ಶ್ರೀನಿವಾಸಪುರ:- ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ಸಮಾಜದಲ್ಲಿ ಸಾಮರಸ್ಯದ ಭಾವನೆ ಮೂಡುತ್ತದೆ ಮತ್ತು ಶ್ರದ್ಧಾ ಭಕ್ತಿಯಿಂದ ಆಧ್ಯಾತ್ಮಿಕವಾಗಿ ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡರೆ ಅನುಗ್ರಹದ ಜೋತೆಗೆ ಒತ್ತಡದ ಜೀವನಕ್ಕೆ ಮುಕ್ತಿ ದೊರೆತು ಮನಃ ಶಾಂತಿ ಪಡೆಯಲು ಸಹಕಾರಿಯಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು. ಅವರು ಶ್ರೀನಿವಾಸಪುರ ತಾಲೂಕಿನ ಪ್ರಖ್ಯಾತ ಪುಣ್ಯಕ್ಷೇತ್ರವಾದ ರೋಣೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ನಂತರದಲ್ಲಿ ನಡೆಯುವ ಗರುಡೋತ್ಸವದಲ್ಲಿ ತಮ್ಮ ತಾಯಿ ಹಾಗು ಪತ್ನಿಯೊಂದಿಗೆ ಭಾಗವಹಿಸಿದ್ದ ಅವರು ಮಾತನಾಡಿದರು.
ಆಧುನಿಕ ವ್ಯವಸ್ಥೆಯಲ್ಲಿ ನಾವೇಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದೇವೆ. ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ನಮ್ಮ ಮನಸ್ಸು ಹಗುರವಾಗಲು ಸಮಾಧಾನ ಜೀವನ ಸಾಗಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವಶ್ಯವಿದೆ ಎಂದರು.
ಭಗವಂತನ ಉತ್ಸವ ಕಾರ್ಯಕ್ರಮ ನಮ್ಮ ಕುಟುಂಬಸ್ಥರು ಪಾರಂಪರಿಕವಾಗಿ ನಡೆಸುಕೊಂಡು ಬಂದಿದ್ದು ನಾವು ಸಹ ಭಗವಂತನ ಕಾರ್ಯದಲ್ಲಿ ತೊಡಗಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ತಾಲೂಕು ಅಧ್ಯಕ್ಷ ಅಶೋಕರೆಡ್ಡಿ, ಕಾಂಗ್ರೆಸ್ ಮುಖಂಡ ರೋಣೂರು ಚಂದ್ರಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರು ಮಂಜು, ವಿಜಯಕುಮಾರ್,ಶ್ರೀನಿವಾಸರೆಡ್ಡಿ ಶೀಗಪಲ್ಲಿರಘು ಮುಂತಾವರು ಇದ್ದರು.
ವರದಿ:ಚ.ಶ್ರೀನಿವಾಸಮೂರ್ತಿ