ಕಣ್ಣೆ ಅದರಿಂದಿ, ಕಣ್ಣು ಹೊಡೆಯಾಕ ಎಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಹಾಗು ಲಂಬಾಣಿ ಭಾಷೆಯ ಹಾಡುಗಳೊಂದಿಗೆ ಮಸ್ಕಿ ಬೈ ಎಲೆಕ್ಷನ್ ಅಖಾಡದಲ್ಲಿ ತೆಲುಗು ಜನಪದ ಗಾಯಕಿ ಸತ್ಯವತಿ ರಾಥೋಡ್@ ಮಂಗ್ಲಿ ತಾಂಡಾಗಳಲ್ಲಿರುವ ಮತದಾರರನ್ನು ತಮ್ಮ ಪುಷ್ಕಳ ನಗುವಿನಿಂದ ಸೆಳೆಯುವ ಯತ್ನ ಮಾಡಿದರು.
ನ್ಯೂಜ್ ಡೆಸ್ಕ್:- ಯಡಿಯೂರಪ್ಪ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರತಾಪಗೌಡ ಪಾಟೀಲರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭೆ ಉಪಚುನಾವಣೆಯು ಇದೇ ಏಪ್ರಿಲ್ 17 ರಂದು ನಡೆಯಲಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ನಾನಾ ರಿತಿಯಲ್ಲಿ ಬಿಜೆಪಿ ಪ್ರಚಾರ ಕೈಗೊಂಡಿದೆ ಇದರ ಅಂಗವಾಗಿ ಮತ ಬೇಟೆಗಾಗಿ ಬಿಜೆಪಿ ತೆಲಗಿನ ಜಾನಪದ ಗಾಯಿಕಿ ಲಂಬಾಣಿ ಜನಾಂಗದ ಹಾಡುಗಾರ್ತಿ ಕಣ್ಣೆಅದಿರಿಂದಿ ಹಾಗು ರಾಮುಲೋ ರಾಮುಲ ಹಾಡುಗಳ ಖ್ಯಾತಿಯ ಗಾಯಕಿ ಮಂಗ್ಲಿಯನ್ನು ಕರೆಸಿ ರೋಡ್ ಶೋ ಮಾಡಿಸಿದೆ.
ಅಲ್ಪ ಸಮಯದಲ್ಲಿ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಸತ್ಯವತಿ ರಾಥೋಡ್@ಮಂಗ್ಲಿ, ಈಗ ಕನ್ನಡಿಗರ ಫೆವರೇಟ್ ಹಾಟ್ ಗಾಯಕಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಕನ್ನಡಿಗರು ಮಂಗ್ಲಿಯ ಫಾಲೋವರ್ ಆಗಿರುವುದು ವಿಶೇಷ. ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗ್ಲಿ ನನಗೆ ಕನ್ನಡ ಬರುವುದಿಲ್ಲ ಆದರೆ ಭಾಷೆ ಸರಳವಾಗಿರುವದರಿಂದ ಕಲಿಯುತ್ತೇನೆ ಎಂದು ಹೇಳುತ್ತಾ ಪ್ರತಾಪಗೌಡ ಪಾಟೀಲರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಏಪ್ರಿಲ್ 17 ರಂದು ನಡೆಯುವ ರಾಯಚೂರು ಜಿಲ್ಲೆಯ ಮಸ್ಕಿ ಬೈ ಎಲೆಕ್ಷನ್ ನ ಬಹಿರಂಗ ಪ್ರಚಾರಕ್ಕೆ ಎರಡು ದಿನ ಮಾತ್ರ ಅವಕಾಶವಿದ್ದು ತೆಲುಗು-ಲಂಬಾಣಿ ಭಾಷೆಯ ಜನಪದ ಹಾಡುಗಾರ್ತಿಯಾಗಿರುವ ಕಂಚಿನ ಕಂಠದ ಮಂಗ್ಲಿಯನ್ನು ಮಸ್ಕಿಗೆ ಕರೆಸಿ ಕ್ಷೇತ್ರದಲ್ಲಿರುವ 30 ಲಂಬಾಣಿ ತಾಂಡಾಗಳಲ್ಲಿ ಲಾಕಡೌನ್ ಭೀತಿಯಿಂದ ಬೆಂಗಳೂರು ಹಾಗು ಮುಂಬೈ ನಿಂದ ಜನ ಮರಳಿ ಬಂದಿರುತ್ತಾರೆ ಜೊತೆಗೆ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಜನರ ಮಧ್ಯೆ ದೊಡ್ಟ ತಾಂಡಾಗಳಾದ ಹಡಗಲಿ ಹಾಗು ಅಡವಿಬಾವಿ ತಾಂಡಾಗಳಲ್ಲಿ ಲಂಬಾಣಿ ಜನಾಂಗದ ಗಾಯಕಿ ಮೂಲಕ ಮತಯಾಚಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಉಮೇಶ ಜಾದವ ಸೇರಿದಂತೆ ಲಂಬಾಣಿ ಜನಾಂಗದ ಮುಖಂಡರು ಭಾಗವಹಿಸಿದ್ದರು.ಮಂಗ್ಲಿ ನೋಡಲು ಜನವೊ ಜನ ಮುಗಿ ಬಿಳುತ್ತಿದ್ದರು ಜೊತೆಗೆ ಅಭಿಮಾನಿಗಳ ಸೆಲ್ಫಿ.ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕಾದ ಕಾರ್ಯಕ್ರಮದಲ್ಲಿ ಕೊರೊನಾವನ್ನು ಜನರು ಮರೆತೇ ಹೋಗಿದ್ದರು. ಗಾಯಕಿ ಅರಂಭದಲ್ಲಿ ಮಾಸ್ಕ್ ಹಾಕಿಕೊಂಡಿದ್ದರಾದರೂ ಜನಸಂದಣಿಯಲ್ಲಿ ಎಲ್ಲವನ್ನು ಮರೆತೆ ಹೋಗಿದ್ದರು. ಕೊವಿಡ್ ನಿಯಮಾವಳಿ ಪಾಲಿಸಲಿಲ್ಲ.
ಚುನಾವಣೆ ಪ್ರಚಾರದ ಗಂಭೀರತೆ ಇಲ್ಲದೆ ಸಿನಿಮಾ ಪ್ರಮೋಷನ್ ಸಭೆಯಂತೆ ಇತ್ತು ಮಂಗ್ಲಿ ಮಾತುಗಳಿಗಿಂತ ಪುಷ್ಕಳವಾದ ನಗು ಹೈಲೈಟ್ ಆಗಿತ್ತಂತೆ.