ಶ್ರೀನಿವಾಸಪುರ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಾಲಹರಣ ಮಾಡುವುದನ್ನು ಬಿಟ್ಟು, ರೈತರ ಮದ್ಯೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ತೋಟಗಾರಿಕೆ ಅಧಿಕಾರಿಗಳಿಗೆ ತೀಕ್ಷಣವಾಗಿ ಸೂಚಿಸಿದಲ್ಲದೆ ಅಧಿಕಾರಿಗಳ ವಿರುದ್ದ ಗರಂ ಆಗಿ ಹೇಳಿದರು.
ಅವರು ತಾಲ್ಲೂಕಿನ ಹೊಗಳಗೆರೆ ತೋಟಗಾರಿಕೆ ಮತ್ತು ಸಂಶೋಧನಾ ಹಾಗು ವಿಸ್ತೀರಣಾ ಕೇಂದ್ರದಲ್ಲಿ ಗೇರು ಬೆಳೆ ಸಂಬಂದ ಅಧಿಕ ಇಳುವರಿಗಾಗಿ ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಲು ತೋಟಗಾರಿಕೆ ಬೆಳೆಗಾರರಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾಯ್ರಕಮ ಉದ್ಘಾಟಿಸಿ ಮಾತನಾಡಿದರು.
ಕಾಲಕ್ಕೆ ಅನುಗುಣವಾಗಿ ತಕ್ಕ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ರೈತರ ವಿಚಾರದಲ್ಲಿ ಚಿಂತನ ಮಂಥನ ಅಗಬೇಕು. ರೈತರು ಯಾವ ವಿಜ್ಞಾನಿಗೂ ಕಡಿಮೆಯಿಲ್ಲ. ಸರಿಯಾದ ರೀತಿ ತರಬೇತಿ ನೀಡಿದರೆ ಅವರು ಸಹ ಹೊಸ ಹೊಸ ಸಂಶೋಧನೆ ಮಾಡಿ ಇತರೆ ರೈತರಿಗೆ ಮಾದರಿಯಾಗಿ ಮಾರ್ಗದರ್ಶನ ನೀಡುತ್ತಾರೆ ಎಂದರು.
ಶ್ರೀನಿವಾಸಪುರದಲ್ಲಿ ಮಾವು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಇಲ್ಲಿಗೆ ಮಾವು ಸಂಸ್ಕರಣ ಘಟಕ ಬೇಕು ಎಂದು ಬೇಡಿಕೆ ಇದ್ದು,ಈ ಕುರಿತಾಗಿ ಈಗಾಗಲೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು,ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಲು ಒತ್ತಡ ಹೇರಿರುವುದಾಗಿ ತಿಳಿಸಿದರು.
ಈ ಭಾಗದ ಮಾವು ಬೆಳೆಗಾರರು ಗೋಡಂಬಿ ಬೆಳೆ ಬೆಳೆಯುವಂತೆ ಸಲಹೆ ನೀಡಿದ ಅವರು ಪರ್ಯಾಯ ಬೆಳೆಗೂ ಒತ್ತು ನೀಡುವಂತೆ ಹೇಳಿದರು. ಇಲ್ಲಿನ ರೈತರಿಗೆ ಉತ್ತಮ ನೀರಿನ ಸೌಲಭ್ಯ ಕಲ್ಪಿಸಿದರೆ ಬಂಗಾರ ಬೆಳೆಯುತ್ತಾರೆ ಎಂದು ಕೋಲಾರದ ರೈತರ ಕೃಷಿ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತೋಟಗಾರಿಕೆ ಹಾಗು ರೇಷ್ಮೆ ಬೆಳೆಗಾರರು ಯಾವ ರಿತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಹಾಗು ಇವರು ಬೆಳೆಗೆ ಯೋಗ್ಯ ಬೆಲೆ ದೊರೆಯುತ್ತಿದೀಯ ಎಂಬುದೇ ಸವಾಲಿನ ಪ್ರಶ್ನೆಯಾಗಿದೆ ಈ ಬಗ್ಗೆ ತಙ್ಞರ ಜೊತಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರ ನೀಡುವ ಕುರಿತಾಗಿ ನಿರ್ದಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆಗುತ್ತಿರುವ ಆಕಾಲಿಕ ಮಳೆಯಿಂದ ತೋಟಗಾರಿಕೆ ಬೆಳೆಗಳು ನಷ್ಟವಾಗಿ, ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು ಇದಕ್ಕೆ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ತೋಟಗಾರಿಕೆ ಬೆಳೆಗಾರ ಸುರೇಂದ್ರ ತಮ್ಮ ತೋಟದಲ್ಲಿ ಮಾದರಿಯಾಗಿ ಬೆಳೆದಿರುವ ಸೀಬೆ ಬೆಳೆಯನ್ನು ಅಧಿಕಾರಿಗಳೊಂದಿಗೆ ತೆರಳಿ ವಿಕ್ಷೀಸಿದ ಮಂತ್ರಿಗಳು ಅಲ್ಲಿ ಅನುಸರಿಸಿರುವ ಮಿಶ್ರ ಬೇಸಾಯ ಅವರು ಕೈಗೊಂಡಿರುವಂತ ವ್ಯವಸಾಯ ಪದ್ದತಿ ಕುರಿತಾಗಿ ಮಾಹಿತಿ ಪಡೆದುಕೊಂಡರು ಇಂತಹ ವಿಭಿನ್ನವಾಗಿ ಆಲೋಚಿಸುವಂತ ರೈತರನ್ನು ಗುರುತಿಸಿ ಅವರಿಂದ ಇತರೆ ರೈತರಿಗೆ ತರಬೇತಿ ಕೊಡಿಸಲು ಇಲಾಖಾಧಿಕಾರಿಗಳು ಮುಂದಾಗಬೇಕು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾವು ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ, ಮಾವು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಚಂದ್ರಶೇಖರ್,ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ತಾಲೂಕು ಅಧ್ಯಕ್ಷ ಆಶೋಕರೆಡ್ಡಿ ಮುಂತಾದವರು ಇದ್ದರು.
ತೋಟಗಾರಿಕೆ ಅಧಿಕಾರಿಗಳ ವಿರುದ್ದ ಡಾ.ವೇಣುಗೋಪಾಲ್ ಆರೋಪ
ಈ ಭಾಗದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾವು ಬೆಳೆಗಾರರು ಇದ್ದರು ತೋಟಗಾರಿಕೆ ಅಧಿಕಾರಿಗಳು ಇಲ್ಲಿನ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ತೋಟಗಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಮಾವು ಬೆಳೆಗಾರರು ವೈಙ್ಙನಿಕವಾಗಿ ಅಭಿವೃದ್ದಿಯಾಗುತ್ತಿಲ್ಲ ಎಂದು ತೋಟಗಾರಿಕೆ ಮಂತ್ರಿಗಳಲ್ಲಿ ದೂರಿದರು.
ವರದಿ:ಚ.ಶ್ರೀನಿವಾಸಮೂರ್ತಿ