ತಿಚಿಗಷ್ಟೆ ತಿರುಪತಿ ಲೋಕಸಭೆಯ ಯೈಎಸ್ ಆರ್ ಪಕ್ಷದ ಸದಸ್ಯ ಬಲ್ಲಿದುರ್ಗಾಪ್ರಸಾದ್ ಅನಾರೋಗ್ಯದಿಂದ ಮೃತ ಪಟ್ಟ ಹಿನ್ನಲೆಯಲ್ಲಿ ಚುನಾವಣೆ ಆಯೋಗ ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಿಸಿದೆ ಈ ಕ್ಷೇತ್ರಕ್ಕೆ
ತಿರುಪತಿ ಸೇರಿದಂತೆ ನೆಲ್ಲೂರು ಜಿಲ್ಲೆಯ ನಾಲ್ಕು ಹಾಗು ಚಿತ್ತೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ. ಈ ಭಾಗದ ಬಹುತೇಕರು ಬೆಂಗಳೂರಿನಲ್ಲಿ ನಾನಾ ರೀತಿಯಲ್ಲಿ ಉದ್ಯಮಿಗಳಾಗಿದ್ದಾರೆ ಇವರನ್ನು ಭೇಟಿ ಮಾಡುವ ಸಂಭಂದ ಬೆಂಗಳೂರಿಗೆ ಆಗಮಿಸಿದ್ದ ಸೋಮುವಿರ್ರಾಜು ಲಕ್ಷ್ಮಯ್ಯ ಅವರನ್ನು ಭೇಟಿಯಾಗಿದ್ದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ಮೊನ್ನೆ ನೆಡೆದ ತೆಲಂಗಾಣ ಉಪ ಚುನಾವಣೆಯಲ್ಲಿ ಡಬ್ಬಾಕ ವಿಧಾನಸಭೆ ಕ್ಷೇತ್ರ ಮತ್ತು ಹೈದರಾಬಾದ್ ಕಾರ್ಪೋರೇಷನ್ ಚುನಾವ್ಣೆಯಲ್ಲಿ ಗೆಲವು ಸಾಧಿಸಿದಂತೆ,ತಿರುಪತಿ ಉಪ ಚುನಾವಣೆ ಗೆಲವು ಸಾಧಿಸಲು ಚುನಾವಣೆ ತಂತ್ರ ರೂಪಿಸುತ್ತಿರುವ ಸೋಮು ಉಪಚುನಾವಣೆ ವಿಚಾರವಾಗಿ ತಿರುಪತಿ ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಆಂಧ್ರದ ಉದ್ಯೋಗಿಗಳ,ಉದ್ಯಮದಾರರ,ವಾಣಿಜ್ಯೋದ್ಯಮಿಗಳ ಜೋತೆಗೆ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿ ರಚನಾತ್ಮಕವಾಗಿ ಚುನಾವಣೆ ಎದುರಿಸಿ 1999 ರಲ್ಲಿ ಈ ಕ್ಷೇತ್ರದಲ್ಲಿ ಗೆಲವು ಸಾದಿಸಿದಂತೆ ಈ ಉಪ ಚುನಾವಣೆಯಲ್ಲಿ ಆಂಧ್ರದ ಆಡಾಳಿತ ರೂಡ ಯೈಎಸ್ ಆರ್ ಪಕ್ಷಕ್ಕೆ ಸೆಡ್ಡು ಹೋಡೆದು ಶತಾಯ ಗತಾಯ ತಿರುಪತಿ ಉಪಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂದು ಸೋಮು ಅವರು ಆ ಭಾಗದ ಬೆಂಗಳೂರಿನಲ್ಲಿ ನೆಲಸಿರುವ ಆಂಧ್ರ ವಲಸಿಗರ ಮನ ವೊಲಿಸುವ ಜವಾಬ್ದಾರಿಯನ್ನು ಲಕ್ಷ್ಮಯ್ಯನವರಿಗೆ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಚ.ಶ್ರೀನಿವಾಸಮೂರ್ತಿ