ಕೋಚಿಮುಲ್ ವಿಭಜಿತ ಕೋಲಾರ ಜಿಲ್ಲೆಗೆ ಕಾಮಧೇನು
ಶ್ರೀನಿವಾಸಪುರ:-ಮಾವು ಮಂಡಳಿಯಲ್ಲಿ ಮಾವು ಬೆಳೆಗಾರರಿಗೆ ಅನವು ಮಾಡಿಕೊಡಲು ಆರ್ಥಿಕ ತೊಂದರೆ ಇದ್ದು ರಾಜ್ಯಸರ್ಕಾರ ಬಡ್ಜೆಟ್ ನಂತರ ಮಂಡಳಿಗೆ ಅನುಧಾನ ಬಿಡುಗಡೆಯಾಗುವ ಭರವಸೆ ಇದೆ ನಂತರ ಬೆಳಗಾರರಿಗೆ ಸಾನುಕೂಲವಾಗಿ ಮಾವು ಕೊಯ್ಲು ಮಾಡುವಂತ ಪರಿಕರಗಳು,ತಾಂತ್ರಿಕ ತರಬೇತಿಗಳು, ಹಣ್ಣು ಸಾಗಿಸಲು ಕ್ರೇಟ್ ಗಳನ್ನು ಕೊಡುವ ಬಗ್ಗೆ ಚಿಂತನೆ ಮಾವು ಮಂಡಳಿಗೆ ಇದೆ ಎಂದು ಮಾವು ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಹೇಳಿದರು ಅವರು ಇಂದು ಶ್ರೀನಿವಾಸಪುರ ಮಾವು ಬೆಳೆಗಾರರ ಉತ್ಪಾದಕರ ನಿಯಮಿತ ಸಂಸ್ಥೆಯನ್ನು ಭೈರವೇಶ್ವರ ವಿದ್ಯಾನಿಕೇತನ ಆವರಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಉದ್ದೇಶ ಉನ್ನತವಾಗಿದ್ದು ಜೊತೆಗೆ ಸಂಸ್ಥೆಗೆ ಮಾರುಕಟ್ಟೆ ಹಾಗು ತಾಂತ್ರಿಕ ಸಲಹೆಗಾಗಿ ಬೆಂಗಳೂರು ಗಾಂದಿ ಕೃಷಿ ವಿಜ್ಙಾನ ಕೇಂದ್ರದ ತಜ್ಙರು ಎಲ್ಲಾ ರಿತಿಯ ಸಹಕಾರ ನೀಡಲು ಇರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಮಾವು ಮಂಡಳಿ ಆರ್ಥಿಕ ಚೈತನ್ಯಗೊಳಿಸಿ ಆ ಮೂಲಕ ಮಾವು ಬೆಳೆಗಾರರಿಗೆ ತಾಂತ್ರಿಕವಾಗಿ ಪರಣಿತರನ್ನಾಗಿಸಲು ತೋಟಗಾರಿಗೆ ಸಚಿವರಲ್ಲಿ ವಿಚಾರ ಮಾಡಿದ್ದು ಅವರು ಸಹ ಈ ಕುರಿತಾಗಿ ಆಸಕ್ತಿ ಹೊಂದಿರುತ್ತಾರೆ ಎಂದರು ವಿಭಜಿತ ಕೋಲಾರ ಜಿಲ್ಲೆಯಲ್ಲಿ ಕೋಚಿಮುಲ್ ಯಾವ ರಿತಿಯಾಗಿ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಕಾಮಧೇನು ಆಗಿದಿಯೋ ಅದೇ ರಿತಿಯಲ್ಲಿ ಮಾವು ಮಂಡಳಿ ಸಹ ಮಾವು ಬೆಳೆಗಾರನ್ನು ಕಾಪಾಡುವಂತಾಗಲು ಶ್ರಮ ವಹಿಸುವುದಾಗಿ ಹೇಳಿದರು. ಕಾರ್ಪೊರೇಟ್ ಶೈಲಿಯಲ್ಲಿ ಮಾವು ಮಾವು ಮಾರುಟ್ಟೆ ಅಭಿವೃದ್ದಿ ಮಾಡುವ ಯೋಜನೆ ಇರುವುದಾಗಿ ಹೇಳಿದ ಅವರು ದುಬೈನಲ್ಲೂ ಮಾವು ಮೇಳ ಆಯೋಜಿಸಲು ಅಲ್ಲಿನವರು ಮುಂದೆ ಬಂದಿದ್ದು ಈ ಬಗ್ಗೆ ಚರ್ಚೆ ನಡೆದಿದೆ ಎಂದರು.
ಶ್ರೀನಿವಾಸಪುರ ಮಾವು ಬೆಳೆಗಾರರ ಉತ್ಪಾದಕರ ನಿಯಮಿತ ಸಂಸ್ಥೆಯ ನಿರ್ದೇಶಕ ಹೊಸಹಳ್ಳಿ ಡಾ.ಜಗನಾಥರೆಡ್ಡಿ ಮಾತನಾಡಿ ಸಂಸ್ಥೆಯನ್ನು ಹಲವಾರು ರಿತಿಯ ಕನಸುಗಳನ್ನು ಇಟ್ಟುಕೊಂಡು ಕಟ್ಟಲಾಗಿದೆ ಪ್ರಥಮ ವರ್ಷದಲ್ಲಿ ಎಲ್ಲವನ್ನು ಸಾಧಿಸಲು ಆಗುವುದಿಲ್ಲ ಆರಂಭದ ಸಮಸ್ಯೆಗಳನ್ನು ಎದುರಿಸಿ ಸಂಸ್ಥೆ ಬೆಳೆಯಬೇಕಾಗಿದೆ ಇದಕ್ಕಾಗಿ ಆರಂಭದ ವಿಜ್ಙಗಳಿಗೆ ಬೆಳೆಗಾರಾರು ಬೆಸರ ಪಟ್ಟುಕೊಳ್ಳಬಾರದು ಎಂದ ಅವರು ಮಾವು ಮೇಳ ಆಯೋಜಿಸಲು ಜಿಕೆವಿಕೆ ಸಂಪೂರ್ಣ ಸಹಕಾರ ನೀಡಬೇಕು ಸಂಸ್ಥೆಯ ಕಚೇರಿಗೆ ಸ್ಥಳಾವಕಾಶ ನೀಡಬೇಕು ಎಂದು ವೇದಿಕೆಯಲ್ಲಿದ್ದ ಜಿಕೆವಿಕೆ ಉಪಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಅವರಿಗೆ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಸ್ಥೆ ಅಧ್ಯಕ್ಷ ಹೊಸಹಳ್ಳಿರವಿಪ್ರಕಾಶರೆಡ್ಡಿ ವಹಿಸಿದ್ದರು ಜಿಕೆವಿಕೆ ಮಾರುಕಟ್ಟೆ ತಜ್ಙ ಡಾ,ವೆಂಕಟರೆಡ್ಡಿ,ಡಾ.ಮುಖುಂದ,ಗಣಪತಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್,ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಉತ್ಪಾದಕರ ನಿಯಮಿತ ಸಂಸ್ಥೆಯ ಸಲಹಾ ನಿರ್ದೇಶಕ ದಿಗುವಪಲ್ಲಿರಾಜಾರೆಡ್ಡಿ, ರಮೇಶ್, ಮುಂತಾದವರು ಉಪಸ್ಥಿತರಿದ್ದರು.