ನ್ಯೂಜ್ ಡೆಸ್ಕ್:ಸಚಿವ ಸ್ಥಾನದಿಂದ ಕೈಬಿಡಲಾಗಿರುವ ಕೋಲಾರದ ಉಸ್ತುವಾರಿ ಹಾಗು ಅಬ್ಕಾರಿ ಸಚಿವ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್ ನಾಗೇಶ್ ಅವರನ್ನು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ. ನೀಡಲಾಗಿದೆ.ಜೊತೆಗೆ ಅದ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ. ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನಲೆಯಲ್ಲಿ ಅಸಮಧಾನ ಗೋಂಡಿರುವ ನಾಗೇಶ್ ಅವರನ್ನು ಸದ್ಯಕ್ಕೆ ತೃಪ್ತಿ ಪಡಿಸುವ ತಂತ್ರ ಎನ್ನಲಾಗುತ್ತಿದೆ.
ಬುಧವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವ ಸಂಬಂದ 7 ಮಂದಿ ನೂತನ ಸಚಿವರಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.ಈ ಹಿನ್ನೆಲೆ ಅಬಕಾರಿ ಖಾತೆ ನಿರ್ವಹಿಸುತ್ತಿದ್ದ ಸಚಿವ ಎಚ್ ನಾಗೇಶ್ ಅವರಿಂದ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ಪಡೆದಿದ್ದರು.ರಾಜಿನಾಮೆ ನೀಡಿದ ನಂತರ ಅವರು ಪ್ರತಿಕ್ರಿಯಿಸಿ ಸಚಿವ ಸ್ಥಾನಕ್ಕೆ ಸಮಾನಾಂತರವಾದ ಹುದ್ದೆ ನೀಡುತ್ತಾರಂತೆ. ಸಿಎಂ ಮಾತಿಗೆ ಬೆಲೆಕೊಟ್ಟು ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ರಾಜಿನಾಮೆ ಪ್ರಸಹನವನ್ನು ಸಮರ್ಥಿಸಿಕೊಂಡಿದ್ದರು.
ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿಯೇ ಈಗ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಎಚ್ ನಾಗೇಶ್ಗೆ ನೀಡಲಾಗಿದೆ. ಇನ್ನು ನಿಗಮದ ಹಾಲಿ ಅಧ್ಯಕ್ಷರಾಗಿದ್ದ ಎಸ್. ಮುನಿಕೃಷ್ಣ ಅವರನ್ನು ಮೇ|| ಮಾರುಕಟ್ಟೆ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮೂರು ಪಕ್ಷ ಸುತ್ತಿದರೂ ಸಚಿವ ಸ್ಥಾನ ವಂಚಿತ ಹಳ್ಳಿಹಕ್ಕಿ ವಿಶ್ವನಾಥ್
ಮೂರು ಪಕ್ಷ ಸುತ್ತಿರುವ ಸದ್ಯಕ್ಕೆ ಈಗ ಬಿಜೆಪಿ ಯಲ್ಲಿ ಶಾಸಕ ಸ್ಥಾನಕ್ಕೆ ಚುನಾವಣೆಯಲ್ಲಿ ಸೋತು ಬಿಜೆಪಿ ಯಲ್ಲಿ ಅತ್ತು ಸುರಿದು ಕರೆದು ಗೋಳಾಡಿ ಎಂ.ಎಲ್.ಸಿ ಆಗಿರುವ ಹುಣಸೂರಿನ ಅಡಗೂರು ಹೆಚ್.ವಿಶ್ವನಾಥ್ ರಾಜಕಿಯ ಪರಿಸ್ಥಿತಿ ಸದ್ಯದ ಮಟ್ಟಿಗೆ ಚನ್ನಾಗಿಲ್ಲ ಎನ್ನಬಹುದು.ಅಂತೆಯೇ ಅನರ್ಹಗೊಳಿಸಲಾಗಿದ್ದ ಶಾಸಕರಲ್ಲಿ ಮೊದಲಿಗರಾಗಿದ್ದು ಯಡಿಯೂರಪ್ಪ ಅಧಿಕಾರಕ್ಕೆ ಬರಲು ತಮ್ಮದೆ ಆದ ತಂತ್ರಗಾರಿಕೆ ಮಾಡಿ ಕುಮಾರಸ್ವಾಮಿ ಸರ್ಕಾರ ಕೆಡವಿದ ವಿಶ್ವನಾಥ್ ಇಂದು ಅಧಿಕಾರ ಪಡೆಯಲು ಅಂಗಲಾಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶ್ವನಾಥ್ ಹಿಂದೆ ಕಾಂಗ್ರೆಸ್ ನಲ್ಲಿದಾಗ ದೇವೇಗೌಡ ಮತ್ತು ಮಕ್ಕಳನ್ನು ವಾಚಾಮಗೋಚರವಾಗಿ ಬೈದಿದ್ದ ವಿಶ್ವನಾಥ್ ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆ ತರಲು ಸಾಕಷ್ಟು ಶ್ರಮವಹಿಸಿದ್ದರು ಕೊನೆಗೆ ಜೆಡಿಎಸ್ ಪಕ್ಷ ಸೇರ್ಪಡೆಯಾಗಿ ಆ ಪಕ್ಷದ ರಾಜ್ಯಧ್ಯಕ್ಷರಾಗಿ ದೇವೇಗೌಡರ ಜೋತೆ ಗೂಡಿ ರಾಜ್ಯದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದರು,ನಂತರ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಕೆಡವಿದ್ದರು.ನಂತರ ಬಿಜೆಪಿ ಸೇರಿ ಹಲವಾರು ಬಾರಿ ಕಾಂಗ್ರೆಸ್ಸ್ ಮುಖಂಡರನ್ನು ಮತ್ತು ಜೆಡಿಎಸ್ ಪಕ್ಷದ ಮುಖಂಡರನ್ನು ಬೈಯ್ಯುವುದೆ ದೊಡ್ಡ ಕಾಯಕವಾರಿಸಿಕೊಂಡಿದ್ದರು.
ವರದಿ:ಚ.ಶ್ರೀನಿವಾಸಮೂರ್ತಿ