ನ್ಯೂಜ್ ಡೆಸ್ಕ್:-ಕನ್ನಡದ ಕಿರುತೆರೆಯ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಸಂಜಿತ್ ಹೆಗ್ಡೆ ತಮ್ಮ ಗಾಯನ ಪ್ರತಿಭೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಹುತೇಕ ದಕ್ಷಿಣ ಭಾರತದ ಗಾಯಕನಾಗಿ ಹೊರಹೊಮ್ಮಿದ್ದಾರೆ. ಗಾಯಕ ಇದೀಗ ನಟನಾಗಿ ಹೊಸ ಪಯಣ ಆರಂಭಿಸಿದ್ದು, ಖ್ಯಾತ ನಟಿ ಶ್ರುತಿ ಹಾಸನ್ ಜೊತೆ ನಟಿಸಿರುವುದು ವಿಶೇಷ
ನೆಟ್ಫ್ಲಿಕ್ಸ್ನ ಮೊದಲ ತೆಲುಗು ಸಿನಿಮಾದಲ್ಲಿ ಸಂಜಿತ್ ಹೆಗ್ಡೆ ಶ್ರುತಿಹಾಸನ್ ಜೊತೆಗೆ ನಟಿಸಿರುವ ‘ಪಿಟ್ಟ ಕತಲು’ ಮೊದಲ ನೆಟ್ಫ್ಲಿಕ್ಸ್ ಒರಿಜಿನಲ್ ತೆಲುಗು ಸಿನಿಮಾ ಆಗಿದೆ.ಈ ಹಿಂದೆ ಇನ್ನಾವುದೇ ತೆಲುಗು ಸಿನಿಮಾಕ್ಕೆ ನೆಟ್ಫ್ಲಿಕ್ಸ್ ಬಂಡವಾಳ ಹೂಡಿರಲಿಲ್ಲ. ನಾಲ್ಕು ಮಂದಿ ನಿರ್ದೇಶಕರು ನಾಲ್ಕು ಕತೆಗಳನ್ನು ಸಂಕಲನವಾಗಿ ನಿರ್ದೇಶಿಸಿದ್ದಾರೆ.
ಹಿಂದಿಯಲ್ಲಿ ಇತ್ತಿಚಿಗೆ ವೆಬ್ ಸಿರಿಸ್ ಸರಣಿಯಲ್ಲಿ ಸಿನಿಮಾಗಳು ಯಶಸ್ವಿಯಾಗುತ್ತಿದ್ದು 2018 ರಲ್ಲಿ ಅಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ‘ಲಸ್ಟ್ ಸ್ಟೋರಿಸ್ ಎಂಬ ವೆಬ್ ಸರಣಿಯನ್ನು ತೆಲುಗಿನಲ್ಲಿ ‘ಪಿಟ್ಟ ಕಥಲು’ ಹೆಸರಿನಲ್ಲಿ ರೀಮೇಕ್ ಮಾಡಲಾಗುತ್ತಿದೆ. ಒಟ್ಟು ನಾಲ್ಕು ಕಥೆಗಳನ್ನು ಹೊಂದಿರುವ ಈ ಸರಣಿಯನ್ನು ತೆಲುಗಿನ ನಾಲ್ಕು ಜನ ನಿರ್ದೇಶಕರಾದ ವಿಶೇಷವೆಂದರೆ, ಇದನ್ನು ‘ಪೆಳ್ಳಿ ಚೂಪುಲು’ ಖ್ಯಾತಿಯ ತರುಣ್ ಭಾಸ್ಕರ್, ‘ಓ ಬೇಬಿ’ ಖ್ಯಾತಿಯ ನಂದಿನಿ ರೆಡ್ಡಿ, ‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ಹಾಗೂ ‘ದಿ ಘಾಜಿ ಅಟ್ಯಾಕ್’ ಖ್ಯಾತಿಯ ಸಂಕಲ್ಪ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದೆ.
