ಶ್ರೀನಿವಾಸಪುರ:-ತಾಲೂನಲ್ಲಿ ಕೊರೋನಾ ಅಟ್ಟಹಾಸ ಮೆರದಿದ್ದು ಗುರುವಾರ ಒಂದೇ ದಿನ 90 ಕೇಸುಗಳು ದಾಖಲಾಗಿದೆ ನೆಲವಂಕಿ ಹೋಬಳಿ ಕೆ.ಗೊಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 08 ಪಾಸಿಟಿವ್ ಕೇಸುಗಳು ಬಂದಿದೆ ಎನ್್ನಲಾಗಿದೆ . ಅಡ್ಡಗಲ್. ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಗ್ರಾಮದಲ್ಲಿ ಎಲ್ಲರನ್ನು ಪರಿಕ್ಷೇಗೆ ಒಳಪಡಿಸಿದ್ದು ಸ್ವ್ಯಾಬ್ ಸಂಗ್ರಹ ಮಾಡಿರುತ್ತಾರೆ ಸೋಂಕಿತರಿಗೆ ಹೋಂ ಕ್ವಾರಂಟೈನ್ ಮಾಡಿಸಿದ್ದು, ಪಂಚಾಯಿತಿ ವತಿಯಿಂದ ಸ್ಯಾನಿಟರೈಜ್ ಮಾಡಿಸಿದ್ದು ಹೊರಗಿನವರು ಊರಿಗೆ ಬಾರದಂತೆ ನಿರ್ಭಂದ ವಿಧಿಸಲಾಗಿ ಕಂಟೈನ್ಮೈಂಟ್ ಪ್ರದೇಶ ಎಂದು ಘೋಷಿಸಿ ಗ್ರಾಮದಲ್ಲಿ ಅವಶ್ಯಕತೆ ಇರುವ ಮುಂಜಾಗ್ರತೆ ತಗೆದುಕೊಂಡಿರುವುದಾಗಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗೌಸ್ ತಿಳಿಸಿರುತ್ತಾರೆ.
ಬೆಂಗಳೂರು,ಕೋಲಾರ ಎ.ಪಿ.ಎಂ.ಸಿ ,ಆಂಧ್ರದ ಮದನಪಲ್ಲಿ,ಪುಂಗನೂರು,ಸಂಪರ್ಕದಿಂದ ವಿಶೇಷವಾಗಿ ಹಳ್ಳಿ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಇಲ್ಲಿನ ಜನತೆ.
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 40 ಹಾಸಿಗೆಗಳ ಕೋವಿಡ್ ಕೇಂದ್ರ ಇದ್ದು ಅಲ್ಲಿ 40 ಸಿಂಟಮ್ಯಾಟಿಕ್ ಪಾಸಿಟಿವ್ ರೋಗಿಗಳೇ ಇದ್ದು ಅಲ್ಲಿಗೆ ಬಹುತೇಕ ಬರ್ತಿ ಆದ ಹಾಗೆ.
ಕೋಲಾರ ಜಿಲ್ಲೆಯಲ್ಲಿಂದು ಅರ್ದ ಸಾವಿರ ಪಾಸಿಟಿವ್ ಕೇಸುಗಳು ದಾಖಲಾಗಿದ್ದು ಅದರಲ್ಲಿ ಕೋಲಾರದಲ್ಲಿ ಮಾತ್ರ 121 ಮಾಲೂರಲ್ಲಿ 131 ಬಂಗಾರಪೇಟ್ ನಲ್ಲಿ 49 ಕೆ.ಜಿ.ಎಫ್ 111 ಮುಳಬಾಗಿಲಿನಲ್ಲಿ 85 ಶ್ರೀನಿವಾಸಪುರದಲ್ಲಿ 90 ಸೋಂಕಿತರ ಕೇಸುಗಳು ದಾಖಲಾಗಿದೆ ಇಂದು ಇಬ್ಬರು ಮೃತಪಟ್ಟಿದ್ದು ಜಿಲ್ಲೆಯಲ್ಲಿ ಇದುವರಿಗೂ 192 ಸತ್ತಿರುತ್ತಾರೆ.
ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಿ ಅವಶ್ಯ ಇದ್ದರಷ್ಟೆ ಮನೆಯಿಂದ ಹೋರಗೆ ಬನ್ನಿ ಮನೆಯಿಂದ ಹೋರಗೆ ಬರುವಾಗ ತಪ್ಪದೆ ಮಾಸ್ಕ್ ಧರಿಸಿ ಬನ್ನಿ.
ಸಾರ್ವಜನಿಕ ಪ್ರದೇಶದಲ್ಲಿ ಸಾಮಾಜಿಕ ಅಂತರ ಪಾಲಿಸಿ