ಶ್ರೀನಿವಾಸಪುರ:ಚಲ್ದಿಗಾನಹಳ್ಳಿ ಪಂಚಾಯಿತಿ ದಾಖಲಾತಿಗಳು ಅನುಮಾನಸ್ಪದವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು ಇದರ ಹಿಂದೆ ಇರುವಂತ ದುಷ್ಕರ್ಮಿಗಳು ಯಾರು ಎನ್ನುವುದೆ ಅಧಿಕಾರಿಗಳಿಗೆ ತಲೆನೋವಾಗಿದೆ.ಚಲ್ದಿಗಾನಹಳ್ಳಿ ಪಂಚಾಯಿತಿ ಕಟ್ಟಡ ತೀರಾ ಇಕ್ಕಟ್ಟಾಗಿದ್ದು ಕಚೇರಿ ಕೆಡವಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಪಂಚಾಯಿತಿ ಆಡಳಿತ ಕಚೇರಿಯನ್ನು ತಾತ್ಕಲಿಕವಾಗಿ ಗ್ರಾಮದ ಶಾಲೆ ಬಳಿ ಇರುವಂತ ಸಮುದಾಯ ಭವನಕ್ಕೆ ವರ್ಗಾಯಿಸಬೇಕೆಂದು ಪಂಚಾಯಿತಿ ಸಭೆಯಲ್ಲಿ ತಿರ್ಮಾನ ಮಾಡಿ ಅದರಂತೆ ಸಮುದಾಯ ಭವನಕ್ಕೆ ವರ್ಗಾಯಿಸಿರುತ್ತಾರೆ. ಈ ವಿಚಾರವಾಗಿ ಪಂಚಾಯಿತಿ ರಾಜಕೀಯ ನಾಯಕರಲ್ಲಿ ಬಿನ್ನಾಭಿಪ್ರಾಯ ಹೊಗೆಯಾಡಿದೆ ಈ ಬಗ್ಗೆ ಎರಡು ರಾಜಕೀಯ ಪಕ್ಷಗಳ ಮುಖಂಡರು ಪರವಿರೋಧ ವ್ಯಕ್ತವಾಗಿದೆ ಇದರ ನಡುವೆ ಗುರುವಾರ ರಾತ್ರಿ ಸಮುಧಾಯ ಭವನದಲ್ಲಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು ಉದ್ಯೋಗಖಾತ್ರಿ ಯೋಜನೆಯ ನರೇಗಾ ದಾಖಲಾತಿಗಳು ಮತ್ತು ವಿವಿಧ ಯೋಜನೆಗಳ ಮನೆಗಳ ಫಲಾನುಭವಿಗಳ ಆಯ್ಕೆ ಪಟ್ಟಿ ಕಡತಗಳು ಬೆಂಕಿಗೆ ಆಹುತಿಯಾಗಿದೆ ಇದಕ್ಕೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಂಕರಪ್ಪ, ಹೇಳುವಂತೆ ಪಂಚಾಯಿತಿಯಲ್ಲಿ ಉಂಟಾಗಿರುವ ಬೆಂಕಿ ಅವಘಡ ವಿದ್ಯತ್ ಶಾರ್ಟಸರ್ಕಿಟ್ ನಿಂದ ಆಗಿರುತ್ತದೆ ಸುಟ್ಟು ಹೋಗಿರುವಂತ ದಾಖಲಾತಿಗಳು ಹಳೇ ವರ್ಷದ ಕಡತಗಳು ಎಂದು ಹೇಳಿಕೆ ನೀಡಿ ತಿಪ್ಪೆಸಾರಿಸಿದ್ದಾರೆ.
ಈ ಬಗ್ಗೆ ಪೋಲಿಸರಿಗೆ ದೂರು ನೀಡುವುದಾಗಿ ತಿಳಿಸಿದರು.
ಜಿ.ಪಂ ಸಿಇಒ ಭೇಟಿ
ಚಲ್ದಿಗಾನಹಳ್ಳಿ ಪಂಚಾತಿಯಲ್ಲಿ ನಡೆದಿರುವ ಬೆಂಕಿ ಅವಘಡದ ಸ್ಥಳಕ್ಕೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಹಾಗು ತಾಲೂಕು ಪಂಚಾಯಿತಿ ಇಒ ಆನಂದ್ ಭೇಟಿ ನೀಡಿದ್ದು ಬೆಂಕಿ ಅವಘಡ ಸಂಬವಿಸಲು ಕಾರಣ ಏನು ಹೇಗೆ ಎಂದು ತನಿಖೆ ನಡೆಸಲು ಪೋಲಿಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿರುತ್ತಾರೆ.
ಗ್ರಾಮದ ರೈತ ಸಂಘದ ಮುಖಂಡ ಪ್ರಭಾಕರಗೌಡ ಹೇಳುವಂತೆ ಪಂಚಾಯಿತಿ ಆಡಳಿತ ಕಚೇರಿಯನ್ನು ಸಮುಧಾಯ ಭವನಕ್ಕೆ ಬದಾಯಿಸಿರುವುದನ್ನು ಸಹಿಸದ ಕೆಲ ದುಷ್ಕರ್ಮಿಗಳು ಕಡತಗಳಿಗೆ ಬೆಂಕಿ ಹಚ್ಚುವ ಮೂಲಕ ಸೇಡು ತಿರಿಸಿಕೊಂಡಿದ್ದಾರೆ ಎಂದು ಆರೋಪಿಸಿರುತ್ತಾರೆ.
ಚ.ಶ್ರೀನಿವಾಸಮೂರ್ತಿ