ಮಂಚು ಲಕ್ಷ್ಮಿ, ಇಶಾ ರೆಬ್ಬಾ, ಶ್ರುತಿಹಾಸನ್, ಅಮಲಾ ಪಾಲ್, ಜಗಪತಿಬಾಬು, ಸತ್ಯದೇವ್, ಮೇಘನಾ, ಸಂಜಿತ್ ಹೆಗ್ಡೆ ಮುಂತಾದವರು ನಟಿಸಿರುವ ಈ ಸರಣಿಯಲ್ಲಿ ಸಾಕಷ್ಟು ಹಸಿ-ಬಿಸಿ ದೃಶ್ಯಗಳಿವೆ ಎನ್ನಲಾಗಿದ್ದು.ಬುಧವಾರ ಬಿಡುಗಡೆಯಾದ ಪಿಟ್ಟಕಥಲು ಸಿನಿಮಾದ ಟೀಜರ್ ನಲ್ಲಿ ಶ್ರುತಿಹಾಸನ್- ಸಂಜಿತ್ ಹೆಗ್ಡೆ ನಡುವಿನ ಹಸಿಯಾದ ರೋಮ್ಯಾಂಟಿಕ್ ದೃಶ್ಯಗಳು ಇದ್ದು ಸರಣಿಯ ಕಥಾಹಂದರವೇ ಬೋಲ್ಡ್ ಆಂಡ್ ಹಾಟ್ ಆಗಿರುವುದರಿಂದ,ಟೀಸರ್ ಸಹ ರೊಮ್ಯಾಂಟಿಕ್ ಮಟ್ಟದಲ್ಲಿದೆ ಎನ್ನಲಾಗಿದೆ.ಈ ಸರಣಿಯ ಕಥೆಯು ನಾಲ್ಕು ವಿಭಿನ್ನ ಕಥೆಗಳನ್ನು ಹೊಂದಿರುವ ಮಹಿಳೆಯರ ಬಗ್ಗೆ, ಅವರ ಜೀವನದ ಪ್ರೀತಿ, ಭಾವನೆಗಳು ಮತ್ತು ಅವುಗಳಲ್ಲಿ ನಾಲ್ಕು ನಡುವಿನ ಸಾಮಾನ್ಯ ಸಂಪರ್ಕ ಏನು.ಎಂಬುದನ್ನು ಆರ್ಎಸ್ವಿಪಿ ಮೂವೀಸ್ ಮತ್ತು ಫ್ಲೈಯಿಂಗ್ ಯೂನಿಕಾರ್ನ್ ಎಂಟರ್ಟೈನ್ಮೆಂಟ್ ಸಹ-ನಿರ್ಮಾಣದ ಈ ಚಿತ್ರವನ್ನು ಫೆಬ್ರವರಿ 19 ರಂದು ಪ್ರಮುಖ ಒಟಿಟಿ ಕಂಪನಿಯಾದ ನೆಟ್ಫ್ಲಿಕ್ಸ್ನಲ್ಲಿ ಮೂಲಕ ಪ್ರಸಾರ ಮಾಡಲಾಗುವುದು.ಹಿಂದಿಯಲ್ಲಿ ಸೂಪರ್ ಹಿಟ್ ಆಗಿರುವ ಈ ಸರಣಿಯು ತೆಲುಗಿನಲ್ಲಿ ಎಷ್ಟು ಮನರಂಜನೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಹಿಂದಿಯಲ್ಲಿನ ‘ಲಸ್ಟ್ ಸ್ಟೋರಿಸ್ ಸಿನಿಮಾದಲ್ಲಿ ರಾಧಿಕಾ ಆಪ್ಟೆ,ಭೂಮಿ ಪೆಡ್ನೇಕರ್,ಮನೀಷಾ ಕೊಯಿರಾಲಾ,ಕಿಯಾರಾ ಅಡ್ವಾಣಿ,ಆಕಾಶ್ ಥೋಸರ್ ನೀಲ್ ಭೂಪಾಲಂ,ಜೈದೀಪ್ ಅಹ್ಲಾವತ್,ಸಂಜಯ್ ಕಪೂರ್,ನೇಹಾ ಧೂಪಿಯಾ,ವಿಕ್ಕಿ ಕೌಶಲ್ ನಟಿಸಿದ್ದಾರೆ
ವರದಿ:ಚ.ಶ್ರೀನಿವಾಸಮೂರ್ತಿ