ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮುಖಂಡರಿಗೆ ಧನ್ಯವಾದ ತಿಳಿಸಿರುವ ನವೀನ್
ಡಾ.ಸುಧಾಕರ್ ಅವರ ಪೊಲಟಿಕಲ್ ಅಪರೇಷನ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಪ್ರಭಾವಿ ಕಾಂಗ್ರೆಸ್ ಮುಖಂಡ,ಪಂಚಗಿರಿ ವಿದ್ಯಾಸಂಸ್ಥೆಗಳ ಅಧಿಪತಿ, ಮೆಗಾಸ್ಟಾರ್ ಚಿರಂಜೀವಿ ಹಾಗು ಪವರ್ ಸ್ಟಾರ್ ಪವನ್ ಕಲ್ಯಾಣ್ ರವರುಗಳ ಪರಮಾಪ್ತ ಕೆ.ವಿ ನವೀನ್ ಕಿರಣ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಕೆ ವಿ ನವೀನ್ ಕಿರಣ್, ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಕೆ.ವಿ.ನವೀನ್ ಕಿರಣ್, ತನ್ನ ಹಿತೈಷಿಗಳ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿ.ಜೆ.ಪಿ ಸೇರ್ಪಡೆಯಾಗಿರುವುದಾಗಿ ಹೇಳಿರುತ್ತಾರೆ.
ಸಿಎಂ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು ಬಿಜೆಪಿ ಪಕ್ಷ ಸೇರ್ಪಡೆ ಅಧಿಕೃತವಾಗಿದೆ. ಇನ್ನೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಎದುರಾಳಿಯಾಗಿ ಸ್ಪರ್ದಿಯಾಗಿದ್ದ ನವೀನ್ ಕಿರಣ್ ಸೋಲು ಅನುಭವಿಸಿದ್ರು. ಅಂದಿನಿಂದ ರಾಜಕೀಯವಾಗಿ ಸುಧಾಕರ್ ಅವರನ್ನು ರಾಜಕೀಯವಾಗಿ ವಿರೋಧಿಸುತ್ತಿದ್ದ ನವೀನ್ ಕಿರಣ್, ಬದಲಾದ ಸನ್ನಿವೇಶದಲ್ಲಿ ಸ್ವತಃ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಅನುಗುಣವಾಗಿ ಪ್ರತಿಕ್ರಿಯೇ ನೀಡಿರುವ ನವೀನ್ ಕಿರಣ್ ರಾಜಕೀಯ ನಿಂತ ನೀರಲ್ಲ, ರಾಜಕಾರಣದಲ್ಲಿ ಶಾಶ್ವತವಾಗಿ ಏನೂ ಇರುವುದಿಲ್ಲ ಬದಲಾವಣೆ ಆಗುವುದು ಸಹಜ.ವಿರೋಧಿಗಳನ್ನ ಪ್ರೀತಿಸೋದು ಸಹಜ ಅಂತ ತಮ್ಮ ಬಿಜೆಪಿ ಸೇರ್ಪಡೆ ಕುರಿತಾಗಿ ಸಮರ್ಥಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮುಖಂಡರಿಗೆ ಧನ್ಯವಾದ ತಿಳಿಸಿರುವ ನವೀನ್
ಇಷ್ಟು ವರ್ಷಗಳ ಕಾಲ ತಮ್ಮನ್ನ ಬೆಳೆಸಿ ಬೆಂಬಲಿಸಿ ಪೋಷಿಸಿದ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರಿಗೂ ವಿಡಿಯೋ ಮೂಲಕ ಧನ್ಯವಾದಗಳನ್ನ ಅರ್ಪಿಸಿದ್ದಾರೆ.
ಡಾ.ಸುಧಾಕರ್ ಅವರ ಪೊಲಟಿಕಲ್ ಅಪರೇಷನ್
ಕೆಲವು ದಿನಗಳ ಹಿಂದೆಯಷ್ಟೆ ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ ಅವರನ್ನು ಬಿಜೆಪಿ ಗೆ ಸೇರ್ಪಡೆ ಗೋಳಿಸಿದ್ದ ಡಾ.ಸುಧಾಕರ್ ಅವರ ರಾಜಕೀಯ ಅಪರೇಷನಗಳು ಸರ್ಜರಿಗಳು ಮುಂದುವರಿದ ಭಾಗವಾಗಿ ನವೀನ್ ಕಿರಣ್ ಸೇರ್ಪಡೆ ಎನ್ನಲಾಗುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಟಗೊಳಿಸಲು ಮತ್ತು ಪಕ್ಷದಲ್ಲಿ ತಮ್ಮ ನೆಲೆಯನ್ನ ಭದ್ರಪಡಿಸಿಕೊಳ್ಳಲು ಇತರೆ ಪಕ್ಷಗಳ ಮುಖಂಡರಿಗೆ ಗಾಳ ಹಾಕಿ ಬಿಜೆಪಿಗೆ ಸೇಳೆಯುತ್ತಿದ್ದಾರೆ.
ಸುದ್ದಿ ಸಂಗ್ರಹಣೆ:- ಚ.ಶ್ರೀನಿವಾಸಮೂರ್ತಿ