ಬೆಂಗಳೂರು:-ಹೊಸ ರೂಪಾಂತರ ವೈರಸ್ ತಡೆಗಟ್ಟಲು ಕರ್ನಾಟಕ ಸರ್ಕಾರ ಡಿಸೆಂಬರ್ 23 ಬುಧವಾರದಿಂದ, 2021 ರ ಜನವರಿ 2 ರವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.ಜನವರಿ 2 ರಂದು ಬೆಳಿಗ್ಗೆ 6 ಗಂಟೆಗೆ ಕರ್ಫ್ಯೂ ಅಂತ್ಯಗೊಳ್ಳುತ್ತದೆ. ಈ ಸಂದರ್ಭದಲ್ಲಿ 4 ಕ್ಕೂ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಬಾರದು.ಸರ್ಕಾರದ ಮಾರ್ಗಸೂಚಿ ಸಂಜೆ ಬಿಡುಗಡೆ ಮಾಡುವುದಾಗಿ ಹೇಳಿದೆ.
ಕೇಂದ್ರ ಸರ್ಕಾರ ಮತ್ತು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ಹೊಸ ಕೋವಿಡ್-19 ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುತ್ತಾರೆ.
ಬ್ರಿಟನ್ ದೇಶ ಸೇರಿದಂತೆ ಪಾಶ್ಚ್ಯಮಾತ್ಯ ದೇಶಗಳಲ್ಲಿ ಕಂಡುಬಂದಿರುವ ಹೊಸ ವಿದದ ಕೋವಿಡ್ -19 ತಳಿ ಹರಡುವ ಬಗ್ಗೆ ಹೆಚ್ಚುತ್ತಿರುವ ಆತಂಕಗಳಿಂದ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸುವ ತಿರ್ಮಾನಕ್ಕೆ ಬಂದಿರುವುದಾಗಿ ಹೇಳಲಾಗುತ್ತಿದೆ.
ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು
ಶಾಲಾ ಮತ್ತು ಕಾಲೇಜುಗಳನ್ನು ಜನವರಿ 10 ರಿಂದ 10 ನೇ ತರಗತಿ ಮತ್ತು ದ್ವಿತೀಯ ವರ್ಷದ ಪಿಯುಸಿ (12 ನೇ ತರಗತಿ) ವಿದ್ಯಾರ್ಥಿಗಳಿಗೆ ತೆರೆಯಲಾಗುವುದು, ಎರಡು ದಿನಗಳಲ್ಲಿ ಆಗುವ ಏನಾದರೂ ಬೆಳವಣಿಗೆಗಳನ್ನು ನೋಡಿಕೊಂಡು ಅದ್ಯತೆ ಮೇರೆಗೆ ನಿರ್ಣಯ ಕೈ ಗೋಳ್ಳಲಾಗುವುದು.
ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿಗಳು
ಯುಕೆ ಯಿಂದ ಕರ್ನಾಟಕಕ್ಕೆ ಮರಳಿದ ವ್ಯಕ್ತಿಯ ಪರಿಕ್ಷೇ ಪಾಸಿಟಿವ್ ಎನ್ನಲಾಗಿದ್ದರೂ ಎಲ್ಲಾ ರಿತಿಯಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಲಾಗಿದೆ. ಯುಕೆಯಿಂದ ಆಗಮಿಸುತ್ತಿರುವ ಜನರನ್ನು ವಿಮಾನ ನಿಲ್ದಾಣಗಳಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಇಂದಿನಿಂದಲೇ ರಾಜ್ಯವ್ಯಾಪಿ ನೈಟ್ ಕರ್ಫ್ಯೂರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಸಂಪೂರ್ಣ ಬಂದ್
ಹೋಟೆಲ್ ರೆಸ್ಟೋರೆಂಟ್ ಅಂಗಡಿಗಳು ಸೇರಿದಂತೆ ರಾಜ್ಯ ವ್ಯಾಪಿ ಎಲ್ಲಾ ಅಂಗಡಿಗಳು, ವ್ಯಾಪಾರ-ವಹಿವಾಟು ಬಂದ್.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ 9 ದಿನಗಳ ಕಾಲ ರಾತ್ರಿ ಕರ್ಪ್ಯೂ ಜಾರಿ. ಜಾರಿ ಇರುವುದರಿಂದ ಬಸ್ ಸಂಚಾರ ಇರುವುದಿಲ್ಲ.ರಾಜ್ಯದಲ್ಲೂ ಹೊಸವರ್ಷಾಚರಣೆ ಬಂದ್. ಪಾರ್ಟಿ ಮಾಡುವಂತಿಲ್ಲ ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವಂತಿಲ್ಲ.ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ.ಸೋಂಕು ತಡೆಗಟ್ಟಲು ಕಟ್ಟೆಚ್ಚರ.
ಎಲ್ಲಾ ಚಟುವಟಿಕೆಗಳನ್ನು ರಾತ್ರಿ 10 ರೊಳಗೆ ಪೂರ್ಣಗೊಳಿಸಬೇಕು ಮತ್ತು ಜನರು ಮನೆಗೆ ಮರಳಬೇಕು. ಹೊಸ ವರ್ಷದ ಆಚರಣೆಯನ್ನು ನಿರ್ಬಂಧಿಸಲಾಗಿದೆ ಮತ್ತು ಈ ರಾಜ್ಯದ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಕೆ.ಸುಧಾಕರ್
ಆರೋಗ್ಯ ಇಲಾಖೆ ಸಚಿವರು
ಕರ್ನಾಟಕ ಸರ್ಕಾರದ
ವರದಿ:ಮಾಲಿನಿಸುರೇಶ್