ನಿಮ್ಮಿಂದಾಗದು ಎಂದು ಹಾಸ್ಯ ಮಾಡಿವರ ಮುಂದೆಯೇ ಸರಣಿ ಗೆದ್ದು ಬೀಗಿದ ಭಾರತ.
ಇಡಿ ವಿಶ್ವ ಭಾರತದ ತಂಡದ ಆಟವನ್ನು ಮನಸಾರೆ ಮೆಚ್ಚಿ ಹೊಗಳಿದೆ.
ಟೀಂ ಇಂಡಿಯಾ ಅನುಭವಿಸಿದ ನೋವು, ಅವಮಾನ ಒಂದಾ.. ಎರಡಾ..!
ನ್ಯೂಜ್ ಡೆಸ್ಕ್:-ಆಸ್ಟ್ರೇಲಿಯಾ ವಿರುದ್ದದ 4ನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳ ಅಂತರದಲ್ಲಿ ಸೋಲಿಸಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.
ಬ್ರಿಸ್ಬೇನ್ ನಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್ಗಳ ಅಂತರದಲ್ಲಿ ಮಣಿಸಿದ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಕೈ ವಶ ಮಾಡಿಕೊಂಡು, ಆಸ್ಟ್ರೇಲಿಯಾ ಎಸೆದಿದ್ದ ಸವಾಲಿಗೆ ಭಾರತ ತಂಡ ಸಮರ್ಥವಾಗಿ ಆಟ ಆಡುವ ಮೂಲಕ ಗೆಲವು ಸಾಧಿಸಿ ಗೆದ್ದು ಬೀಗಿತು.
ಅಂತಿಮ ದಿನವಾದ ಇಂದು ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿ ಔಟ್ ಆದರು. ಬಳಿಕ ಜೊತೆಗೂಡಿದ ಗಿಲ್ ಮತ್ತು ಪೂಜಾರ ಜೋಡಿ ಶತಕದ ಜೊತೆಯಾಟ ಆಡಿ ಭಾರತದ ಇನ್ನಿಂಗ್ಸ್ ಗೆ ಬಲ ತಂದರು. ಈ ಹಂತದಲ್ಲಿ 91 ರನ್ ಗಳಿಸಿ ಶತಕದಂಚಿನಲ್ಲಿದ್ದ ಗಿಲ್ ಲೈಯಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಹಾನೆ (24 ರನ್), ಪೂಜಾರ (56 ರನ್), ಮಯಾಂಕ್ ಅಗರ್ವಾಲ್ (9 ರನ್) ಔಟ್ ಆದರು. ಈ ವೇಳೆ ಪಂದ್ಯ ಡ್ರಾ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕ್ರೀಸ್ ಗೆ ಬಂದ ರಿಷಬ್ ಪಂತ್ 138 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಪಂತ್ ಗೆ ವಾಷಿಂಗ್ಟನ್ ಸುಂದರ್ (22 ರನ್) ಅಂತಿಮ ಹಂತದಲ್ಲಿ ಉತ್ತಮ ಸಾಥ್ ನೀಡಿದರು.
ಆ ಮೂಲಕ ಕಳೆದ ಮೂರು ದಶಕಗಳಿಂದ ಗಾಬಾದಲ್ಲಿ ಮೆರೆಯುತ್ತಿದ್ದ ಆಸ್ಟ್ರೇಲಿಯನ್ನರಿಗೆ ಮರೆಯಲಾಗದ ಸೋಲಿನ ಗಿಫ್ಟ್ ನೀಡಿದೆ.
ಸುನಿಲ್ ಗವಾಸ್ಕರ್ ದಾಖಲೆ ಮುರಿದ ಶುಭ್ ಮನ್
ನಿರ್ಣಾಯಕ ಪಂದ್ಯದಲ್ಲಿ ಶುಭ್ಮನ್ ಗಿಲ್ 91 ಹಾಗೂ ರಿಷಬ್ ಪಂತ್ ಅಜೇಯ 89 ರನ್ ಗಳ ನೆರವಿನೊಂದಿಗೆ ಟೀಂ ಇಂಡಿಯಾ ಗಬ್ಬಾ ನೆಲದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕದಿಂದ ವಂಚಿತರಾದರೂ ಶುಭ್ಮನ್ ಗಿಲ್ ಅವರು ಗವಾಸ್ಕರ್ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಭಾರತದ ಪರ ಟೆಸ್ಟ್ ನಲ್ಲಿ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಟೀಂ ಇಂಡಿಯಾದ ಅತ್ಯಂತ ಕಿರಿಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುನಿಲ್ ಗವಾಸ್ಕರ್ 21 ವರ್ಷದ ಮತ್ತು 243 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಶುಭ್ಮನ್ ಗಿಲ್ ಪ್ರಸ್ತುತ 21 ವರ್ಷ 133 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. 1970ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಗವಾಸ್ಕರ್ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು
ಭಾರತದ ರಾಷ್ಟ್ರಪತಿ, ಕೋವಿದ್, ಪ್ರಧಾನಮಂತ್ರಿ ಮೋದಿ,ಗೃಹ ಸಚಿವ ಅಮಿತ್ ಷಾ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, ಗೂಗಲ್ ಮುಖ್ಯಸ್ಥ ಸುಂದರ್ ಪಿಚ್ಚೆ ಇಂಡಿಯಾ ಆಟಗಾರರ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ.
ವಿವೇಕ್ ಎಸ್ ಶೆಟ್ಟಿ