ನ್ಯೂಸ್ ಡೆಸ್ಕ್:-ಬ್ರಹ್ಮಾನಂದಂ ಈ ಹೆಸರು ತೆಲಗು ಸಿನಿಮಾ ಪರದೆಯ ಮೇಲೆ ಬ್ರಹ್ಮಾಂಡವಾದ ಹೆಸರು ಪರದೆಯ ಮೇಲೆ ಪ್ರತ್ಯಕ್ಷ್ಯವಾದರೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ ಮೂರು ದಶಕಗಳಿಂದ ತೆಲುಗು ಚಿತ್ರ ಪ್ರೇಕ್ಷಕರನ್ನು ಹಾಸ್ಯ ಸಾಗರದಲ್ಲಿ ಮುಳುಗಿಸುತ್ತಿರುವ ಹಾಸ್ಯಬ್ರಹ್ಮ, ಬ್ರಹ್ಮಾನಂದಂ,ಅವರ ಹಾಸ್ಯ ನೋಡಿದವರಿಗೆ ಮಾನಸಿಕ ನೆಮ್ಮದಿ ಸಿಗುತ್ತಂತೆ ಇಂತ ಹಾಸ್ಯಚರ್ಕವರ್ತಿಯಲ್ಲಿ ಇನ್ನೊಬ್ಬ ಕಲಾವಿದ ಇದ್ದಾನೆ ಅನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ ಆ ವ್ಯಕ್ತಿ ಕುಂಚವನ್ನು ಬಳಸಿದರೆ .. ರವಿವರ್ಮವನ್ನು ಮೀರಿಸುವಷ್ಟು ಜೀವಂತ ಕಲಾಪ್ರತಿಮೆ ಅರಳುತ್ತದೆ, ಸಮಯ ಸಿಕ್ಕಾಗಲೆಲ್ಲಾ ಚಿತ್ರಕಲೆಯನ್ನು ರಚಿಸುವ ಅವರು ನಟರಾಗುವ ಮೊದಲು ಉತ್ತಮ ವರ್ಣಚಿತ್ರಕಾರರಾಗಬೇಕೆಂದು ಬಯಸಿದ್ದರಂತೆ ನಟರಾದಾ ನಂತರ ಕುಂಚಕಲೆಯನ್ನು ಹವ್ಯಾಸವಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಗಿನ್ನೆಸ್ ದಾಖಲೆಯ ಹಾಸ್ಯನಟ ಪ್ರೇಕ್ಷಕರನ್ನು ನಗಿಸಲು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯವನ್ನು ಕಳೆದಿರುವ ಅವರಿಗೆ ಲಾಕ್ಡೌನ್ ಒಂದು ದೈವದತ್ತವಾಗಿ ಒದಗಿ ಬಂದು ಅವರಲ್ಲಿನ ಅದ್ಭುತವಾದ ಚಿತ್ರಕಾರನನ್ನು ಹೊರ ಬರಲು ಉತ್ತಮ ಅವಕಾಶ ಸಿಕ್ಕಿ ಅನೇಕ ಕಲಾಕೃತಿಗಳು ಅವರ ಕುಂಚದಿಂದ ಹೊರಬಂದಿದೆಯಂತೆ.
ಅಲ್ಲು ಅರ್ಜುನ್, ಮತ್ತು ರಾಣಾಗೆ ಉಡುಗೊರೆ!
ಚಲನಚಿತ್ರ ನಾಯಕರಾದ ಅಲ್ಲು ಅರ್ಜುನ್ ಮತ್ತು ರಾಣಾ ದಗ್ಗುಬಾಟಿ ಅವರಿಗೆ ಬ್ರಹ್ಮಾನಂದಂ ಹೊಸ ವರ್ಷದಂದು ಅನಿರೀಕ್ಷಿತ ಉಡುಗೊರೆಯಾಗಿ 45 ದಿನಗಳ ಕಾಲ ಶ್ರಮವಹಿಸಿ ಪೆನ್ಸಿಲ್ ನಿಂದ ರಚಿಸಿದ ಶ್ರೀವೆಂಕಟೇಶ್ವರಸ್ವಾಮಿ ಮತ್ತು ರಾಮಂಜನೇಯ ಅವರ ಚಿತ್ರಗಳನ್ನು ಫೋಟೋ ಫ್ರೇಮ್ ಹಾಕಿಸಿ ಅವುಗಳನ್ನು ಇಬ್ಬರು ನಟರಿಗೆ ನೀಡಿರುತ್ತಾರೆ.
ರಾಮ ಮತ್ತು ಆಂಜನೇಯರ ಸುಂದರವಾದ ಸ್ಕೆಚ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗಿದೆ.