ತೆಲಗು ಕಿರುತೆರೆ ನಿರೂಪಕ ಪ್ರದೀಪ್ ಹೀರೋ ಆಗಿ ನಟಿಸಿರುವ ಸಿನಿಮಾ
‘ನೀಲಿ ನೀಲಿ ಆಕಾಶಂ..’ ಹಾಡು ಸೂಪರ್,ಡೂಪರ್ ಹಿಟ್
ಕನ್ನಡದ ನಿರ್ಮಾಪಕ ಹಾಗು ನಾಯಕಿ ನಟಿ
“ನೀಲಿ ನೀಲಿ ಆಕಾಶಂ ಇದ್ದಾಂ ಅನುಕುನ್ನಾ” ಹಾಡು ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ವಿಶೇಷವಾಗಿ ಯೂ ಟ್ಯೂಬ್ನಲ್ಲಿ ಭಾರಿ ಸದ್ದು ಮಾಡಿದ ಹಾಡು, ಅನೂಪ್ ರುಬೆನ್ಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡಾಗಿದ್ದು, ತೆಲಗಿನ, “30 ರೋಜುಲ್ಲೋ ಪ್ರೇಮಿಂಚಡಂ ಎಲಾ?” ಸಿನಿಮಾದ್ದು. ತೆಲುಗಿನ ಕಿರುತೆರೆಯಲ್ಲಿ ನಿರೂಪಕನಾಗಿ ಗಮನಸೆಳೆದಿರುವ ಪ್ರದೀಪ್ ಮಾಚಿರಾಜು ಈ ಸಿನಿಮಾ ಮೂಲಕ ನಾಯಕನಾಗಿ ಅಭಿನಯಿಸಿದ್ದು ನಾಯಕಿಯಾಗಿ ಕನ್ನಡದ ನಟಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಎಲ್ಲವು ಸರಿಯಾಗಿದಿದ್ದರೆ ಕಳೆದ ಮಾರ್ಚ್ನಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಲಾಕ್ಡೌನ್ನಿಂದಾಗಿ ಸಾಧ್ಯವಾಗಲಿಲ್ಲ. ಈಗ ಸಿನಿಮಾವನ್ನು ತೆರೆಗೆ ತರಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದು, ಬಹುಶಃ ಜನವರಿ 29ಕ್ಕೆ ತೆರೆಕಾಣಲಿದಿಯಂತೆ.
ದಾಖಲೆ ಬರೆದ ನೀಲಿ ನೀಲಿ ಆಕಾಶಂ ಹಾಡು
ಇನ್ನು, ಈ ಚಿತ್ರದ ‘ನೀಲಿ ನೀಲಿ ಆಕಾಶಂ..’ ಹಾಡು ದೊಡ್ಡ ದಾಖಲೆಯನ್ನೇ ಬರೆದಿದೆ. ಇದುವರೆಗೂ 22 ಕೋಟಿಗೂ ಅಧಿಕ ಬಾರಿ ಈ ಹಾಡನ್ನು ವೀಕ್ಷಣೆ ಮಾಡಲಾಗಿದೆ.
ಕರ್ನಾಟಕದ ಬಾಬು ನಿರ್ಮಾಪಕ!
