ಆಧುನಿಕವಾದ ಸುಸಜ್ಜಿತ ಅಡುಗೆ ಕೋಣೆ,ದೀಪಾಲಂಕರಕೃತವಾದ ಸುಂದರವಾದ ಸಭಾಭವನ
ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಶ್ರೀ ವರದಬಾಲಾಂಜನೇಯ ದೇವಾಲಯದ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವಂತ ಶ್ರೀ ಮಾರುತಿ ಸಭಾ ಭವನ ಮಾರ್ಚ 03 ರಂದು ಬುಧವಾರ ಲೋಕಾರ್ಪಾಣೆಗೊಳ್ಳಲಿದೆ. ಶ್ರೀ ವರದ ಬಾಲಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಹಾಗು ಶ್ರೀ ಆರ್ಯವೈಶ್ಯ ಮಂಡಳಿ ಟ್ರಸ್ಟ್ ಸೇರಿ ಆಧುನಿಕತೆಯ ತಂತ್ರಜ್ಞಾನ ಅಳವಡಿಸಿಕೊಂಡು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿರುವಂತ ಸಭಾ ಭವನವಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಶ್ರೀ ಆರ್ಯವೈಶ್ಯ ಮಂಡಳಿ ಟ್ರಸ್ಟ್ ಅಧ್ಯಕ್ಷರಾದ ವೈ.ಆರ್.ಎಸ್ ಪ್ರಕಾಶ್ ತಿಳಿಸಿರುತ್ತಾರೆ.ಎರಡು ದಿನಗಳ ಕಾಲ ನಡೆಯುವಂತ ವಿಶೇಷ ಹೋಮ,ಹವನ ಹಾಗು ಪೂಜಾ ಕಾರ್ಯಕ್ರಮಗಳ ಮೂಲಕ ಸಭಾ ಭವನವನ್ನು ಲೋಕಾರ್ಪಣೆ ಮಾಡಲಿದ್ದು ಕಾರ್ಯಕ್ರಮದ ಅಂಗವಾಗಿ ಬುಧವಾರ ಶ್ರೀ ಸೀತಾಮರ ಕಲ್ಯಾಣೋತ್ಸವ ಏರ್ಪಡಿಸಿರುತ್ತಾರೆ.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಶಾಸಕ ರಮೇಶಕುಮಾರ್,ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ರವಿಶಂಕರ್,ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಲೋಕಸಭೆ ಸದಸ್ಯ ಮುನಿಸ್ವಾಮಿ, ಲೋಕಸಭೆ ಮಾಜಿ ಸದಸ್ಯ ಮುನಿಯಪ್ಪ, ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಹಾಗು ವಿಧಾನಪರಿಷತ್ ಮಾಜಿ ಸದಸ್ಯ ತೂಪಲ್ಲಿಚೌಡರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಆರ್ಯವೈಶ್ಯ ಮಂಡಳಿ ಟ್ರಸ್ಟ್ ಮುಖಂಡ ಕಾಗತಿ ಸೂರ್ಯನಾರಯಣಶೆಟ್ಟಿ ತಿಳಿಸಿರುತ್ತಾರೆ.