ಸಿಬ್ಬಂದಿಯೇ ಇಲ್ಲ ಕಚೇರಿ ಬಿಕೋ ಎನ್ನುತ್ತಿದೆ
ಕನಿಷ್ಟ ಸಿಮ್ ಪಡೆಯಲು ಸಾದ್ಯವಾಗದ ಸ್ಥಿತಿ ಬಿ.ಎಸ್.ಎನ್.ಎಲ್ ಗ್ರಾಹಕರದು
ಶ್ರೀನಿವಾಸಪುರ:-ಇಲ್ಲಿನ ಬಿ.ಎಸ್.ಎನ್.ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಕಚೇರಿಯಲ್ಲಿ ಒಂದಿಬ್ಬರೇ ಸಿಬ್ಬಂದಿ ಕಾರ್ಯನಿರ್ವಹಿತ್ತಿದ್ದು ಈಗ ಅದರಲ್ಲೂ ಒಬ್ಬರನ್ನು ಚಿಂತಾಮಣಿಗೆ ವರ್ಗಾಯಿಸಿದ್ದರೆ ಉಪ ವಿಭಾಗದ ಅಭಿಯಂತರ ಅವರನ್ನು ಮುಳಬಾಗಿಲು-ಶ್ರೀನಿವಾಸಪುರಕ್ಕೆ ಜವಬ್ದಾರಿ ನೀಡಿರುತ್ತಾರಂತೆ ಇದರಿಂದಾಗಿ ಇಲ್ಲಿ ಇಲಾಖಾ ಸಿಬ್ಬಂದಿಯ ಸಂಖ್ಯೆ ಕೇವಲ ಒರ್ವ ಮಹಿಳೆ ಇದ್ದಾರೆ ಯಾವುದೆ ಸೇವೆ ಪಡೆಯಲು ಅಥಾವ ಇನ್ಯಾವುದೆ ತಾಂತ್ರಿಕ ಸಮಸ್ಯೆ ಕುರಿತಾಗಿ ಬಿ.ಎಸ್.ಎನ್.ಎಲ್ ಕಚೇರಿಗೆ ಗ್ರಾಹಕ ಹೋದರೆ ಕನಿಷ್ಠ ಮಾಹಿತಿ ಕೊಡುವುವರು ಇಲ್ಲದಂತಾಗಿದೆ ಈಗಿರುವ ಮಹಿಳಾ ಸಿಬ್ಬಂದಿಗೆ ಯಾವುದರಲ್ಲೂ ಪರಿಣಿತಿ ಇಲ್ಲ ಗ್ರಾಹಕ ಏನೇ ಕೇಳಿದರು ಸಾರ್ ಇಲ್ಲ ಬಂದನಂತರ ಹೇಳುತ್ತೇನೆ ಎನ್ನುತ್ತಾರೆ ಇನ್ನೂ ಇರುವ ಔಟ್ ಸೋರ್ಸಿಂಗ್ ಉದ್ಯೋಗಿಗಳು ಕಚೇರಿ ವಿಷಯ ನಮಗೇನು ಗೊತ್ತಿಲ್ಲ ಸಾರ್ ಎನ್ನುತ್ತಾರೆ ಜೊತೆಗೆ ಅವರಿಗೆ ಇದುವರಿಗೂ ಸಂಬಳ ನೀಡಿಲ್ಲವಂತೆ.
ಖಾಸಗಿ ಟೆಲಿಕಾಂ ಸಂಸ್ಥೆಗಳು ಮೂಲಭೂತಸೌಕರ್ಯಗಳು ಇಲ್ಲದೆ ಏನೆಲ್ಲ ಸೇವೆಗಳನ್ನು ಒದಗಿಸುತ್ತಿರುವ ಈ ಕಾಲದಲ್ಲಿ ಸ್ವಂತ ಕಟ್ಟಡ ಸೇರಿದಂತೆ ತಾಂತ್ರಿಕ ಉಪಕರಣಗಳು ಹೊಂದಿರುವಂತ ಸರ್ಕಾರಿ ಸಂಸ್ಥೆ ಸೇವೆ ಒದಗಿಸುವುದು ಇರಲಿ ಸಮರ್ಪಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಚೌಕಾಸಿಮಾಡುತ್ತಿದೆ ಎನ್ನುತ್ತಾರೆ ಬಿ.ಎಸ್.ಎನ್.ಎಲ್ ಗ್ರಾಹಕರು.
