- ಪಟ್ಟಣದಲ್ಲಿ ರೌಂಡ್ಸ್ ಮಾಡಿದ ಡಿಸಿ
- ವ್ಯಾಪರಸ್ಥ ಮಾಸ್ಕ್ ಹಾಕಿಕೊಂಡು ವ್ಯಾಪಾರ ನಡಸಬೇಕು
- ನಿಯಮ ಉಲ್ಲಂಘಿಸಿದರ ವಿರುದ್ದ ಫೈನ್
- ಕೋವಿಡ್ ಕೇಂದ್ರದಲ್ಲಿ ವಿಕೃತಿಯಾಗಿ ವರ್ತಿಸಿದರೆ ಕೇಸ್
ಶ್ರೀನಿವಾಸಪುರ:- ಕೊರೋನಾ ನಿರ್ಲಕ್ಷ್ಯ ಮಾಡದೆ ನಿಯಮಾವಳಿಗಳನ್ನು ಪಾಲಿಸಿ ಮಾಸ್ಕ ದರಿಸಿ ಅರೋಗ್ಯದ ಬಗ್ಗೆ ಗಮನ ನೀಡಿ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದರು ಅವರು ಸಿಟಿ ರೌಂಡ್ಸ್ ಮಾಡಿ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ತಿಳುವಳಿಕೆ ಮೂಡಿಸಿದ ಅವರು ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ಮಾಡುವವರ ವಿರುದ್ದ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು ನಂತರ ತಾಲೂಕು ಆಡಳಿತಕ್ಕೆ ಸೂಚಿಸಿದ ಅವರು. ಮಾಸ್ಕ್ ದರಿಸದೆ ಒಡಾಡುವಂತವರಿಗೆ ದಂಡ ವಿದಿಸಿ ಅಗತ್ಯ ಬಿದ್ದರೆ ಕ್ರಮಕೈಗೊಳ್ಳಿ ಎಂದರು ಪಟ್ಟಣದ ಬಸ್ ನಿಲ್ದಾಣ,ರಾಮಕೃಷ್ಣಾರಸ್ತೆ, ಪೊಸ್ಟ್ ಆಫಿಸ್ ರಸ್ತೆ ಇಂದಿರಾಭನವನ್ ವೃತ್ತ ಮುಂತಾದ ಕಡೆ ಸಂಚರಿಸಿದ ಜಿಲ್ಲಾಧಿಕಾರಿ ವ್ಯಾಪಾರಸ್ಥರು ಮೊದಲು ಮಾಸ್ಕ್ ದರಿಸಬೇಕು ನಂತರ ವ್ಯಾಪಾರ ಮಾಡಬೇಕು ವ್ಯಾಪರಸ್ಥರು ಕೋವಿಡ್ ನಿಯಮಾವಳಿ ಉಲ್ಲಂಘಿಸಿದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಕೆಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಸ್ ನಿಲ್ದಾಣದ ಬಳಿ ಪುರಸಭೆ ಮಳಿಗೆಯಲ್ಲಿರುವ ಬಿಸ್ಮಿಲ್ಲಾ ಹೋಟೆಲ್ ಮಾಲಿಕ ಮಾಸ್ಕ್ ದರಿಸದೆ ವ್ಯಾಪಾರ ಮಾಡುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಭೇಟಿ ಇತ್ತಾಗಲು ಮಾಸ್ಕ್ ದರಿಸಿರಲಿಲ್ಲ ಇದಕ್ಕೆ ಜಿಲ್ಲಾಧಿಕಾರಿಗಳು ಸೂಚಿಸಿದರು ವಿತಂಡ ವಾದ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪುರಸಭೆಯವರು ಹೋಟೆಲ್ ಮಾಲಿಕನಿಂದ ದಂಡ ವಸೂಲಿ ಮಾಡಿದರು.
ಕೋವಿಡ್ ಕೇಂದ್ರದಲ್ಲಿ ಅತಿಯಾಗಿ ವರ್ತಿಸುವರ ವಿರುದ್ದ ಕ್ರಮ ಜರುಗಿಸಿ ಜಿಲ್ಲಾಧಿಕಾರಿ