- ಬಯಲು ಸೀಮೆಗೆ ವರವಾಗಬೇಕಿದ್ದ ಮಳೆ ಮಾರಕವಾಗಿದೆ
- ಮಳೆಯ ಅಬ್ಬರಕ್ಕೆ ತೋಟಗಾರಿಕೆ ಬೆಳೆಗಳು ನೆಲಸಮ
- ಬೆಟ್ಟದ ಕಲ್ಲಿನ ಗಾತ್ರದ ಆಲಿಕಲ್ಲು ನೆಲಕಚ್ಚಿದ ಪಾಲಿಹೌಸುಗಳು
- ಬಾರಿ ಗಾತ್ರದ ಅಲಿಕಲ್ಲಿ ಮಾನವನ ಮೇಲೆ ಬಿದಿದ್ದರೆ?
ಚಿಕ್ಕಬಳ್ಳಾಪುರ:-ಬಯಲುಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ಬಿದ್ದ ಮಳೆಗೆ ತೋಟಗಾರಿಕೆ ರೈತರ ಕೃಷಿ ಸಂಪೂರ್ಣ ನಾಶವಾಗಿದೆ ಕೋಟ್ಯಂತರ ಮೌಲ್ಯದ ಬೆಳೆಗಳು ನೆಲಕಚ್ಚಿದೆ ಬೆಟ್ಟದ ಕಲ್ಲಿನ ಗಾತ್ರದ ಆಲಿಕಲ್ಲು ಬಿದ್ದು ಪಾಲಿಹೌಸ್, ದಾಳಿಂಬೆ, ದ್ರಾಕ್ಷಿ, ನರ್ಸರಿ ತೋಟಗಳು ನೆಲಸಮವಾಗಿವೆ. ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ, ಗೌಡಗೆರೆ ಸುತ್ತಮುತ್ತ ಗ್ರಾಮ ಸುತ್ತಮುತ್ತ ಗುಡುಗು ಸಮೇತ ಸುರಿದ ಮಳೆ ಮತ್ತು ಬೆಟ್ಟದ ಕಲ್ಲುಗಳ ಗಾತ್ರದ ಆಲಿ ಕಲ್ಲು ಬಿದ್ದಿದ್ದು, ಪ್ರತಿ ಕಲ್ಲು ಅಂದಾಜು 30 ರಿಂದ 40 ಕೆ.ಜಿ.ಯಷ್ಟು ತೂಕದ್ದಾಗಿವೆ.ದೊಡ್ಡ ಗಾತ್ರದ ಆಲಿಕಲ್ಲು ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರಂತೆ.
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ರೈತರು ಲಕ್ಷಾಂತರ ಖರ್ಚು ಮಾಡಿ ಶುರುಮಾಡಿದ್ದ ದಾಳಿಂಬೆ ಕೃಷಿ ಮಣ್ಣುಪಾಲಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.ಕೆಲವು ದಾಳಿಂಬೆ ತೋಟಗಳಲ್ಲಿ ಇತ್ತಿಚಿಗಷ್ಟೆ ಹೂವು ಕಾಣಿಸಿಕೊಂಡಿತ್ತು. ಆಲಿಕಲ್ಲಿನ ಮಳೆಯಿಂದ ಹೂವು ಸಂಪೂರ್ಣ ಉದುರಿ ಹೋಗಿವೆ.ನರ್ಸರಿಗಳ ಪರಿಸ್ಥಿತಿ ಇದಕ್ಕೆ ಹೋರತಾಗಿಲ್ಲ ಜೀವ ಮಾನದಲ್ಲಿ ಇಷ್ಟು ಗಾತ್ರದ ಆಲಿ ಕಲ್ಲು ಮಳೆ ನಾವು ಕಂಡಿಲ್ಲ ಎನ್ನುತ್ತಾರೆ ರೈತಾಪಿ ಜನ ಮಳೆ ಬಂದರೆ ಸಂತೋಷ. ಆದರೆ, ಬೇಸಿಗೆಯ ಮೊದಲ ಮಳೆಯೇ ಈ ರೀತಿಯ ಹೊಡೆತ ನೀಡಿದರೆ ರೈತರು ಗಡ್ಡೆಗೆ ಹತ್ತುವುದಾದರೂ ಹೇಗೆ ಎನ್ನುತ್ತಾರೆ. ಕೊರೋನಾ ಕರ್ಫೂ ಲಾಕ್ಡೌನ್ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ರೈತರ ಬದಕು ಬೀದಿಗೆ ತಂದಿದೆ ಎಂದು ಬಶೆಟ್ಟಿಹಳ್ಳಿಯ ರೈತರೊಬ್ಬರು ಅಲವತ್ತುಕೊಳ್ಳುತ್ತಾರೆ.
ಇದೀಗ ಮೊದಲ ಮಳೆಯಲ್ಲಿ ಆಲಿಕಲ್ಲು ಬಿದ್ದು ಕೆಲವು ರೈತರನ್ನೇ,ಆಲಿಕಲ್ಲಿನಿಂದ ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಕಟ್ಟಿಕೊಡಬೇಡು. ಜಿಲ್ಲಾಡಳಿತ ರೈತರ ಸಹಾಯಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಸಿಡಿಲು ಬಡಿದು ಇಡಿ ಕುಟುಂಬ ಗಾಯಗೊಂಡಿರುತ್ತಾರೆ.
ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಸಿಡಿಲು ಬಡಿದು ಮನೆಯ ತಾರಸಿ ಕುಸಿದು ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡಿದ್ದಾರೆ. ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂತೂ ಮುಂಗಾರು ಆರಂಭಕ್ಕೂ ಮೊದಲೇ ಬೇಸಿಗೆ ಮಳೆ ಅಬ್ಬರಿಸಿದ್ದು, ಮಳೆ ಆಶ್ರಿತ ರೈತರಲ್ಲಿ ಸಂತಸ ಮನೆ ಮಾಡಿಸಿದೆ. ಆದರೆ, ಬೋರ್ ವೆಲ್ ನಂಬಿ ಲಕ್ಷಾಂತರ ಸುರಿದು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದ ರೈತರ ಪಾಲಿಗೆ ಆಲಿಕಲ್ಲು ಮಳೆ ಮಾರಕವಾಗಿದೆ.