ಚಿಂತಾಮಣಿ:-ಮನೆಯಿಲ್ಲದೆ ರಸ್ತೆ ಬದಿ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ಪರಿಶಿಷ್ಟ ವರ್ಗದ ನಿರಾಶ್ರಿತ ಕುಟುಂಬಕ್ಕೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್.ಲತಾ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸಿ ಸದ್ಯಕ್ಕೆ ವಾಸಿಸಲು ಬಾಡಿಗೆ ಮನೆ ಕೊಡಿಸಿರುವ ಅಪರೂಪದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ತಾಯಿ ಹಾಗೂ ಮೂರು ಜನ ಹೆಣ್ಣು ಮಕ್ಕಳು, ವಸತಿ ಆಸರೆ ಇಲ್ಲದೆ ಹಲವಾರು ತಿಂಗಳಿನಿಂದ ರಸ್ತೆ ಬದಿಯ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು ಈ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆದ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್.ಲತ ಅವರು ನಿರಾಶ್ರಿತ ಮಂಜುಳ ಮತ್ತು ಆಕೆಯ ಮಕ್ಕಳನ್ನು ಭೇಟಿಯಾಗಲು ಚಿಂತಾಮಣಿಗೆ ಆಗಮಿಸಿ ನಿರಾಶ್ರಿತರನ್ನು ಚಿಂತಾಮಣಿಯ ಪ್ರವಾಸಿ ಮಂದಿರಕ್ಕೆ ಕರೆಯಿಸಿಕೊಂಡು ಸಮಸ್ಯೆಯನ್ನು ಆಲಿಸಿ, ಆಶ್ರಯ ಯೋಜನೆಯಡಿ ಶೀಘ್ರವಾಗಿ ಮನೆ ನಿರ್ಮಾಣ ಮಾಡಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ,ಜೊತೆಗೆ ಸದರಿ ಕುಟುಂಬ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಬಾಡಿಗೆ ಮನೆಯ ವ್ಯವಸ್ಥೆಯನ್ನು ಸಹ ಮಾಡಿರುತ್ತಾರೆ.ಆಕೆಯ ಮೂರು ಜನ ಹೆಣ್ಣು ಮಕ್ಕಳಿಗೆ ವಸತಿ ಶಾಲೆಯಲ್ಲಿ ದಾಖಲಾತಿ ಕೊಡಿಸಿ, ಅವರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಬಾರದಂತೆ ಅನುಕೂಲ ಮಾಡುವ ನಿಟ್ಟಿನಲ್ಲಿ ತಕ್ಷಣಕ್ಕೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿರುತ್ತಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪ,ಸಮಾಜ ಕಲ್ಯಾಣಾಧಿಕಾರಿ ಸಿದ್ದನಾರಯಣಸ್ವಾಮಿ,ನಗರಸಭೆ ಆಯುಕ್ತ ಉಮಾಶಂಕರ್ ಕಸಬಾ ಕಂದಾಯ ನೀರಿಕ್ಷಕ ಅಂಬರಿಶ್ ಮುಂತಾದವರು ಇದ್ದರು.
ವರದಿ.ಚ.ಶ್ರೀನಿವಾಸಮೂರ್ತಿ