ನ್ಯೂಜ್ ಡೆಸ್ಕ್:– ತೆಲಗು ಭಾಷಿಕರ ಆತ್ಮಗೌರವದ ಸಂಕೇತವಾಗಿ ಸ್ಥಾಪಿತವಾದ ತೆಲುಗುದೇಶಂ ಪಕ್ಷವನ್ನು ಈಗಿನ ಟ್ರೆಂಡ್ ನಂತೆ ಹಿಂದು ಧಾರ್ಮಿಕ ಅಜೆಂಡದಲ್ಲಿ ಪಕ್ಷವನ್ನು ಮುನ್ನೆಡೆಸುವ ನಿರ್ಧಾರಕ್ಕೆ ಬಂದಂತಿದೆ.
ತೆಲುಗುದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಹಿಂದುತ್ವದ ರಾಜನೀತಿ ಮೂಲಕ ಪಕ್ಷ ಮುನ್ನೆಡಿಸಲು ಮುಂದಾಗಿದ್ದಾರೆ.ರಾಜಕೀಯ ಪರಿಸ್ಥಿತಿಯಲ್ಲಿ ಸಕ್ರಿಯವಾಗಿ ಉಳಿಯಬೇಕಾದರೆ ಇಂತಹ ಬದಲಾವಣೆ ಅನಿವಾರ್ಯ ಎಂಬುದನ್ನು ನಾಯ್ಡು ಮನಗಂಡಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಆಂಧ್ರಪ್ರದೇಶದಲ್ಲಿ ವೈ.ಎಸ್.ಜಗನ್ ಮೋಹನ ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ದೇವಾಲಯಗಳ ಮೇಲೆ ನಡೆಯುತ್ತಿರುವ ಆಕ್ರಮಣ, ಮೂರ್ತಿ ಧ್ವಂಸ,ವಿಗ್ರಹಗಳ ಕಳ್ಳತನ, ರಥಗಳಿಗೆ ಬೆಂಕಿ, ಕ್ರೈಸ್ತ ಧರ್ಮಕ್ಕೆ ಮತಾಂತರ ಸರ್ಕಾದ ಮಂತ್ರಿಗಳ ಹಿಂದು ವಿರೋದಿ ಧೋರಣೆ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ನಾಯ್ಡು ಅವರು ಜಗನ್ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕೆ ಇಳಿದಿದ್ದಾರೆ. ಜಗನ್ ಅಧಿಕಾರಕ್ಕೆ ಬಂದ ಬಳಿಕ ಅಂದರೆ 2019ರಿಂದ ಈಚೆಗೆ ರಾಜ್ಯದಲ್ಲಿ 100ಕ್ಕೂ ಹೆಚ್ಚು ದೇವಾಲಯಗಳ ಮೇಲೆ ದಾಳಿ ನಡೆದಿದೆ, ಕ್ರೈಸ್ತ ಧರ್ಮ ಮತಾಂತರವೂ ನಿರಾತಂಕವಾಗಿ ಸಾಗಿದೆ ಎಂಬ ನಿರಂತರ ಆರೋಪ ಹಾಗು ಆಕ್ರೋಶ ವ್ಯಕ್ತಪಡಿಸಿ ಟಿಡಿಪಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ.
ಆಂಧ್ರದಲ್ಲಿ ಪಕ್ಷ ಜನಸಾಮನ್ಯರಲ್ಲಿ ಬಲವಾಗಿ ಬೇರೂರಲು ದೇವಾಲಯಗಳ ಮೇಲಿನ ದಾಳಿಯನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಈಗ ತಾವು ಹಿಂದುತ್ವ ರಾಜಕಾರಣ ಮಾಡದಿದ್ದರೆ ಬಿಜೆಪಿಯು ಅದರ ಲಾಭ ಪಡೆಯುತ್ತದೆ. ಅದರಿಂದ ಜಗನ್ ಅವರ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಗಿಂತಲೂ ಹೆಚ್ಚಾಗಿ ತಮ್ಮ ಪಕ್ಷಕ್ಕೇ ನಷ್ಟವಾಗುತ್ತದೆ ಎನ್ನುವುದು ನಾಯ್ಡು ಅವರಿಗೆ ಮನಗಂಡು ತಮ್ಮ ಸೆಕ್ಯೂಲರ್ ಅಜೆಂಡಾ ಪಕ್ಕಕ್ಕಿಟ್ಟು ಧರ್ಮಾತೀತ ಅಜೆಂಡಾಗೆ ಮುಂದಾಗಿದ್ದಾರೆ.
