ವಿದ್ಯಾವಂತ ಕುಟುಂಬ ಮೂಢನಂಬಿಕೆಗೆ ಬಲಿಯಾದ ಕಥೆ
ಮೌಢ್ಯಕ್ಕೆ ಮಕ್ಕಳನ್ನೆ ನರಬಲಿ ಕೊಟ್ಟ ಪಾಪಿಷ್ಠ ತಂದೆ-ತಾಯಿ
ಮರುಹುಟ್ಟು ಪಡೆಯಲು ಈ ಕೃತ್ಯ ಎಸಗಲಾಗಿದಿಯಂತೆ
ಸಹೋದರಿಯರು ಅತೀಂದ್ರಿಯ ಶಕ್ತಿಗಳ ಕುರಿತಾಗಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರಂತೆ!
ಮದನಪಲ್ಲಿ: ಆಂದ್ರ ಪ್ರದೇಶದ ಚಿತ್ತೂರುಜಿಲ್ಲೆಯ ಮದನಪಲ್ಲಿಯ ಪುರುಷೋತ್ತಮ್ ನಾಯ್ಡು ಮತ್ತು ಪದ್ಮಜಾ ಮಾಸ್ಟರ್ ಡಿಗ್ರಿಗಳನ್ನು ಪಡೆದ ವಿದ್ಯಾವಂತ ದಂಪತಿಗಳು,ತಾಯಿಯಂತೂ ಗೋಲ್ಡ್ ಮೆಡಲಿಸ್ಟ್,ಅವರಿಗೆ ಇಬ್ಬರು ಪ್ರತಿಭಾವಂತ ಪುತ್ರಿಯರು ಇಬ್ಬರು ಪುತ್ರಿಯರು ಉನ್ನತ ವಿದ್ಯಾಬ್ಯಾಸ ಮಾಡಿರುವರು, ಈ ಇಬ್ಬರು ಪುತ್ರಿಯರನ್ನು ಹೆತ್ತ ಪೋಷಕರೆ ಮೂಢನಂಬಿಕೆಯಿಂದ ಮನೆಯಲ್ಲೆ ಕ್ಷುದ್ರ ಪೂಜೆ ನಡೆಸಿ ಬಲಿ ಹೆಸರಿನಲ್ಲಿ ಮಕ್ಕಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಭಾನುವಾರ ರಾತ್ರಿ ನಡೆದಿರುತ್ತದೆ.
ಮದನಪಲ್ಲಿಯ ಶಿಕ್ಷಕರ ಕಾಲೋನಿಯ ಶಿವನಗರಲ್ಲಿ ದುರಂತಮಯವಾಗಿ ಸಾವಿಗಿಡಾಗಿರುವ ಇಬ್ಬರು ಸಹೋದರಿಯರ ಪೋಷಕರಾದ ತಂದೆ ಮಲ್ಲೂರು ಪುರುಷೋತ್ತಮನಾಯುಡು ಸರ್ಕಾರಿ ಮಹಿಳಾ ಪದವಿ ಕಾಲೇಜು ಉಪ ಪ್ರಾಂಶುಪಾಲ,ಅವರ ಪತ್ನಿ ಪದ್ಮಜಾ ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲೆಯಾಗಿದ್ದಾರೆ, ನಾಲ್ಕು ಜನರಿದ್ದ ಕುಟುಂಬದಲ್ಲಿ ಸಹೋದರಿಯರ ಹತ್ಯೆಯಿಂದ ಮದನಪಲ್ಲಿ ನಗರ ಆಘಾತಗೊಂಡಿದೆ. ದುರಂತದಿಂದ ಸಾವಿಗಿಡಾದ ಆ ಇಬ್ಬರು ಹೆಣ್ಣು ಮಕ್ಕಳು