ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಎಸ್ಎಫ್ಸಿ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ಸರ್ಕಾರ ತಡೆಹಿಡಿದಿರುತ್ತದೆ ಈ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಪುರಸಭೆ ಸದಸ್ಯರ ನಿಯೋಗದೊಂದಿಗೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಮಂತ್ರಿ ನಾಗರಾಜ್ ಅವರಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, 2018-19ರಲ್ಲಿ ಶ್ರೀನಿವಾಸಪುರ ಪಟ್ಟಣ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ 15 ಕೋಟಿ ಅನುದಾನ ಮಂಜೂರಾಗಿತ್ತು, ಕಾರಣಾಂತರಗಳಿಂದ ಹಣ ಬಿಡುಗಡೆಯಾಗಲಿಲ್ಲ ಇದರಿಂದಾಗಿ ಪಟ್ಟಣದಲ್ಲಿ ಆಗಬೇಕಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ನೀರು ಸರಬರಾಜು ಯೋಜನೆಗಳ ಅನುಷ್ಟಾನವು ಕುಂಠಿತಗೊಂಡಿರುತ್ತದೆ.ಪುರಸಭೆ ವತಿಯಿಂದ ಆಗಬೇಕಿದ್ದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಗೆ ಹೊಸದಾಗಿ 4 ಹಳ್ಳಿಗಳು ಸೇರ್ಪಡೆಯಾಗಿರುತ್ತವೆ. ಹಳ್ಳಿಗಳಲ್ಲಿ ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನದ ಕೊರತೆಯಿದೆ.ಬೆಸಿಗೆ ಕಾಲ ಆರಂಭವಾಗಿದೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ, ಯುಜಿಡಿಯನ್ನು ದುರಸ್ತಿ ಕಾರ್ಯ ಜೋತೆಗೆ ಯುಜಿಡಿ ಇಲ್ಲದ ವಾರ್ಡುಗಳಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು ವಿಶೇಷ ಯೋಜನೆಯಡಿ ಹಣ ಮಂಜೂರು ಮಾಡಬೇಕು ಎಂದು ಕೋರಿದ ಅವರು.ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಅವಶ್ಯ ಸಿಬ್ಬಂದಿ ಭರ್ತಿ ಮಾಡಿ
ಪಟ್ಟಣದಲ್ಲಿ ಜನ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಕರಿಗೆ ಪುರಸಭೆ ಕಚೇರಿಯಲ್ಲಿ ನಿಗದಿತ ಸಮಯಕ್ಕೆ ಕೆಲಸ ಕಾರ್ಯಗಳು ಆಗುತಿಲ್ಲ ಇದನ್ನು ನಿವಾರಿಸಲು ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಕೋರಿದರು.
ಮಾಜಿ ಶಾಸಕರೊಂದಿಗೆ ಪುರಸಭೆ ಅಧ್ಯಕ್ಷೆ ಲಲಿತ ಶ್ರೀನಿವಾಸನ್, ಉಪಾಧ್ಯಕ್ಷೆ ಅಯಿಶಾ ನಯಾಜ್, ಸದಸ್ಯರಾದ ಶಬ್ಬೀರ್, ಬಿ.ವೆಂಕಟರೆಡ್ಡಿ, ಆನಂದಗೌಡ,ರಸೂಲ್ ಖಾನ್, ಜಬೀನ್ ತಾಜ್, ವಹೀದಾ ಬೇಗಂ, ಸುನಿತ, ಜಯಲಕ್ಷ್ಮಿ, ಮುಖಂಡರಾದ ಪೂಲುಶಿವಾರೆಡ್ಡಿ ಜಗದೀಶ್, ಸಿ.ರವಿ, ಸತ್ಯನಾರಾಯಣ ಮುಂತಾದವರು ನಿಯೋಗದಲ್ಲಿ ಇದ್ದರು.