”ಆಂಧ್ರಪ್ರದೇಶದಲ್ಲಿ ಹಿಂದುತ್ವದ ಚಾಂಪಿಯನ್ ಆದರೆ ಮಾತ್ರವೇ ರಾಜಕಾರಣದಲ್ಲಿ ಸಕ್ರಿಯವಾಗಿರಬಹುದು. ಸಣ್ಣ ಅವಕಾಶವನ್ನೂ ದೊಡ್ಡ ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಚಾಕಚಕ್ಯತೆ ಇರುವ ಬಿಜೆಪಿಗೆ ರಾಜ್ಯದಲ್ಲಿ ಬೆಳೆಯಲು ಆಸ್ಪದ ನೀಡಬಾರದು ಎಂಬ ಮುಂದಾಲೊಚನೆ ನಾಯ್ಡು ಅವರದು ಆಗಿದೆ ಎನ್ನಲಾಗಿದ್ದು ಈ ಬಗ್ಗೆ ಎಂದು ರಾಜಕೀಯ ವಿಶ್ಲೇಷಕ ಮಂಚಾಲ ಶ್ರೀನಿವಾಸ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ದೇವಾಲಯಗಳ ಮೇಲಿನ ದಾಳಿಯಿಂದಾಗಿ ಹಿಂದೂಗಳು ಸಂಘಟಿತರಾಗುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ನಾಯ್ಡು ‘ಸೈದ್ಧಾಂತಿಕ ರಾಜಿ’ ಮಾಡಿಕೊಂಡು ‘ಹಿಂದುತ್ವ’ದ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ನಾಯ್ಡು ಅವರ ಟಿಡಿಪಿ ಪ್ರಮುಖ ಮಿತ್ರಪಕ್ಷವಾಗಿತ್ತು. ಆದರೆ, 2018ರಲ್ಲಿಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಗೆ ಕೇಂದ್ರ ಸ್ಪಂದಿಸುತ್ತಿಲ್ಲಎಂಬುದನ್ನು ನೆಪವಾಗಿಟ್ಟುಕೊಂಡು ನಾಯ್ಡು ಬಿಜೆಪಿ ಸಖ್ಯ ತೊರೆದರು.
‘ಜಾತ್ಯತೀತತೆ’ಯ ಹೆಸರಿನಲ್ಲಿ ಮತ್ತೆ ಅಧಿಕಾರ ಹಿಡಿಯುವ ಅವರ ಲೆಕ್ಕಾಚಾರ 2019ರ ವಿಧಾನಸಭೆ ಚುನಾವಣೆಯಲ್ಲಿ ತಲೆಕೆಳಗಾಯಿತು. ಎನ್ಡಿಎ ತೊರೆದ ನಾಯ್ಡು ಪಕ್ಷ ಹೀನಾಯವಾಗಿ ಸೋತಿತು. ವಿಧಾನಸಭೆಯ 175 ಕ್ಷೇತ್ರಗಳ ಪೈಕಿ ಜಗನ್ ಪಕ್ಷ 151 ಕಡೆ ಗೆಲುವು ಸಾಧಿಸಿದರೆ, ಟಿಡಿಪಿ ಕೇವಲ 23 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು.
ಜಗನ್ ರೆಡ್ಡಿ ಸುಮ್ಮನೇ ಕೂತಿಲ್ಲ ದೇವಾಲಯಗಳ ಪುನರುದ್ದರಣ ಅಸ್ತ್ರ!
ನಾಯ್ಡು ಅವರ ಭವಿಷ್ಯದ ರಾಜಕಾರಣದ ಒಳ ಸುಳಿವು ಅರಿತಿರುವ ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ, ದೇವಾಲಯಗಳ ಮೇಲಿನ ದಾಳಿಯನ್ನೇ ಪ್ರತ್ಯಸ್ತ್ರವಾಗಿ ಬಳಸಲು ಮುಂದಾಗಿದ್ದಾರೆ. ಹಾನಿಗೊಂಡಿರುವ ಎಲ್ಲ ದೇವಾಲಯಗಳನ್ನೂ ಪುನರ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.ಜೊತೆಗೆ ಮೋದಿ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಜಗನರೆಡ್ಡಿ ಆಂಧ್ರದ ಪರಿಸ್ಥಿತಿ ಕುರಿತಾಗಿ ಮೋದಿ ಸರ್ಕಾರದ ಮುಖ್ಯಸ್ಥರ ಗಮನ್ಕ್ಕೂ ತರುತ್ತಿದ್ದಾರೆ ಎನ್ನಲಾಗಿದೆ.
ಆಂಧ್ರ ಡಿಜಿಪಿ ಯೈ.ಎಸ್.ಆರ್ ವಕ್ತಾರ ಬಿಜೆಪಿ ಆರೋಪ, ವಜಾಕ್ಕೆ ಅಗ್ರಹ
ಜೊತೆಗೆ ಆಂಧ್ರದ ದೇವಾಲಗಳ ಮೇಲೆ ಆಗುತ್ತಿರುವ ದಾಳಿಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪಾತ್ರವಿದೆ. ವಿವಿಧ ಪ್ರಕರಣಗಳಲ್ಲಿ ಈವರೆಗೆ ಬಂಧಿಸಲಾಗಿರುವ ಆರೋಪಿಗಳ ಪೈಕಿ 17 ಮಂದಿ ಟಿಡಿಪಿ ಮತ್ತು ನಾಲ್ವರು ಬಿಜೆಪಿ ಕಾರ್ಯಕರ್ತರು ಇದ್ದಾರೆ,ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌತಮ್ ಸಾವಂಗ್ ತಿಳಿಸಿದ್ದಾರೆ. ಅದಕ್ಕೆ ತೀಕ್ಷಣವಾದ ಪ್ರತಿಕ್ರಿಯೆ ನೀಡಿರುವ ಆಂಧ್ರದ ಬಿಜೆಪಿ ರಾಜ್ಯಾಧ್ಯಕ್ಷ ಸೋಮುವೀರ್ರಾಜು ಅವರು, ಬಿಜೆಪಿ ಪಕ್ಷದ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ಡಿಜಿಪಿ, ಯೈ ಎಸ್ ಆರ್ ಪಕ್ಷದ ವಕ್ತಾರನಂತೆ ಮಾತನಾಡುತ್ತಿದ್ದು ಅವರನ್ನು ವಜಾಗೊಳಿಸಬೇಕು,ಎಂದು ಆಗ್ರಹಿಸಿದ್ದಾರೆ.