ಕರ್ನಾಟಕದ ಖ್ಯಾತ ನಿರ್ಮಾಪಕ s.v.ಬಾಬು, “30 ರೋಜುಲ್ಲೋ ಪ್ರೇಮಿಂಚಡಂ ಎಲಾ?” ಚಿತ್ರವನ್ನು ನಿರ್ಮಾಣ ಮಾಡಿರುವುದು ವಿಶೇಷ s.v.ಬಾಬು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುತ್ತಾರೆ. 2006ರಲ್ಲಿ ಎಸ್. ನಾರಾಯಣ್-ಜಗ್ಗೇಶ್ ಕಾಂಬಿನೇಷನ್ನಲ್ಲಿ ‘ಹನಿಮೂನ್ ಎಕ್ಸ್ಪ್ರೆಸ್’ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಬಾಬು ರಕ್ಷಿತ್ ಶೆಟ್ಟಿಯ ‘ರಿಕ್ಕಿ’ ಸೇರಿದಂತೆ ಅನೇಕ ಕನ್ನಡ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ. ಜೊತೆಗೆ ತೆಲುಗಿನಲ್ಲೂ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ’30 ರೋಜುಲ್ಲೋ ಪ್ರೇಮಿಂಚಡಂ ಎಲಾ?’ ಎಸ್.ವಿ.ಪ್ರೊಡಕ್ಷನ್ಸ್ ಲಾಂಚನದಲ್ಲಿ ನಿರ್ಮಿಸಿರುವ ಚಿತ್ರವನ್ನು ರಂಗಸ್ಥಲಂ’ ಸಿನಿಮಾ ಖ್ಯಾತಿಯ ಸುಕುಮಾರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮುನ್ನಾ ಚಿತ್ರಕಥೆ ರಚಿಸಿ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು,ಕನ್ನಡ,ತೆಲುಗು ಸಿನಿಮಾಗಳಿಗೆ ಸಂಗೀತ ನೀಡಿರುವ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ,ಚಂದ್ರಬೋಸ್ ಸಾಹಿತ್ಯ ರಚಿಸಿದ್ದಾರೆ, ಖ್ಯಾತ ಗಾಯಕರಾದ ಅರಮಾನ್ ಮಲಿಕ್, ಶಿದ್ ಶ್ರೀರಾಮ್ ಹಾಗೂ ಸುನೀತಾ ಹಾಡಿರುತ್ತಾರೆ, ತಾರಾಗಣದಲ್ಲಿ ಶುಭಲೇಖಾ ಸುಧಾಕರ್, ಪೊಸಾನಿ ಕೃಷ್ಣ ಮುರಳಿ ಪೋಷಕ ಪಾತ್ರ ಮಾಡಿದ್ದಾರೆ.”ನೀಲಿ ನೀಲಿ ಆಕಾಶಂ” ಹಾಡಿನ ಚಿತ್ರಿಕರಣವನ್ನು ಆಂಧ್ರದ ಕರಾವಳಿ ರಾಜಮಂಡ್ರಿ ಬಳಿ ಗೋದಾವರಿ ನದಿ ಹಾಗು ಕೆರಳದಲ್ಲಿ ಮಾಡಲಾಗಿದಿಯಂತೆ.
ಅಲ್ಲು ಅರ್ಜುನ್ ಅವರ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿ, ಜೊತೆಗೆ ತಮ್ಮ ಗೀತಾ ಆರ್ಟ್ಸ್ ಬ್ಯಾನರ್ ಮೂಲಕ ವಿಶ್ವಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.
500 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್
’30 ರೋಜುಲ್ಲೋ ಪ್ರೇಮಿಂಚಡಂ ಎಲಾ?’ ಚಿತ್ರವನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 400 ಮತ್ತು ಕರ್ನಾಟಕದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇದುವರಿಗೂ ಎಸ್.ವಿ.ಬಾಬು ನಿರ್ಮಾಣದ ಸಿನಿಮಾಗಳ ಲಿಸ್ಟ್ 2006 ರಲ್ಲಿ ತೆನಾಲಿರಾಮ ಮತ್ತು ಹನಿಮೂನ್ ಎಕ್ಸ್ ಪ್ರೆಸ್,2007 ರಲ್ಲಿ ಸವಿ ಸವಿ ನೇನಪು,2009 ರಲ್ಲಿ ಜೋಶ್,2017 ರಲ್ಲಿ ಪಟಾಕಿ,2019 ರಲ್ಲಿ ಮಾನೆ ಮಾರಾಟಕ್ಕಿದೆ,
2016 ರಲ್ಲಿ ರಿಕಿ, 2008 ರಲ್ಲಿ ಅಂದಮೈನಾ ಮನಸುಲೋ,2011 ಕೆರಟಂ (ತೆಲಗು ಸಿನಿಮಾಗಳು) 2011 ರಲ್ಲಿ ಯುವನ್(ತಮಿಳು ಸಿನಿಮಾ)
ಚ.ಶ್ರೀನಿವಾಸಮೂರ್ತಿ