ಶ್ರೀನಿವಾಸಪುರ: ಅಂಬೇಡ್ಕರ್ ಜಯಂತಿ ಪೂರ್ವಬಾವಿ ಸಭೆಯ ನಿರ್ಣಯದಂತೆ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾಲೂಕು ಅಡಳಿತ ಭೂಮಿ ಪೂಜೆ ನೆರವೇರಿಸಲಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಕಪ್ಪುಪಟ್ಟಿ ಧರಿಸಿ ತಾಲ್ಲೂಕು ಆಡಳಿತಕ್ಕೆ ದಿಕ್ಕಾರಗಳನ್ನು ಕೂಗಿ ತಹಶೀಲ್ದಾರ್ ಕಚೇರಿ ಮುಂಬಾದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ರವರ 130ನೇ ಜಯಂತಿ ಆಚರಿಸುವ ಸಂಬದ ತಹಸೀಲ್ದಾರ್ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ತಾಲೂಕಿನ ದಲಿತ ಮುಖಂಡರು ನೀಡಿದ ಸಲಹೆಯಂತೆ ಡಿಗ್ರಿ ಹಾಸ್ಟೆಲ್ ಪಕ್ಕದಲ್ಲಿ ಮೀಸಲಿಟ್ಟಿರುವ ಸ್ಥಳದಲ್ಲಿ ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಬೇಕೆಂದು ತಿರ್ಮಾನಿಸಲಾಗಿತ್ತು ಇದಕ್ಕೆ ತಹಶೀಲ್ದಾರ್ ಮಾತನ್ನು ನೀಡಿದ್ದರು.
ಅದರೆ ಇಂದು ಭವನ ನಿರ್ಮಾಣ ಕಾರ್ಯ ಕುರಿತಾಗಿ ಯಾವುದೆ ಪ್ರಸ್ತಾವನೆ ಇಲ್ಲದೆ ತಹಸೀಲ್ದಾರ್,ಸೇರಿದಂತೆ ತಾಲೂಕು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲ್ಲೂಕು ದಲಿತ ಸಂಘಟನೆಗಳ ಮುಖಂಡರು ತಾಲ್ಲೂಕು ಆಡಳಿತಕ್ಕೆ ದಿಕ್ಕಾರಗಳನ್ನು ಕೂಗಿ ಕಪ್ಪುಬಟ್ಟೆ ಪ್ರದರ್ಶಿಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ನ್ಯಾಯ ಒದಗಿಸಬೇಕು ಸಾದ್ಯವಾಗದೆ ಹೋದರೆ ಜಯಂತಿ ಆಚರಿಸಲು ತಾಲೂಕು ಆಡಳಿತಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆಕಾರರು ಪಟ್ಟುಬಿಡದೆ ಕುಳತಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ದಲಿತ ಮುಖಂಡ ಎಂ. ಶ್ರೀನಿವಾಸನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ 30 ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣದ ಕಡತ ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ಹಾಗು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ನಡುವೆ ತಿರುಗಾಡುವುದರಲ್ಲೆ ಕಾಲ ಕಳೆಯುತ್ತಿದೆ, ಇದಕ್ಕೆ ಪ್ರಮುಖ ಕಾರಣ ಅಧಿಕಾರಿಗಳಿಗೆ ಇಚ್ಚಾಶಕ್ತಿ ಇಲ್ಲದಿರುವುದು ಎಂದರು ತಹಸಿಲ್ದಾರ್ ಸೇರಿದಂತೆ ಇಲ್ಲಿನ ಆಡಳಿತ ವರ್ಗ ಸಬೂಬು ಹೇಳಿಕೊಂಡೆ ಕಾಲಹರಣ ಮಾಡುತ್ತಿದ್ದಾರೆ. ಇವರಿಂದ ನ್ಯಾಯ ಸಿಗುವುದಿಲ್ಲ, ಕೂಡಲೆ ಜಿಲ್ಲಾಧಿಕಾರಿಗಳು ಆಗಮಿಸಬೇಕು, ನಮ್ಮ ಕೆಲಸ ಆಗಲೆ ಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ತಹಸೀಲ್ದಾರ್ ಶ್ರೀನಿವಾಸ್, ಜಿಲ್ಲಾಧಿಕಾರಿಗಳ ಪರವಾಗಿ ನಾನು ಕೆಲಸ ಮಾಡುತ್ತಿದ್ದೇನೆ, ಮುಂದಿನ ತಿಂಗಳ ಮೊದಲ ವಾರದೊಳಗಡೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದಾಗ, ನಿಮ್ಮ ಮೇಲೆ ನಮಗೆ ನಂಬಿಕೆ ಇಲ್ಲ, ಜಿಲ್ಲಾಧಿಕಾರಿಗಳಿಗೆ ನಮ್ಮ ಪ್ರತಿಭಟನೆಯ ಬೇಡಿಕೆಯ ಸಂದೇಶ ಕೂಡಲೆ ತಿಳಸಬೇಕು ಎಂದು ಒತ್ತಾಯಿಸಿದರು ಜಿಲ್ಲಾಧಿಕಾರಿಗಳಿಗೆ ನಿಮ್ಮ ಸಂದೇಶ ತಿಳಿಸುವುದಿಲ್ಲ, ನನ್ನ ಹಂತದಲ್ಲೇ ಭಗೆಹರಿಸುತ್ತೇನೆ ಎಂದಾಗ, ಶ್ರೀನಿವಾಸನ್ ಮತ್ತು ಇತರೆ ದಲಿತ ಮುಖಂಡರು ತಹಶೀಲ್ದಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು ನಂತರ ಸಿ.ಪಿ.ಐ. ರವಿಕುಮಾರ್ ಸಲಹೆಯಂತೆ ತಹಶೀಲ್ದಾರ್ ಶ್ರೀನಿವಾಸ್ ಪ್ರತಿಭಟನಾಕಾರರ ಸಮ್ಮಖದಲ್ಲಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಜಿಲ್ಲಾಧಿಕಾರಿಗಳು ದೂರವಾಣಿಯಲ್ಲೇ ಉತ್ತರಿಸಿ ನಿಮ್ಮ ಎಲ್ಲರ ಬೇಡಿಕೆಯಂತೆ ಅಂಬೇಡ್ಕರ್ ಭವನ ನಿರ್ಮಾಣದ ಕಡತವನ್ನು ಪರಿಶೀಲಿಸಿ ಕಡತಕ್ಕೆ ಸಹಿಯನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಉಪ್ಪರಪಲ್ಲಿ ತಿಮ್ಮಯ್ಯ, ಆವಲಕುಪ್ಪ ಹನುಮಂತಪ್ಪ, ಪೆದ್ದಪಲ್ಲಿ ಈರಪ್ಪ, ಮಟ್ಟಕನಸಂದ್ರ ನಾರಾಯಣಸ್ವಾಮಿ, ಚಲ್ದಿಗಾನಹಳ್ಳಿ ಈರಪ್ಪ, ಕೂಸಂದ್ರ ರೆಡ್ಡೆಪ್ಪ ಕೊರ್ನಹಳ್ಳಿ ನಾರಾಯಣಸ್ವಾಮಿ, ರಾಮಾಂಜನಮ್ಮ, ವರ್ತನಹಳ್ಳಿ ವೆಂಕಟೇಶ್, ವಕೀಲ ನಾಗರಾಜ್ ಮತ್ತಿತರರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Sunday, November 24