ಅಲೆಖ್ಯಾ (27) ಮತ್ತು ಸಾಯಿದಿವ್ಯಾ (23) ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿ ನಿರಂತರವಾಗಿ ಪೂಜೆಗಳನ್ನು ನಡೆಸುತ್ತಿದ್ದ ಕುಟುಂಬ ಶನಿವಾರ ಮುಂಜಾನೆ ವಿವಿದ ಬಗೆಯ ಊರುಗಳಿಂದ ಕಷಾಯ ವಸ್ತ್ರದಾರಿಗಳನ್ನು ಅಪರಿಚಿತ ವ್ಯಕ್ತಿಗಳನ್ನು ಕರೆಯಿಸಿ ಪೂಜೆ ಮಾಡಿಸುತ್ತಿದ್ದರು ಅಂತೆ ಶನಿವಾರ ಸಹ ಕಷಾಯ ವಸ್ತ್ರದಾರಿಯೊಬ್ಬರನ್ನು ಮನೆಗೆ ಕರೆಸಿದ್ದಾರೆ ಆತನ ಕೈಯಲ್ಲಿ ಮನೆಯ ಸುತ್ತ ಪೂಜೆ ಮಾಡಿಸಿ ನಿಂಬೆಹಣ್ಣುಗಳನ್ನು ಕಟ್ಟಿರುತ್ತಾರೆ.ನಂತರ ಮನೆಯ ಯಜಮಾನ ಪುರುಶೊತ್ತಮನಾಯ್ಡು ತನ್ನ ಸ್ನೂಹಿತನನ್ನು ಮನೆಗೆ ಕರೆಯಿಸಿ ಮನೆಯಲ್ಲಿ ನಡೆಯುತ್ತಿರುವ ಪೂಜೆಗಳ ಬಗ್ಗೆ ವಿವರಿಸಿದ್ದಾನೆ, ಭಾನುವಾರ ಬೆಳಿಗ್ಗೆ ಇಬ್ಬರು ಹೆಣ್ಣು ಮಕ್ಕಳು ಅಲೆಖ್ಯಾ (27) ಮತ್ತು ಸಾಯಿದಿವ್ಯಾ (23) ಮನೆಯ ಸುತ್ತ ಪ್ರದಿಕ್ಷಣೆ ಹಾಕುತ್ತಿರುವುದನ್ನು ಅಕ್ಕಪಕ್ಕದ ಮನೆಯವರುಗಳು ನೋಡಿರುತ್ತಾರಂತೆ,ಮತ್ತೆ ಭಾನುವಾರ ಸಂಜೆ ಪುರುಶೊತ್ತಮನಾಯ್ಡು ಫೊನ್ ಮಾಡಿ ಸ್ನೇಹಿತನನ್ನು ಕರೆಸಿದ್ದಾನೆ ಅವರು ಬರುವಷ್ಟರಲ್ಲಿ ನಂತರ ಮನೆಯಿಂದ ಬೆವಿನ ಸೊಪ್ಪು ಹಿಡಿದುಕೊಂಡು ಹೊರಬಂದು ಬಾಗಿಲ ಬಳಿ ನಿಂತುಕೊಂಡು ಎಲ್ಲವೂ ಮುಗಿದುಹೊಯಿತು ಪೂಜೆ ಹೆಸರಿನಲ್ಲಿ ನನ್ನ ಪತ್ನಿ ನನ್ನ ಮಕ್ಕಳನ್ನು ಹತ್ಯೆ ಮಾಡಿರುತ್ತಾಳೆ ಎಂದು ಹೇಳಿದ್ದು ಸ್ನೇಹಿತ ಬಂದು ಮನೆಯ ಪರಿಸ್ಥಿತಿ ನೋಡಿ ಪೋಲಿಸರಿಗೆ ಮಾಹಿತಿ ನೀಡಿರುತ್ತಾನೆ.
ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.