ಕೊರೋನಾ ನಂತರದಲ್ಲಿ ಬಹುತೇಕ ಒಂದು ವರ್ಷದಿಂದ ಮನೇಯಿಂದಲೆ ಕೆಲಸ ಮಾಡುತ್ತಿರುವ ಹಲವಾರು ಐಟಿ ಉದ್ಯೋಗಿಗಳು ಶ್ರೀನಿವಾಸಪುರದಲ್ಲಿ ಏಕಮೇವವಾಗಿ ಲಭ್ಯ ಇರುವಂತ ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಫೈಬರ್ ಆಪ್ಟಿಕ್ಸ್ ಸೇವೆಗಳನ್ನು ಪಡೆದುಕೊಂಡಿದ್ದಾರೆ ಮೊದಲಿಗೆ ಬೆರಳಣಿಕೆಯಷ್ಟು ಇದ್ದ ಗ್ರಾಹಕರು ಈಗ ಹತ್ತು ಪಟ್ಟು ಹೆಚ್ಚಾಗಿದ್ದಾರೆ ಇವರಿಗೆ ನೀಡುತ್ತಿರುವ ಸೇವೆಗಳು ತಾಂತ್ರಿಕವಾಗಿ ಕೈಕೊಟ್ಟಾಗ ಅದನ್ನು ಸರಿಮಾಡುವಂತ ತಙ್ಙ ಉದ್ಯೋಗಿ ಸದ್ಯದ ಪರಿಸ್ಥಿತಿಯಲ್ಲಿ ಶ್ರೀನಿವಾಸಪುರದಲ್ಲಿ ಇಲ್ಲ ಈ ಬಗ್ಗೆ ಉಪ ವಿಭಾಗದ ಅಭಿಯಂತರ ಅವರನ್ನು ಕೇಳಿದರೆ ಈಗೆಲ್ಲ ಆನ್ ಲೈನ್ ಸಾರ್ ನಾವೇನೂ ಮಾಡಲು ಸಾದ್ಯವಿಲ್ಲ ಸರ್ಕಾರಿ ಕೇಲಸ ನಮಗೆಲ್ಲಿ ವರ್ಗಾವಣೆ ಮಾಡಿದರೆ ಅಲ್ಲಿ ಹೋಗಿ ಕೆಲಸ ಮಾಡಬೇಕು,ನನಗೆ ಶ್ರೀನಿವಾಸಪುರ-ಮುಳಬಾಗಿಲು ಜವಬ್ದಾರಿ ನೀಡಿರುತ್ತಾರೆ ಮುಳಬಾಗಿಲಿನಲ್ಲಿ ಹೆಚ್ಚು ಕೆಲಸ ಇದೆ ಆ ಕಡೆ ಹೆಚ್ಚು ನಿಗಾ ಇಡಬೇಕಾಗುತ್ತದೆ ಎನ್ನುತ್ತಾರೆ.ಹಾಗಾದರೆ ಇಲ್ಲಿನ ಸಮಸ್ಯೆಗೆ ಪರಿಹಾರ ಕೊಡುವರು ಯಾರು ಅಂದರೆ ಅವರಲ್ಲಿ ಉತ್ತರವೆ ಇಲ್ಲ.
ಶ್ರೀನಿವಾಸಪುರದ ಬಿ.ಎಸ್.ಎನ್.ಎಲ್ ಅವಶ್ಯ ಸೇವೆಗಳು ಜನರಿಗೆ ಸಿಗಬೇಕಾದರೆ ಅರ್ಹ ಸಿಬ್ಬಂದಿ ಬೇಕಾಗುತ್ತದೆ ಇದಕ್ಕೆ ಆಸಕ್ತಿ ತೊರಬೇಕಾದವರು ಪಾರ್ಲಿಮೆಂಟ್ ಸದಸ್ಯರು ಅವರು ಇತ್ತ ಕಡೆ ಗಮನ ಹರಿಸಿ ಅವಶ್ಯ ಸಿಬ್ಬಂದಿಯನ್ನು ವರ್ಗಾಯಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿರುತ್ತಾರೆ.