- ನಂದಮೂರಿ ಬಾಲಕೃಷ್ಣ ಆಂಧ್ರ ಹಿಂದೂಪುರದ ಶಾಸಕ
- ಕ್ಷೇತ್ರದ ಜನರಿಗೆ ನೆರವು ನೀಡಿದ ನಂದಮೂರಿ ಬಾಲಕೃಷ್ಣ
- 20 ಲಕ್ಷ ರೂಪಾಯಿ ಮೌಲ್ಯದ ಔಷಧಿಗಳ ಕೊಡುಗೆ.
ನ್ಯೂಜ್ ಡೆಸ್ಕ್:-ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದ ಭಾರತದಲ್ಲಿ ಮತ್ತೊಮ್ಮೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಪ್ರತಿ ದಿನ ಹೆಚ್ಚು ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಉಂಟಾಗಿದ್ದು, ಚಿಕಿತ್ಸೆ ಸಿಗದೆ ಸೋಂಕಿತರು ಒದ್ದಾಡುತ್ತಿದ್ದಾರೆ. ಇಂತಹ ಕರಾಳ ಪರಿಸ್ಥಿತಿಯಲ್ಲಿ ಜನರ ಪರ ಸಹಾಯ ಮಾಡಲು ಅನೇಕ ಸೆಲೆಬ್ರಿಟಿಗಳು ಮುಂದೆ ಬಂದಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಸೇರಿದಂತೆ ಹಲವು ಕಲಾವಿದರು ಜನರ ಜೀವ ಉಳಿಸಲು ಮುಂದಾಗಿದ್ದಾರೆ. ಕೆಲವರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಇದೀಗ ಟಾಲಿವುಡ್ ನಟ ‘ಲೆಜೆಂಡ್’ ಬಾಲಕೃಷ್ಣ ಕೂಡ ಜನರಿಗೆ ಸಹಾಯ ಮಾಡಿದ್ದಾರೆ.
ತೆಲುಗಿನ ನಟ ನಂದಮೂರಿ ನಟ ಸಿಂಹ ಬಾಲಕೃಷ್ಣ ರಾಜಕಾರಣಿಯೂ ಆಗಿದ್ದು.ಆಂಧ್ರ ಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕರಾಗಿರುವ ಬಾಲಕೃಷ್ಣ ಇದೀಗ ತಮ್ಮ ಕ್ಷೇತ್ರದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಹಿಂದೂಪುರ ಕ್ಷೇತ್ರದ ಜನರಿಗೆ ನಂದಮೂರಿ ಬಾಲಕೃಷ್ಣ 20 ಲಕ್ಷ ರೂಪಾಯಿ ಮೌಲ್ಯದ ಕೊರೋನಾ ನಿವಾರಣ ರೋಗ ನಿರೋಧಕ ಔಷಧಿಗಳನ್ನು ನೀಡಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಔಷಧಿ ಕಿಟ್ಗಳನ್ನು ನಂದಮೂರಿ ಬಾಲಕೃಷ್ಣ ಬೆಂಬಲಿಗರು ಹಾಗೂ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ವಿತರಿಸಿದ್ದಾರೆ.
ಬಾಲಕೃಷ್ಣ ತಮ್ಮ ತಾಯಿ ಬಸವತಾರಕಂ ಅವರ ಹೆಸರಿನಲ್ಲಿ ಹೈದಾರಾಬಾದ್ ಮತ್ತು ವಿಜಯವಾಡದಲ್ಲಿ ಬಸವತಾರಕಂ ಇಂಡೋ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆ ನಿರ್ವಹಣೆ ಮಾಡುತ್ತಿದ್ದಾರೆ.
ಅಂದ್ಹಾಗೆ, ಬೋಯಪಾಟಿ ಶ್ರೀನು ನಿರ್ದೇಶನದ ‘ಅಖಂಡ’ ಚಿತ್ರದಲ್ಲಿ ನಟ ನಂದಮೂರಿ ಬಾಲಕೃಷ್ಣ ನಟಿಸಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ ಈ ತಿಂಗಳು ‘ಅಖಂಡ’ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆಯ ಕಾರಣದಿಂದ ‘ಅಖಂಡ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.