ತಮ್ಮ ವಿದ್ಯಾಬುದ್ದಿಯಿಂದ ಎಷ್ಟೊ ಜನಕ್ಕೆ ವಿದ್ಯೆ ದಾನ ಮಾಡಿದ ಕುಟುಂಬ ಮೂಢನಂಬಿಕೆಯಿಂದ ತನ್ನ ಸ್ವಂತ ಮಕ್ಕಳನ್ನೆ ಬಲಿ ನೀಡಿದ್ದಾರೆ ಎಂದು ಸ್ಥಳಿಯರು ಮತ್ತು ಅವರ ಬಂದು ಬಳಗ ಆಕ್ರೋಶವ್ಯಕ್ತಪಡಿಸಿರುತ್ತಾರೆ. ಪುರುಷೋತ್ತಮನಾಯ್ಡುಗೆ ಭಕ್ತಿ ಹೆಚ್ಚು ಜೊತೆಗೆ,ತಮಿಳುನಾಡಿನ ಆಶ್ರಮವೊಂದ ಸಂಪರ್ಕದಲ್ಲಿರುವ ಅವರು ಪುಸ್ತಕಗಳನ್ನು ತಂದು ಓದುತ್ತಾರೆ ಎನ್ನಲಾಗಿದ್ದು ಆದರೆ ಇಂತಹ ಮೂರ್ಖ ಕೆಲಸ ಮಡುವ ಬಗ್ಗೆ ನಮಗ್ಯಾರಿಗೂ ತಿಳಿದಿಲ್ಲ ಎಂದು ಅವರ ಸಹ-ಉಪನ್ಯಾಸಕರೊಬ್ಬರು ಹೇಳುತ್ತಾರೆ.
ಅತೀಂದ್ರಿಯ ಶಕ್ತಿಯ ವಿಪರಿತಕ್ಕೆ ತಲುಪಿದ ಪೋಷಕರ ನಡವಳಿಕೆ
ಇಬ್ಬರೂ ಹೆಣ್ಣುಮಕ್ಕಳು ಉನ್ನತ ವಿದ್ಯಾವಂತರು.ಹಿರಿಯ ಮಗಳು ಅಲೆಖ್ಯಾ ಇತ್ತೀಚೆಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿರುವ ಭಾರತೀಯ ಅರಣ್ಯ ಸೇವೆಯಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕರೋನಾ ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದು ನಾಗರಿಕರ ಸೇವೆ (ಐ.ಎ.ಎಸ್) ತಯಾರಿ ನಡೆಸುತ್ತಿದ್ದರೆ. ಎರಡನೇ ಹುಡುಗಿ ಸಾಯಿದಿವ್ಯಾ ಎಂಬಿಎ ಮುಗಿಸಿ ಚೆನ್ನೈನ ಎ.ಆರ್.ರಹಮಾನ್ ಮೂಸಿಕ್ ಇನ್ಸ್ಟಿಟ್ಯೂಟ್ ನಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರಂತೆ.ಕರೋನಾ ಹಿನ್ನಲೆಯಲ್ಲಿ ಮನೆಯಲ್ಲಿಯೇ ಇದ್ದ ನಾಲ್ಕು ಜನ ಭಕ್ತಿ ಪೂಜೆ ಪುನಸ್ಕಾರ, ಮರು ಜನ್ಮ ಇವುಗಳ ಬಗ್ಗೆ ಬೆಳಕು ಚಲ್ಲುವ ರಿತಿಯಲ್ಲಿ ಅವರಲ್ಲೆ ಚರ್ಚೆಗಳು ಮಾಡಿಕೊಂಡು ಅತೀಂದ್ರಿಯ ಶಕ್ತಿಗಳನ್ನು ಒಲಸಿಕೊಳ್ಳುವ ಪ್ರಯತ್ನದಲ್ಲಿ ಇಂತಹ ಪ್ರಯತ್ನ ಆಗಿರಬಹುದಾ ಎನ್ನುಲಾಗುತ್ತಿದೆ.
