ನ್ಯೂಜ್ ಡೆಸ್ಕ್: ಲಾಕ್ಡೌನ್ ಪ್ರಕಟಣೆಗೂ ಮುಂಚಿತವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಕೊರೋನಾ ಸಂಕಷ್ಟ ನಿವಾರಣೆ ಪ್ರಾರ್ಥಿಸಿ ಬೆಂಗಳೂರು ನಗರ ದೇವತೆ ಅಣ್ಣಮ್ಮದೇವಿಗೆ ಹಾಲು-ಮೊಸರು ಎರೆದು ಪೂಜೆ ಸಲ್ಲಿಸಿರುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇರವಾಗಿ ದೇವಾಲಯಕ್ಕೆ ತೆರಳಿ ಅಲ್ಲಿರುವ ನಂಬಿಕೆ ಮೂರ್ತಿಗಳಿಗೆ ಹಾಲು-ಮೊಸರು ಎರೆದ ಅವರು ನಂತರ ಅಣ್ಣಮ್ಮನ ಮೂರ್ತಿಗೆ ಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿರುತ್ತಾರೆ.ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವೆ ಕೆಲವು ಅಧಿಕಾರಿಗಳು ಹಾಗು ಕೋಲಾರದ ಅಣ್ಣಮ್ಮನ ಪರಮ ಭಕ್ತ ಬಿಜೆಪಿ ಸ್ಲಂ ಮೊರ್ಚಾ ಕಾರ್ಯದರ್ಶಿ ಹಾಗು ಅರಣ್ಯ ನಿಗಮದ ನಿರ್ದೇಶಕ ರಾಜೇಂದ್ರ ಮಾತ್ರ ಇದ್ದರು.ಪೂಜೆ ಸಲ್ಲಿಸಿದ ಮುಖ್ಯಂತ್ರಿಗಳಿಗೆ ರಾಜೇಂದ್ರ ತಿಲಕ ಇಟ್ಟು ಗೌರವಿಸಿರುತ್ತಾರೆ.
ಹಾಲು-ಮೊಸರು ನಂಬಿಕೆ
ಗ್ರಾಮೀಣ ಭಾಗದಲ್ಲಿ ಮನೆಯ ಮಕ್ಕಳಿಗೆ ಅಮ್ಮ ಹಟ್ಟಿರುವುದು,ಕ್ಷಯ ಇತರೆ ಸೋಂಕಿನ ರೋಗಗಳು ಬಂದಾಗ ತಾಯಂದರೂ ಗ್ರಾಮ ದೇವತೆಗೆ ಹಾಲು-ಮೊಸರು ಎರೆದು ಬೆವಿನ ಸೋಪ್ಪು ಅರ್ಪಿಸುವುದು ಈಗಲೂ ನಂಬಿಕೆಯಾಗಿ ನಡೆದುಕೊಂಡು ಬರುತ್ತಿದೆ.
ಅದರಂತೆ ಭೂಮಿ ಮೇಲೆ ಮಹಾಮಾರಿಯಾಗಿ ಕಾಡುತ್ತಿರುವ ಸೋಂಕಿನ ರೋಗ ಕೊರೋನಾ ತಡೆಯಲು ನಗರದೇವತೆ ಅಣ್ಣಮ್ಮದೇವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮೋರೆ ಹೋಗಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಪತ್ನಿ ಜೊತೆಗೂಡಿ ಅಣ್ಣಮ್ಮದೇವಿಗೆ ಪೂಜೆ ಸಲ್ಲಿಸಿದ್ದರು.