ಸಹೋದರಿಯರ ಕೊಲೆಯಲ್ಲಿ ಪೋಷಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮದನಪಲ್ಲಿ ಪೋಲಿಸರು.ಆರೋಪಿಗಳ ಮನೆಯಿಂದ ಸಿಸಿ ಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡಿದ್ದು ಅದರ ಅಧಾರದಲ್ಲಿ ತನಿಖೆ ನಡೆಸುವುದಾಗಿ ಡಿಎಸ್ಪಿ ರವಿ ಮನೋಹರಾಚಾರಿ ಸೋಮವಾರ ತಿಳಿಸಿರುತ್ತಾರೆ.
ಈ ಇಡಿ ಕುಟುಂಬ ಒಬ್ಬ ಸ್ವಯಂ ಘೋಷಿತ ದೇವಮಾನವನ ಸಂಪರ್ಕಕ್ಕೆ ಬಂದಿದ್ದಾರೆ, ಅವನ ಪ್ರಭಾವಕ್ಕೆ ಒಳಗಾಗಿ ಕಲಿಯುಗ ಅಂತ್ಯವಾಗುತ್ತಿದೆ,ಸತ್ಯಯುಗ ಆರಂಭವಾಗಲಿದೆ, ನೀವು ಅದಕ್ಕಾಗಿ ನಿಮ್ಮ ಮಕ್ಕಳಿಬ್ಬರ ಬಲಿದಾನ ಮಾಡಬೇಕು,ಮಾಡಿದರಷ್ಟೆ ನಿಮಗೆ ಸತ್ಯಯುಗದಲ್ಲಿ ಮರುಹುಟ್ಟು ಸಾಧ್ಯ ಎಂದು ನಂಬಿಸಿದ್ದಾನೆ ಎನ್ನಲಾಗಿದ್ದು,ಅದರಂತೆ
ತಾಯಿಯೇ ಒಬ್ಬಳನ್ನು ಡಮ್ಬಲ್ಸ್ ನಿಂದ ಮತ್ತೊಬ್ಬಳನ್ನು ತ್ರಿಶೂಲದಿಂದ ಇರಿದು ಇಬ್ಬರೂ ಮಕ್ಕಳನ್ನು ಸಾಯಿಸಿದ್ದಾಳೆ, ತಂದೆ ಇದನ್ನು ನೋಡುತ್ತ ನಿಂತಿದ್ದಾನೆ. ಇಬ್ಬರ ದೇಹಗಳು ಬೆತ್ತಲಾಗಿದ್ದವು. ಅವುಗಳ ಮೇಲೆ ಕೆಂಪು ಸೀರೆಯೊಂದನ್ನು ಹೊದಿಸಿ,ಬಾಯಿಗಳಲ್ಲಿ ಕಳಶಗಳನ್ನು ಇಡಲಾಗಿತ್ತು ಎನ್ನಲಾಗಿದೆ!
ಈ ದಾರುಣ ಕೊಲೆಗಳ ನಂತರ ಪೊಲೀಸರು ಸ್ಥಳಕ್ಕೆ ಬಂದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲು ಮುಂದಾದಾಗ ದಂಪತಿಗಳು ಪ್ರತಿರೋಧ ತೋರಿದ್ದಾರೆ. ಸತ್ಯಯುಗ ಆರಂಭಗೊಳ್ಳುತ್ತದೆ ಇಹ ಲೋಕಕ್ಕೆ ಹೋಗಿರುವ ನನ್ನ ಇಬ್ಬರೂ ಮಕ್ಕಳೂ ಅಲ್ಲೇ ಹುಟ್ಟಿಬರಲಿದ್ದಾರೆ, ದೇಹಗಳಿಗೆ ಜೀವ ಬರಲಿದೆ ನಂತರ ನಾನೆ ಬಂದು ನಿಮಗೆ ಶರಣಾಗುತ್ತೇವೆ ಎಂದು ದಂಪತಿ ಪೋಲಿಸರಿಗೆ ತಿಳಿಸಿದ್ದಾರಂತೆ.
ಸಂಗ್ರಹ ವರದಿ:ಚ.ಶ್ರೀನಿವಾಸಮೂರ್ತಿ